News Kannada
Friday, December 02 2022

ಮೈಸೂರು

ಕಂಬಳ ಆಟವಾಗಿರಲಿ, ಅದರೊಳಗಿನ ಅನಿಷ್ಟ ಆಚರಣೆ ಬೇಡ: ಸಾಹಿತಿ ದೇವನೂರು ಮಹದೇವ್

Photo Credit :

ಕಂಬಳ ಆಟವಾಗಿರಲಿ, ಅದರೊಳಗಿನ ಅನಿಷ್ಟ ಆಚರಣೆ ಬೇಡ: ಸಾಹಿತಿ ದೇವನೂರು ಮಹದೇವ್

ಮೈಸೂರು: ಕಂಬಳ ಆಟವಾಗಿರಲಿ, ಆಟದೊಳಗಿನ ಅನಿಷ್ಟ ಆಚರಣೆ ಬೇಡ, ಎಂದು ಪ್ರಗತಿಪರ ಸಾಹಿತಿ ದೇವನೂರು ಮಹದೇವ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಸರ್ಕಾರವನ್ನ ಆಗ್ರಹಿಸಿದ್ದಾರೆ.

ಪ್ರಗತಿಪರ ಸಾಹಿತಿ ದೇವನೂರು ಮಹದೇವ್ ಮೈಸೂರಿನಲ್ಲಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿ ತಮಿಳುನಾಡಿನ ಜಲ್ಲಿಕಟ್ಟಿಗೆ ಅನುಮತಿ ಸಿಕ್ಕ ಮೇಲೆ ಕಂಬಳ ಆಚರಣೆಗಾಗಿ ಒತ್ತಾಯ ಬುಗಿಲೆದ್ದಿದ್ದು ಕಂಬಳ ಜಲ್ಲಿಕಟ್ಟಿನಷ್ಟು ಅಪಾಯವಿಲ್ಲ. ಆದರೆ ಕಂಬಳ ಆಟ ಮಾತ್ರವಲ್ಲ ಆಟದೊಳಗೆ ಅನಿಷ್ಟ ಆಚರಣೆಯೊಂದು ಅಡಗಿ ಕುಳಿತಿದೆ. ಅದನೆಂದರೆ ಕೊರಗ ಸಮುದಾಯವನ್ನ ಬಳಸಿಕೊಂಡು ಜರಗುವ ‘ಪನಿಕುಲ್ಲನೆ ಆಚರಣೆ.

ಏನಿದು ಪನಿಕುಲ್ಲನ ಆಚರಣೆ?
ಕಂಬಳ ನಡೆಯುವ ಹಿಂದಿನ ದಿನದ ಇಡೀ ರಾತ್ರಿ ಕೊರಗ ಸಮುದಾಯದವರು ಡೋಲು ಬಾರಿಸುತ್ತ ಕುಣಿಯುವ ಆಚರಣೆಯು ಲೈಂಗಿಕ ಚೇಷ್ಟೆಗಳನ್ನು ಒಳಗೊಂಡಿದ್ದು, ಬೆಳಗಾಗುವಾಗ ಕೊರಗ ಸಮುದಾಯದವರು ತಾವೇ ಕೋಣಗಳು ಎಂದು ತಿಳಿದು ಕಂಬಳದ ಕೆಸರು ಗದ್ದೆಯಲ್ಲಿ ಕೊರಗ ಜನ ಓಡುತ್ತಾರೆ. ಇದು ಕೋಣಗಳ ಓಟಕ್ಕೆ ಪೂರ್ವಬಾವಿಯಾಗಿದ್ದು ಕೊರಗ ಜನರು ತಾವೇ ಕೋಣಗಳೆಂದು ಗದ್ದೆಯಲ್ಲಿ ಓಡುವ ಮೂಲಕ ಭೂ ಮಾಲೀಕರ ಕೋಣಗಳಿಗೆ ಬೀಳುವ ಕೆಟ್ಟ ಕಣ್ಣನ್ನು ಮುಕ್ತಗೊಳಿಸಿದ ನಂತರವೇ ಭೂ ಮಾಲೀಕರು ತಮ್ಮ ಕೋಣಗಳನ್ನ ಕಂಬಳದ ಗದ್ದೆಯಲ್ಲಿ ಓಡಿಸುತ್ತಾರೆ. ಅಂದರೆ ಕೋಣಗಳಿಗಿಂತ ಕೊರಗ ಜನರು ಕೀಳು ಎಂಬ ಭಾವನೆ ಬರುತ್ತದೆ ಎಂಬ ಬಗ್ಗೆ ಸಾಹಿತಿ ಪುರುಷೋತಮ ಬಿಳಿಮಲೆ ತಮ್ಮ ಕರಾವಳಿ ಜನಪದ ಪುಸ್ತಕ ಪುಟ 46ರಲ್ಲಿ ಉಲ್ಲೇಖಿಸಿದ್ದಾರೆ ಎಂದು ದೇವನೂರು ಮಹದೇವ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.

