ಮೈಸೂರು: ಮೈಸೂರಿನ ಮಹಾರಾಜ ಸರ್ಕಾರಿ ಸಂಸ್ಕೃತ ಪಾಠಶಾಲೆಯಲ್ಲಿ ಮೈಸೂರು ಆಯುರ್ವೇದ ವೈದ್ಯ ಸಂಘದಿಂದ ಏರ್ಪಡಿಸಿದ್ದ ಧನ್ವಂತರಿ ಜಯಂತಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ನಾಗಾರ್ಜುನಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಜಾಗತಿಕವಾಗಿ ಹೆಚ್ಚು ಪ್ರಸಿದ್ಧಿಗೆ ಬರುತ್ತಿರುವ ಆಯುರ್ವೇದಕ್ಕೆ ಮುಂದಿನ ದಿನಗಳಲ್ಲಿ ಉಜ್ವಲ ಭವಿಷ್ಯವಿದೆ ಎಂದು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ತಿಳಿಸಿದರು. ಕಾಲಕಾಲಕ್ಕೆ ತಕ್ಕಂತೆ ಸೂಕ್ತ ಉನ್ನತೀಕರಣವಾಗದ ಪರಿಣಾಮದಿಂದ ನ್ಯಾಚುರೊಥೆರಪಿ ಮತ್ತು ಪಿಜಿಯೋಥೆರಪಿ ವಿಜ್ಞಾನಗಳು ಆಯುರ್ವೇದ ಪದ್ಧತಿಯಿಂದ ದೂರವಾಗಿವೆ. ಜಾಗತಿಕ ಮನ್ನಣೆ ಗಳಿಸುತ್ತಿವೆ. ಆಯುರ್ವೇದದ ಉನ್ನತೀಕರಣ ಅತ್ಯಗತ್ಯವಾಗಿದೆ. ಸೂಕ್ತ ಉನ್ನತೀಕರಣ ಕಾಣದಿದ್ದರೆ ಪಂಚಕರ್ಮ ಮತ್ತು ಶಲ್ಯ ಪದ್ಧತಿಗಳೂ ಕೈತಪ್ಪುವ ಕಾಲದೂರವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸ್ವಾಮೀಜಿಗಳಿಗೂ ಆಯುರ್ವೇದಕ್ಕೂ ಅವಿನಾಭಾವ ಸಂಬಂಧವಿದ್ದು, ಸ್ವಾಮೀಜಿಗಳಿಲ್ಲದೇ ಆಯುರ್ವೇದ ಪದ್ಧತಿ ಇಲ್ಲದಂತಾಗಿದೆ. ರವಿಶಂಕರ ಗುರೂಜಿ, ಬಾಬಾರಾಮದೇವ ಬಹುತೇಕ ರಾಷ್ಟ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಆಯುರ್ವೇದ ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟು ಆಸಕ್ತಿಯಿಂದ ಅಧ್ಯಯಯನ ಮಾಡಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಡಾ.ಬಿ.ವಿ.ಸಾವಳಗಿ ಅವರಿಗೆ ಚರಕಶ್ರೀ, ಸಂಸ್ಕೃತ ವಿದ್ವಾಂಸ ಪ್ರೊ.ಕೆ.ಗುರುಪಾದ ಹೆಗಡೆ ಅವರಿಗೆ ದರ್ಶನ ವಾರಿಧಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭ ಆಯುರ್ವೇದ ಸಂಘದ ಅಧ್ಯಕ್ಷ ಡಾ.ಬಿ.ಗುರು.ಬಸವರಾಜು, ಡಾ.ಭಾಷ್ಯಂ ಸ್ವಾಮೀಜಿ, ಮೈಸೂರು ವಿವಿ ಕನ್ನಡ ಅಧ್ಯಯನ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.