ಮೈಸೂರು: ಕೇಂದ್ರ ಸರ್ಕಾರ ಸಾರಿಗೆ ಇಲಾಖೆಗೆ ಸಂಬಂದ ಪಟ್ಟ ಎಲ್ಲಾ ರೀತಿಯ ಶುಲ್ಕವನ್ನ ಹೆಚ್ಚಳ ಮಾಡಿರುದನ್ನ ಖಂಡಿಸಿ ಮೈಸೂರು ಕನ್ನಡ ವೇದಿಕೆ ಆರ್ ಟಿಓ ಕಛೇರಿ ಮುಂಬಾಗ ಪ್ರತಿಭಟನೆ ನಡೆಸಿತು.
ನೋಟ್ ರದ್ದಾನಿಂದಾಗಿ ಆರ್ಥಿಕ ಪರಿಸ್ಥಿತಿ ಸುಧಾರಣೆ ಹಂತದಲ್ಲಿರುವಾಗ ಕೇಂದ್ರ ಸರ್ಕಾರವೂ ಸಾರಿಗೆ ಇಲಾಖೆಗೆ ಸಂಬಂಧಪಟ್ಟ ಪರವಾನಗಿ, ನವೀಕರಣ, ಚಾಲನ ಪರವಾನಗಿ ಶುಲ್ಕವನ್ನ ದಿಢೀರಾಗಿ ಏರಿಸಿರುವುದು ಸರಿಯಲ್ಲ ಎಂದು ಮೈಸೂರು ಕನ್ನಡ ವೇದಿಕೆಯ ಕಾರ್ಯಕರ್ತರು ಆರ್ ಟಿಓ ಕಛೇರಿ ಮುಂಭಾಗ ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.
ಅಲ್ಲದೆ ನಮ್ಮ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಹೋಗಲು ಟೋಲ್ಗಳ ಶುಲ್ಕ ಪಾವತಿಸಬೇಕು, ನಮ್ಮ ರಾಜ್ಯದಲ್ಲಿ ನಾವು ಪ್ರವೇಶ ಮಾಡಲು ಟೋಲ್ ಶುಲ್ಕವನ್ನು ಕಟ್ಟಬೇಕು ಎಂಬ ಯೋಜನೆ ಎಷ್ಟರ ಮಟ್ಟಿಗೆ ಸರಿ. ಕೂಡಲೇ ಏರಿಕೆ ಶುಲ್ಖವನ್ನು ಕಡಿಮೆ ಮಾಡದೇ ಹೋದರೆ ತೀವ್ರವಾಗಿ ಹೋರಾಟವನ್ನು ಮಾಡುತ್ತೇವೆಂದು ಎಚ್ಚರಿಕೆ ನೀಡಿದರು.