ಮೈಸೂರು: ಸಿಎಂ ತವರು ಕ್ಷೇತ್ರದಲ್ಲಿ ನಡೆದ ಎಪಿಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮಾನ ಪ್ರಾಭಲ್ಯ ಮೆರೆದರೆ ಬಿಜೆಪಿ ಕಳಪೆ ಸಾಧನೆ ಮಾಡಿವ ಮೂಲಕ ಮೂರನೇ ಸ್ಥಾನಕ್ಕೆ ತಳಲ್ಪಟ್ಟಿದೆ.
ಸೋಮವಾರ ಮೈಸೂರು ಜಿಲ್ಲೆಯ 7ತಾಲ್ಲೂಕುಗಳಲ್ಲಿ ಒಟ್ಟು 86 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 227 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, ಇಂದು ಜಿಲ್ಲೆಯ ಆಯಾ ತಾಲ್ಲೂಕಿನಲ್ಲಿ ನಡೆದ ಮತ ಎಣಿಕೆಯಲ್ಲಿ ಕಾಂಗ್ರೆಸ್ ನಂಜನಗೂಡು ಹಾಗೂ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಕಾಂಗ್ರೆಸ್ ಬೆಂಬಲಿಗರು ನಿಚ್ಚಳ ಬಹುಮತ ಗಳಿಸಿದರೆ ಹೆಚ್.ಡಿ ಕೋಟೆಯಲ್ಲಿ ಜೆಡಿಎಸ್ ಬೆಂಬಲಿಗರು ಜಯಬೇರಿ ಬಾರಿಸಿದ್ದಾರೆ.
ಟಿ.ನರಸೀಪುರ, ಕೆ.ಆರ್ ನಗರ ಹಾಗೂ ಮೈಸೂರು ಎಪಿಎಂಸಿಗಳಲ್ಲಿ ಜೆಡಿಎಸ್ ಹೆಚ್ಚು ಸ್ಥಾನಗಳಿಸಿದರೂ ಸರ್ಕಾರದ ನಾಮ ನಿರ್ಧೇಶನಗೊಳ್ಳುವ ಸದಸ್ಯರ ಬೆಂಬಲದಿಂದ ಕಾಂಗ್ರೆಸ್ ಬೆಂಬಲಿಗರೆ ಅಧ್ಯಕ್ಷರಾಗಲಿದ್ದಾರೆ. ಹುಣುಸೂರಿನಲ್ಲಿ ಕಾಂಗ್ರೆಸ್ ಆರು ಹಾಗೂ ಜೆಡಿಎಸ್ 8 ಸ್ಥಾನಗಳನ್ನು ಗಳಿಸಿದೆ.
ತಾಲ್ಲೂಕುವಾರು ವಿವರ:
ಮೈಸೂರು ಒಟ್ಟು ಸ್ಥಾನ 14ರಲ್ಲಿ ಕಾಂಗ್ರೆಸ್ ಬೆಂಬಲಿತ 6, ಜೆಡಿಎಸ್ ಬೆಂಬಲಿತ 7, ಪಕ್ಷೇತರ ಒಂದು ಸ್ಥಾನ(ಒಂದು ಅವಿರೋಧ ಆಯ್ಕೆ ಸೇರಿ), ನಂಜಗೂಡಿನಲ್ಲಿ ಒಟ್ಟು ಸ್ಥಾನ 13ರಲ್ಲಿ ಕಾಂಗ್ರೆಸ್ ಬೆಂಬಲಿತ 8, ಬಿಜೆಪಿ ಬೆಂಬಲಿತ ನಾಲ್ಕು, ಒಂದು ಅವಿರೋಧ ಆಯ್ಕೆ. ಹೆಚ್.ಡಿ ಕೋಟೆ ಒಟ್ಟು ಸ್ಥಾನ 13ರಲ್ಲಿ ಜೆಡಿಎಸ್ ಬೆಂಬಲಿತ 7, ಕಾಂಗ್ರೆಸ್ ಬೆಂಬಲಿತ 3, ಬಿಜೆಪಿ ಬೆಂಬಲಿತ 2, ಒಂದು ಅವಿರೋಧ ಆಯ್ಕೆ. ಟಿ.ನರಸೀಪುರದಲ್ಲಿ ಒಟ್ಟು ಸ್ಥಾನ 13 ಜೆಡಿಎಸ್ ಬೆಂಬಲಿತ 6, ಕಾಂಗ್ರೆಸ್ ಬೆಂಬಲಿತ 6, ಬಿಜೆಪಿ ಬೆಂಬಲಿತ 1 (2 ಅವಿರೋಧ ಆಯ್ಕೆ ಸೇರಿ). ಹುಣುಸೂರು ಒಟ್ಟು ಸ್ಥಾನ 14ರಲ್ಲಿ ಜೆಡಿಎಸ್ ಬೆಂಬಲಿತ 8, ಕಾಂಗ್ರೆಸ್ ಬೆಂಬಲಿತ 6, ಕೆ.ಆರ್ ನಗರದಲ್ಲಿ ಒಟ್ಟು ಸ್ಥಾನ 12ರಲ್ಲಿ ಕಾಂಗ್ರೆಸ್ ಬೆಂಬಲಿತ 5, ಜೆಡಿಎಸ್ 7. ಇನ್ನೂ ಪಿರಿಯಾಪಟ್ಟಣದಲ್ಲಿ ಒಟ್ಟು 13 ಸ್ಥಾನದಲ್ಲಿ ಕಾಂಗ್ರೆಸ್ ಬೆಂಬಲಿತ 9, ಜೆಡಿಎಸ್ 4, (2 ಅವಿರೋಧ ಆಯ್ಕೆ ಸೇರಿ).