ಮೈಸೂರು: 28ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಹಾ ಹಾಗೂ ಅಪರಾದ ತಡೆ ಮಸಾಚರಣೆ ಅಂಗವಾಗಿ 25 ನೂತನ ಪೊಲೀಸ್ ಗಸ್ತು ವಾಹನಗಳಿಗೆ ಜಿಲ್ಲಾ ಉಸ್ತುವಾರಿ ಡಾ.ಹೆಚ್.ಸಿ ಮಹದೇವಪ್ಪ ಚಾಲನೆ ನೀಡಿದರು.
ನಗರದ ಅರಮನೆಯ ಬಲರಾಮ ದ್ವಾರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ನಗರ ಪೊಲೀಸ್ ಆಯುಕ್ತರ ವತಿಯಿಂದ 28ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಹಾ-2017 ಹಾಗೂ ಅಪರಾದ ತಡೆ ಮಸಾಚರಣೆ ಹಾಗೂ ನಗರದ ಸುತ್ತ ಗಸ್ತು ತಿರುಗಲು ನೂತನ 25 ಪೊಲೀಸ್ ಗಸ್ತು ವಾಹನಗಳಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಚಾಲನೆ ನೀಡಿದರು.
ಈ ಕಾರ್ಯಕ್ರಮದ ನಂತರ ಪೊಲೀಸ್ ಬ್ಯಾಂಡ್, ಅಶ್ವರೋಹಿ ದಳ, ನಗರ ಪೊಲೀಸ್ ಘಟಕದ ತುಕಡಿಗಳು, ಮೈಸೂರು ನಗರ ಕಮಾಂಡೊ ಪಡೆ, ಮೈಸೂರಿನ ವಿವಿಧ ಶಾಲಾ ಕಾಲೇಜು ಮಕ್ಕಳು, ಹೋಮ್ ಗಾರ್ಡ್ ತುಕಡಿಗಳು, ಟ್ಯಾಬೊಲೊಗಳು ಸೇರಿದಂತೆ ನೂತನ 25 ಪೊಲೀಸ್ ಗಸ್ತು ವಾಹನಗಳು ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿದವು.