ಮೈಸೂರು: ಕೇಂದ್ರ ಸರ್ಕಾರ ರಾಜಕೀಯ ಪಕ್ಷಗಳಿಗೆ ವಿವಿಧ ಸಂಘಸಂಸ್ಥೆಗಳು 2ಸಾವಿರ ದೇಣಿಗೆ ನೀಡುವುದು ಸ್ವಾಗತಾರ್ಹ. ಆದರೆ ಈ ದೇಣಿಗೆಯನ್ನೇ ರದ್ದುಪಡಿಸಿದರೆ ಬಹಳ ಉತ್ತಮ ಎಂದು ಮಾಜಿ ಸಂಸದ ಹೆಚ್.ವಿಶ್ವನಾಥ್ ತಿಳಿಸಿದರು.
ಇಂದು ನಗರದ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಜಾಫರ್ ಷರೀಫ್ ಕೇಂದ್ರ ಮತ್ತ ರಾಜ್ಯದಲ್ಲಿ ಒಳ್ಳೆಯ ಹುದ್ದೆಗಳನ್ನು ನಿಭಾಯಿಸಿದವರು. ಅವರು ಘನತೆಗೆ ತಕ್ಕಂತೆ ಮಾಡಬೇಕು. ಸಿದ್ದರಾಮಯ್ಯ ವಿರುದ್ಧ ಬೇಸರವಿದ್ದರೆ ಅವರ ಬಗ್ಗೆ ಮಾತನಾಡಲಿ. ಕುರುಬ ಸರ್ಕಾರ ಅಂತ ಹೇಳಿಕೆ ನೀಡುವುದು ಸೂಕ್ತವಲ್ಲ. ನನ್ನ ಅಧಿಕಾರ ಅವಧಿಯಲ್ಲಿ ಎಲ್ಲಿಯೂ ಜಾತಿಯತೆ ಮಾಡಿಲ್ಲವೆಂದು ವಿಶ್ವನಾಥ್ ಹೇಳಿದರು.
ಕೇಂದ್ರ ಸರ್ಕಾರ ನೆನ್ನೆ ಮಂಡಿಸಿದ 2017-18ನೆ ಸಾಲಿನ ಅಯವ್ಯಯವು ಹಲವು ನ್ಯೂನ್ಯತೆಗಳಿಂದ ಕೂಡಿದೆ. ನರೇಗ ಯೋಜನೆಗೆ ಈ ಆಯವ್ಯಯದಲ್ಲಿ 48ಸಾವಿರ ಕೋಟಿ ಮೀಸಲಿಟ್ಟಿರುವುದು ಉತ್ತಮ ಬೆಳವಣಿಗೆ. ಏಕೆಂದರೆ ಗ್ರಾಮೀಣ ಭಾಗದ ಜನತೆಗೆ ವರ್ಷದಲ್ಲಿ ಒಂದು ನೂರು ದಿನಗಳ ಕೆಲಸ ಸಿಗುವುದರೊಂದಿಗೆ ಗ್ರಾಮೀಣಾಭಿವೃದ್ಧಿಯು ಆಗಲಿದೆ ಎಂದರು. ಆಯವ್ಯಯದಲ್ಲಿ ಗ್ರಾಮೀಣಾಭಿವೃದ್ಧಿಗಾಗಿ ಮೀಸಲಿಟ್ಟಿರುವ 10 ಲಕ್ಷ ರೂ.ಗಳಲ್ಲಿ ಯಾವ ಯಾವ ಭಾಪ್ತಿಗೆ ಎಷ್ಟೆಷ್ಟು ಹಣ ಎಂಬುದನ್ನು ನಿಖರವಾಗಿ ತಿಳಿಸಿಲ್ಲ ಹಾಗೂ ಇದರಲ್ಲಿ ರಾಜ್ಯದ ಪಾಲು ಎಷ್ಟು ಎಂಬುದನ್ನು ತಿಳಿಸಿಲ್ಲ ಹಾಗಾಗಿ ಇದು ಗೊಂದಲಕ್ಕೆಡೆಮಾಡಿಕೊಟ್ಟಿದೆ ಎಂದರು.
ನಾನು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಗರಡಿಯಲ್ಲಿ ಬೆಳೆದು ಬಂದಿದ್ದೇನೆ. ನಾನು ಎಂದಿಗೂ ಜಾತಿ ರಾಜಕೀಯ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ಸಿದ್ದರಾಮಯ್ಯನವರ ಸರ್ಕಾರವನ್ನು ಟೀಕಿಸಿದವರಲ್ಲಿ ನಾನೇ ಮೊದಲಿಗನೇ ಹೊರತು ಜಾತಿ ನಿಂದನೆ ಮಾಡಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಯಾರು ಅನಿವಾರ್ಯವಲ್ಲ. ಆದರೆ ನನ್ನನ್ನು ಸೇರಿ ಎಲ್ಲರಿಗೂ ಕಾಂಗ್ರೆಸ್ ಪಕ್ಷ ಅನಿವಾರ್ಯ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ರವಿಶಂಕರ್, ವಿಜಯಕುಮಾರ್ ಹಾಜರಿದ್ದರು.