ಆದ್ದರಿಂದ ಕಂಬಳದಲ್ಲಿರುವ ಪನ್ನಿಕುಲ್ಲನೆ ಅನಿಷ್ಟ ಆಚರಣೆಯನ್ನು ಬಿಟ್ಟು ಕಂಬಳವನ್ನ ಒಂದು ಆಟವಾಗಿರಲಿ, ಆಚರಣೆಯಾಗಿ ಬೇಡ. ಅಲ್ಲದೆ ಸರ್ಕಾರ ಈ ಅನಿಷ್ಟ ಪದ್ದತಿಯನ್ನ ನಿಷೇದಿಸುವ ಕಾನೂನು ಜಾರಿಗೆ ತರಬೇಕು, ಇಂತಹ ಗದ್ದಲದ ಸಂದರ್ಭದಲ್ಲಿ ಕಂಬಳಕ್ಕಾಗಿ ಹೋರಾಡುವ ಬದಲು ಮರಗಿಡಗಳನ್ನು ನೆಟ್ಟು ಪರಿಸರವನ್ನು ಉಳಿಸೋಣ ಎಂದು ತಿಳಿಸಿದ್ದಾರೆ.

ಕಾನೂನು ಜಾರಿಗೆ ಬಂದಿದೆ:
ಪನಿಕುಲ್ಲನೆ ಆಚರಣೆ ಹಿಂದೆ ಕಂಬಳದ ಸಂದರ್ಭದಲ್ಲಿ ಆಚರಣೆಯಲ್ಲಿ ಇತ್ತು ಆದರೆ ರಾಜ್ಯ ಸರ್ಕಾರ ಈ ಅನಿಷ್ಟ ಪದ್ದತಿಯನ್ನ ನಿಷೇಧಿಸಿ ಕಾನೂನು ಜಾರಿ ಮಾಡಿದ್ದು ಈಗ ಕಂಬಳದ ಸಂದರ್ಭದಲ್ಲಿ ಈ ಅನಿಷ್ಟ ಪದ್ದತಿ ಇಲ್ಲ ಇಂದು ದೇವನೂರು ಮಹದೇವ್ ಅವರ ಗಮನಕ್ಕೆ ತಂದಾಗ, ನಾನು ಈಗ ದಾರವಾಡದ ಕಾರ್ಯಕ್ರಮದಲ್ಲಿ ಇದ್ದು ಮೈಸೂರಿಗೆ ಹಿಂದಿರುಗಿದ ನಂತರ ಕಾನೂನಲ್ಲಿ ಏನಿದೆ ಎಂದು ತಿಳಿದು ನಂತರ ಸ್ಪಷ್ಟೀಕರಣ ಕೊಡುವುದಾಗಿ ತಿಳಿಸಿದರು.

See also  ಮೃಗಾಲಯದಲ್ಲಿ 6 ತಿಂಗಳ ಆನೆ ಮರಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು