ಚೆಟ್ಟಳ್ಳಿ: ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಶ್ರೀ ತಲಕಾವೇರಿ ಕೊಡವ ಸಾಂಸ್ಕೃತಿಕ ಸಂಘ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಮೈಸೂರು ಕೊಡವ ಸಮಾಜದಲ್ಲಿ ಪುತ್ತರಿ ಸಂತೋಷ ಕೂಟ ನಡೆಯಿತು.
ಮುಖ್ಯ ಅತಿಥಿಗಳಾಗಿ ಸಂತೋಷ ಕೂಟವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಅಪ್ಪಚೆಟ್ಟೋಳಂಡ ಕುಂಜಪ್ಪ (ನಿವೃತ್ತ ಪ್ರಾದೇಶಿಕ ಆಯುಕ್ತರು ಮೈಸೂರು) ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಬಿದ್ದಾಟಂಡ ತಮ್ಮಯ ನವರ ಸಾಧನೆ ಅಮೋಘವಾದ್ದದು, ಅವರು ನಾನು ನೋಡಿದ ಹಾಗೆ ಕೊಡಗಿನ ಹಲವಡೆ ಹಾಗೂ ಮೈಸೂರು, ಮಂಗಳೂರು, ಬೆಂಗಳೂರು, ನವದೆಹಲಿಗಳಲ್ಲಿ ಕಾರ್ಯಕ್ರಮ ನೀಡಿ ಕೊಡವರ ಆಟ್ ಪಾಟ್ ಸಂಸ್ಕೃತಿಯನ್ನು ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಇವರ ಅವಧಿಯಲ್ಲಿ ಕೊಡವ ಕಾರ್ಯಕ್ರಮಗಳು ಅತ್ತ್ಯುನ್ನತ್ತ ಯಶಸ್ವಿನ ಮಟ್ಟ ತಲುಪಿದೆ. ಕೊಡವರ ಸಂಸ್ಕೃತಿಯಾದ ಮಂದ್ ಮಾನಿ, ಏನು ಎಂಬುದು ಜನರಿಗೆ ಗೊತ್ತಾಗುವಂತಾಗಿದೆ ಮತ್ತು ಮುಂದುವರಿದ ಅವರು, ತಂದೆ ತಾಯಿಗಳು ಮಕ್ಕಳನ್ನು ಓದಿಸಿ ಕಾರ್ಪೊರೇಟೀವ್ ಸೆಕ್ಟರ್ ಗಳಿಗೆ ತಳ್ಳದೆ, ಪಬ್ಲಿಕ್ ಸರ್ವಿಸ್ ಪರೀಕ್ಷೆಗೆ ತಯಾರು ಮಾಡಬೇಕೆಂದರು. ಏಕೆಂದರೆ ಕೊಡಗಿನಲ್ಲಿ ಐ.ಎ.ಎಸ್ .ಮತ್ತು ಐ.ಪಿ.ಸ್ .ಮಟ್ಟದ ಅಧಿಕಾರಿಗಳು ಕೇವಲ ಬೆರಳೆಣಿಕೆ ಅಷ್ಟ್ಟು ಮಾತ್ರ ಕಾಣಸಿಗುತ್ತಾರೆ. ಆದಷ್ಟು ಮಟ್ಟಿಗೆ ಮಕ್ಕಳನ್ನು ಸರಕಾರಿ ಕೆಲಸಕ್ಕೆ ಸೇರಿಸಿ ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬಿದ್ದಾಟಂಡ ತಮ್ಮಯ್ಯನವರು ಅಕಾಡೆಮಿ ನನ್ನ ಅವಧಿಯಲ್ಲಿ ಎರಡು ವರ್ಷ ಕಳೆದು ನಾವು ಈಗ ಮೂರೂ ವರ್ಷಕ್ಕೆ ಕಾಲಿಡುತ್ತಿದ್ದೇವೆ, ಈ ಎರಡೂವರೆ ವರ್ಷದಲ್ಲಿ ನಾನು ನನಗೆ ಹಾಗೂ ಕೊಡವ ಜನಾಂಗಕ್ಕೆ ತುಂಬಾ ತೃಪ್ತಿ ಕೊಡುವಂತ ಕೆಲಸವನ್ನು ಮಾಡಿದ್ದೇನೆ, ಬೇದ, ಭಾವ ಮಾಡದೇ ಎಲ್ಲ ಕೊಡವ ಭಾಷಿಕರನ್ನು ಗಣನೆಗೆ ತೆಗೆದುಕೊಂಡು ಕೆಲಸಮಾಡಿದ್ದೇನೆ.
ಸೂರ್ಲಬ್ಬಿಯಿಂದ ಕುಟ್ಟದವರೆ ನಮ್ಮ ಸಂಸ್ಕೃತ್ತಿಯನ್ನು ಆಟ್ ಪಾಟ್ ಹಾಗೂ ಇನ್ನಿತರ ಕಾರ್ಯಕ್ರಮದ ಮೂಲಕ ಆಯೋಜಿಸಿ ನಡೆಸಿದ್ದೇನೆ. ಮೂಲೆಗುಂಪಾಗಿದ್ದ ಮಂದ್ ಮಾನಿಯನ್ನು ತೆರೆಸಿ ಅವರಿಗೆ ಆಟ್,ಪಾಟ್ ಅನ್ನು ಕಲಿಸಿ ಕೊಟ್ಟು ಮುಂದುವರಿಸಿಕೊಂಡು ಹೋಗುವಂತೆ ಮಾಡಿದ್ದೇನೆ. ಮತ್ತೆ ಮುಂದುವರಿದು ಮಕ್ಕಳಿಗೆ ಸಂಸ್ಕೃತಿಯ ಬಗ್ಗೆ ಆಸಕ್ತಿ ಇರುತ್ತದೆ, ಆದರೆ ಪೋಷಕರು ಎಲ್ಲಿ ಮಕ್ಕಳು ಓದುವುದರಲ್ಲಿ ಆಸಕ್ತಿ ಕಳೆದುಕೊಳ್ಳುತಾರೆ ಎಂದು ಹೆದರಿ ಅದನ್ನು ಚಿವುಟಿ ಹಾಕುತ್ತಾರೆ. ದಯವಿಟ್ಟು ಹಾಗೆ ಮಾಡಬೇಡಿ, ನಮ್ಮ ಸಂಸ್ಕೃತಿಯನ್ನೂ ಕಲಿಸಿ ಉಳಿಸಿ, ಅವರನ್ನು ಚೆನ್ನಾಗಿ ಓದಿಸಿ ಆದಷ್ಟು ಮಟ್ಟಿಗೆ ಸರಕಾರಿ ನೌಕರಿಗೆ ಬರುವಂತೆ ಮಾಡಿ ಎಂದು ನುಡಿದರು.
ಮೈಸೂರಿನಿಂದ ಕೊಡಗಿಗೆ ಬಂದು ಅವರವರ ಮನೆಯಲ್ಲಿ ಹಬ್ಬ ಹರಿದಿನಗಳನ್ನು ಆಚರಿಸಿ, ಆಮೇಲೆ ಮೈಸೂರಿನಲ್ಲಿ ಆಚರಿಸುವಂತೆ ಜನರಲ್ಲಿ ಕೋರಿದರು .
