News Kannada
Monday, February 06 2023

ಮೈಸೂರು

ಮೈಸೂರು ನಗರ ಪೊಲೀಸ್ ಆಯುಕ್ತರಿಂದ ರೌಡಿ ಶೀಟರ್ ಗಳಿಗೆ ನೀತಿಪಾಠ

Photo Credit :

ಮೈಸೂರು ನಗರ ಪೊಲೀಸ್ ಆಯುಕ್ತರಿಂದ ರೌಡಿ ಶೀಟರ್ ಗಳಿಗೆ ನೀತಿಪಾಠ

ಮೈಸೂರು: ರೌಡಿಶೀಟರ್ ಗಳ ಮನೆ ಮೇಲೆ ದಾಳಿ ನಡೆಸಿದ ಡಿಸಿಪಿ ನೇತೃತ್ವದ ತಂಡ ಅಪಾರ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡ ಘಟನೆ ಶುಕ್ರವಾರ ನಡೆದಿದೆ. ರೌಡಿಶೀಟರ್ ಗಳಿಗೆ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರರಾವ್ ನೀತಿ ಪಾಠ ಬೋಧಿಸಿದರು.  ಬಳಿಕ ನಗರ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಮೈದಾನದಲ್ಲಿ ರೌಡಿಶೀಟರ್ ಗಳನ್ನು ಕರೆಸಿದ ಆಯುಕ್ತರು ಅವರಿಗೆ ನೀತಿ ಪಾಠ ಹೇಳಿದರು.

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ನಗರ ಸಶಸ್ತ್ರ ಮೀಸಲು ಪಡೆಯ ಪೊಲೀಸ್  ಮೈದಾನದಲ್ಲಿ ನಗರದ 50ಕ್ಕೂ ಅಧಿಕ ರೌಡಿಶೀಟರ್ ