ಮೈಸೂರು: ನೀರು ಕುಡಿಯಲು ಕೆರೆಗೆ ಬಂದ ಗಂಡಾನೆಯೊಂದು ನೀರೆಂದು ಕೆಸರಿನಲ್ಲಿ ಕಾಲಿಟ್ಟು ಮೇಲೆ ಬರಲಾಗದೆ ಹರಸಾಹಸ ಪಡುತ್ತಿರುವ ಘಟನೆ ನಾಗರಹೊಳೆಯ ಬಳಿಯ ಕಸುವಿನಹಳ್ಳಿಯಲ್ಲಿಯ ಹೊಸಕೆರೆಯಲ್ಲಿ ನಡೆದಿದೆ.
ಬೇಸಿಗೆ ಮುನ್ನವೇ ಈಗಾಗಲೇ ಎಲ್ಲಡೆ ಬರದಿಂದ ನೀರಿನ ಆಹಾಕಾರ ಉಂಟಾಗಿದ್ದು ಮನ್ಯುಷರಿಗಿಂತ ಪ್ರಾಣಿಗಳೇ ನೀರಿಲ್ಲದೆ ಪರದಾಡುತ್ತಿದ್ದು, ಇದಕ್ಕೆ ಇಲ್ಲೊಂದು ನಿದರ್ಶಶನ ಇದೆ.
ನಾಗರಹೊಳೆಯ ರಾಷ್ಟ್ರೀಯ ಉದ್ಯಾನವನದ ಪಕ್ಕ ಕಸುವಿನಹಳ್ಳಿ ಬಳಿಯ ಹೊಸ ಕೆರೆಗೆ ಗಂಡಾನೆಯೊಂದು ನೀರು ಕುಡಿಯಲು ಬಂದಿದ್ದು, ಕೆಸರಿನ ಮೇಲೆ ಇದ್ದ ನೀರನ್ನು ಕುಡಿಯಲು ಹೋಗಿ ಕೆಸರನಲ್ಲಿ ಕಾಲಿಟ್ಟು, ಕೆಸರಿನಿಂದ ಮೇಲೆ ಬರಲಾಗದೆ ಹರಸಾಹಸ ಪಡುತ್ತಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯವರು ಧಾವಿಸಿದ್ದು ಆನೆಯನ್ನು ಮೇಲೆ ಎತ್ತಲು ಹರಸಾಹಸ ಪಡುತ್ತಿದ್ದಾರೆ.