ಮೈಸೂರು: ಗೃಹ ಸಚಿವರ ತವರು ಜಿಲ್ಲೆಯಲ್ಲೆ ದಲಿತ ಯುವಕನನ್ನ ಬೆತ್ತಲೆಗೊಳಿಸಿ ಚಪ್ಪಲಿ ಹಾರ ಹಾಕಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಂದ ಯುವಕನಿಗೆ 5 ಲಕ್ಷ ಪರಿಹಾರ ನೀಡಬೇಕೆಂದು ನಗರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಏಕಾಂಗಿ ಪ್ರತಿಭಟನೆ ನಡೆಸಲಾಯಿತು.
ಕೊಳ್ಳೆಗಾಲದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿರುವ , ಬೆಳಗಾವಿಯ ನಿಡೋಣಿಯಲ್ಲಿ ಬಸವಣ್ಣನವರ ಪ್ರತಿಮೆಗೆ ಚಪ್ಪಲಿ ಹಾರ ಹಾಕಿ ಅವಮಾನ ಮಾಡಿರುವ ಹಾಗೂ ತುಮಕೂರಿನ ಗುಬ್ಬಿ ತಾಲ್ಲೂಕಿನಲ್ಲಿ ದಲಿತ ಯುವಕನಿಗೆ ಚಪ್ಪಲಿ ಹಾರ ಥಳಿಸಿರುವುದನ್ನ ಖಂಡಿಸಿ, ತಪ್ಪಿಸ್ಥರನ್ನ ಶೀಘ್ರವಾಗಿ ಬಂಧಿಸಿಬೇಕೆಂದು ನಗರದ ಕುವೆಂಪುನಗರ ನಿವಾಸಿ ನಾಗರಾಜ್ ಮೈಸೂರಿನ ಜಿಲ್ಲಾಧಿಕಾರಿಯ ಕಛೇರಿಯ ಎದುರು ಏಕಾಂಗಿ ಪ್ರತಿಭಟನೆ ನಡೆಸಿದ್ದಾರೆ.
ಜ್ಯಾತ್ಯತೀತ ರಾಷ್ಟ್ರದಲ್ಲಿ ಕೋಮು ಸಾಮರಾಸ್ಯವನ್ನ ಕದಡಲು ಈ ತರಹದ ಶಕ್ತಿಗಳು ಯತ್ನಿಸುತ್ತಿದ್ದು, ಕಿಡಿಗೇಡಿಗಳನ್ನ ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು. ಅಮಾನುಷವಾಗಿ ಥಳಿಸಿದ ದಲಿತ ಯುವಕನಿಗೆ 5 ಲಕ್ಷ ರೂ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.