ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಅಕ್ರಮ ಚುಟುವಟಿಕೆಗಳು ಹೆಚ್ಚಾದ ಹಿನ್ನಲ್ಲೆಯಲ್ಲಿ ನಗರ ಪೊಲೀಸರು ಸಂಜೆ ಸಮಯದಲ್ಲಿ ಅಪರೇಷನ್ ಚಾಮುಂಡಿ ಕಾರ್ಯಚರಣೆಯನ್ನ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣೇಶ್ವರ ರಾವ್ ತಿಳಿಸಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ಅನೈತಿಕ ಚಟುವಟಿಕೆಗಳು, ಮೋಟಾರ್ ಸೈಕಲ್ ವೀಲಿಂಗ್ ಹಾಗೂ ಇತರ ಅಕ್ರಮ ಚಟುವಟಿಕೆಗಳು ಹೆಚ್ಚಾಗಿದೆ ಎಂಬ ದೂರಿನ ಹಿನ್ನಲ್ಲೆಯಲ್ಲಿ ನಿನ್ನೆ ಸಂಜೆಯಿಂದ ಆಪರೇಷನ್ ಚಾಮುಂಡಿ ಕಾರ್ಯಚರಣೆಯನ್ನ ಆರಂಭಿಸಿರುವ ನಗರದ ಪೊಲೀಸರು, ಚಾಮುಂಡಿ ಬೆಟ್ಟಕ್ಕೆ ಹೋಗುವ ತಾವರೆ ಕಟ್ಟೆ, ಲಲಿತ ಮಹಲ್ ಜಂಕ್ಷನ್, ಚಾಮುಂಡಿ ಬೆಟ್ಟದ ಪಾದ, ಉತ್ತನಹಳ್ಳಿಯ ರಸ್ತೆ, ದೇವಿನವನ ಗೇಟನ ಬಳಿ ಪೊಲೀಸರು ಬೆಟ್ಟಕ್ಕೆ ಹೋಗುವ ವಾಹನಗಳ ತಪಾಸಣೆಯನ್ನ ಕೈಗೊಂಡಿದ್ದಾರೆ.
ನಿನ್ನೆ ಸಂಜೆ ಒಂದೇ ದಿನಕ್ಕೆ 348 ವಿವಿದ ಸಂಚಾರಿ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, 37,300 ರೂ ದಂಡವನ್ನ ವಸೂಲಿ ಮಾಡಲಾಗಿದೆ. ಅಪರೇಷನ್ ಚಾಮುಂಡಿ ಮುಂದುವರಿಯಲಿದೆ ಎಂದು ನಗರ ಪೊಲೀಸ್ ಕಮಿಷನರ್ ಸ್ಪಷ್ಟ ಪಡಿಸಿದ್ದಾರೆ.