ಮೈಸೂರು: ಆರ್ ಟಿಐ ಕಾರ್ಯಕರ್ತ ಶ್ರೀನಾಥ್ ಹತ್ಯೆ ಪ್ರಕರಣಕ್ಕೆ ಸಂಬಂದಿಸಿದಂತೆ ಇಬ್ಬರು ಆರೋಪಿಗಳನ್ನ ಬಂಧಿಸುವಲ್ಲಿ ಸರಸ್ವತಿಪುರಂ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ರಾಜ ರಾಜೇಶ್ವರಿ ನಗರದ ಪುಟ್ಟಸ್ವಾಮಿ, ಪಾಂಡವಪುರದ ಚೆಲುವಸ್ವಾಮಿ ಎನ್ನಲಾಗಿದ್ದು ಆರ್ ಟಿಐ ಕಾರ್ಯಕರ್ತ ಶ್ರೀನಾಥ್ ಬೆಎಂಎಲ್ ಹೌಸಿಂಗ್ ಸೋಸೈಟಿಯ ಲೋಕೆಶ್ ಎಂಬುವವರಿಂದ ಲಕ್ಷಾಂತರ ರೂಪಾಯಿ ಸಾಲ ಪಡೆದಿದ್ದು, ಸಾಲ ಕೇಳಿದಾಗ ಕೊಲೆಯಾದ ಆರ್ ಟಿಐ ಕಾರ್ಯಕರ್ತ ಶ್ರೀನಾಥ್, ಲೋಕೇಶ್ ಗೆ ಸಾಲ ವಾಪಸ್ಸು ಕೊಡುವುದಿಲ್ಲ ಏನು ಬೇಕಾದರೂ ಮಾಡಿಕೊ ಎಂದು ಅವಾಜ್ ಹಾಕಿದ.
ಇದನ್ನು ಲೋಕೇಶ್ ತನ್ನ ಸ್ನೇಹಿತರಾದ ಬಂಧಿತ ಪುಟ್ಟಸ್ವಾಮಿ, ಚೆಲುವಸ್ವಾಮಿಗೆ ಹೇಳಿದ್ದ. ಬಂಧಿತರು ಕೊಲೆ ಸಂಚು ರೂಪಿಸಿ ಅದರಂತೆ ರಾಜರಾಜೇಶ್ವರಿ ನಗರದ ನಿರ್ಮಾಣ ಹಂತದ ಕಟ್ಟಡಕ್ಕೆ ಆರ್ ಟಿಐ ಕಾರ್ಯಕರ್ತ ಶ್ರೀನಾಥ್ ಕರೆದುಕೊಂಡು ಹೋಗಿ ಹಲ್ಲೆ ಮಾಡಿ ಹತ್ಯೆಗೈದು ಕಾರಿನಲ್ಲಿ ಶ್ರೀರಂಗಪಟ್ಟಣದ ನಿಮಿಷಾಂಭ ದೇವಸ್ಥಾನದ ಬಳಿಯ ಕಾವೇರಿ ನದಿಯಲ್ಲಿ ಬಿಸಾಕಿ ಬಂದಿದ್ದರು.
ಈ ಸಂಬಂಧ ತನಿಖೆ ಕೈಗೊಂಡಿದ್ದ ಶ್ರೀರಂಗಪಟ್ಟಣ ಹಾಗೂ ಮೈಸೂರಿನ ಸರಸ್ವತಿಪುರಂ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನ ಮೈಸೂರಿನ ರಿಂಗ್ ರಸ್ತೆಯ ಬಳಿ ಬಂಧಿಸಿ ಕೃತ್ಯಕ್ಕೆ ಬಳಸಿದ ಓಮಿನಿ ಕಾರು, ಎರಡು ಬೈಕ್, ಕೃತ್ಯಕ್ಕೆ ಬಳಸಿದ ಮರದ ತುಂಡುಗಳನ್ನು ಜೊತೆಗೆ ಶವವನ್ನು ಮುಚ್ಚಿ ಬಿಸಾಕಿದ್ದ ವಸ್ತುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.