ಮೈಸೂರು: ಶಾಲಾ ವಾಹನ-ಆಟೋ ಡಿಕ್ಕಿಯಾದ ಪರಿಣಾಮ ಒರ್ವ ಬಾಲಕ ಗಂಭೀರ ಸ್ಥಿತಿಯಲ್ಲಿದ್ದು, 7 ಮಕ್ಕಳು ಗಾಯಗೊಂಡ ಘಟನೆ ಮೈಸೂರು ತಾ. ಜಟ್ಟಿಹುಂಡಿ ಬಳಿ ನಡೆದಿದೆ.
ಗಾಯಗೊಂಡ ಮಕ್ಕಳು ದಾಸನಕೊಪ್ಪಲು ಗ್ರಾಮದವರಾಗಿದ್ದು, ಮಕ್ಕಳನ್ನು ಯಶಸ್, ಶ್ರೀನಿವಾಸಗೌಡ, ಅಮೂಲ್ಯ, ಧ್ರುವ, ಭರತ್, ಭಾನು, ಹರ್ಷ, ನಿತೀನ್ ಗೌಡ ಎಂದು ಗುರುತಿಸಲಾಗಿದೆ.
ಸೆಂಟ್ ಫ್ರಾನ್ಸಿಸ್ ಶಾಲೆಯ ವಿದ್ಯಾರ್ಥಿಗಳಾಗಿದ್ದ ಇವರು ಶಾಲೆಯಿಂದ ವಾಪಸ್ ಓಮಿನಿ ಕಾರಿನಲ್ಲಿ ತೆರಳುವಾಗ ಘಟನೆ ಈ ಘಟನೆ ಸಂಭವಿಸಿದೆ.
ಗಾಯಾಗೊಂಡ ಮಕ್ಕಳನ್ನು ಮೈಸೂರಿನ ಭಾನವಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.