ಕಾರ್ಯಕ್ರಮದಲ್ಲಿ ಮೈಸೂರಿನಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಾದ, ಕಂಬೆಯಂದ ಅಪ್ಪಚ್ಚು ,ಮಚ್ಚುರ ಕಾವೇರಪ್ಪ, ಮಳ್ಳೆಂಗಡ ಅಪ್ಪಯ್ಯ, ಚೀಯಕಃಪೋವ ಅಂಡ ಸೋಮಯ್ಯ, ಚೆಯ್ಯಂಡಾ ತಿಮ್ಮಯ, ಚೇನಂದ ರಮೇಶ್, ಬಟ್ಟಿಯಂಡ ಪೊನ್ನಪ್ಪ, ಕಾಂತಂದ ಪಳಂಗಪ್ಪ, ನಾತೋಳಂದ ದೇವಯ್ಯ, ಒಟ್ಟೆಮದ ಕುಶಾಲಪ್ಪ ರವರುಗಳಿಗೆ ಸನ್ಮಾನಿಸಲಾಯಿತು. ವಿದ್ಯಾಭ್ಯಾಸ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಚೋಯಮದಂದ ರಾದ ಚೆಂಗಪ್ಪ, ಮುಂಡಂಡ ಪುನೀತ್ ದೇವಯ್ಯ, ಮಳ್ಳೆಂಗದ ಪೆಮ್ಮಯ್ಯ,ಮಲ್ಲಮದ ಅಂಕಿತ್ ಪೊನ್ನಣ್ಣ, ಮುಳ್ಳೆಂಗದ ಕುಟ್ಟಪ್ಪ, ಕೊಟ್ರಂಗದ ಧೀರಜ್ ಕರಂಬಯ್ಯ,ಸೂರಜ್ ಮಂದಣ್ಣ, ದ್ರಿಶ್ಯ ಮುದ್ದಪ್ಪ, ಅರ್ಜುನ್ ಚೆಂಗಪ್ಪ, ಮಂದೆಯಂದ ಜೀವನ್ ಅವರನ್ನು ಸನ್ಮಾನಿಸಲಾಯಿತು.
ಈ ಸಂಧರ್ಭ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಬೊಳಕಾಟ್ ಮತ್ತೆ ಕೋಲಾಟವನ್ನು ತಲಕಾವೇರಿ ಕೊಡವ ಸಾಂಸ್ಕೃತಿಕ ಸಂಘದವರು ನಡೆಸಿಕೊಟ್ಟರೆ, ಅವರದೇ ಮಹಿಳೆಯರ ತಂಡದಿಂದ ಜೋಡಿ ಉಮ್ಮತ ಆಟ್ ಪ್ರದರ್ಶನ ವಿಶೇಷವಾಗಿತ್ತು .
ಅಪ್ಪಟ್ಟಿರ ಬೀನಾನವರು ಸುಂದರ ಕೊಡಗು ಬಗ್ಗೆ ಕವನ ವಾಚಿಸಿದರೆ, ಶ್ರೀಮತಿ ಟಿ.ಎನ್. ಯಶೋದಾ,ರವರು ಕೊಡವ ಸಮುದಾಯತ್ರ ಪದ್ದತಿ ಪರಂಪರೆ ಅಂದ್ ಇಂದ್ ಎಂಬುದರ ಬಗ್ಗೆ ವಿಚಾರ ಮಂಡನೆ ನಡೆಸಿದರು.
ವೇದಿಕೆಯಲ್ಲಿ ಶ್ರೀ ಪೆಮ್ಮಂದ ಸೂರಜ್ (ಪೊಲೀಸ್ ಇನ್ಸ್ಪೆಕ್ಟರ್ ವಿಜಿಲೆನ್ಸ್ ಚೆಸ್ಕಾಂ ಮೈಸೂರು )ಮುಕ್ಕಟ್ಟಿರ ಸುದ ಪೂಣಚ್ಚ ,ಮುಳ್ಳೆಂಗದ ಬೇಬಿ ಚೋನಂದಮ್ಮ,ಹಾಗೂ ತಲಕಾವೇರಿ ಸಂಘದ ಸದಸ್ಯರು ಆಸೀನರಾಗಿದ್ದರು.
ಕಾರ್ಯಕ್ರಮದ ಪ್ರಾಥನೆಯನ್ನು ಆಪಟ್ಟಿರ ಬೀನಾನವರು ಮಾಡಿದರೆ, ಮುಕ್ಕಟ್ಟಿರ ಸುದ ಪೂಣಚ್ಚ ಸ್ವಾಗತಿಸಿ, ಶ್ರೀಮತಿ ರಾಣಿರವರು ವಂದಿಸಿದರು.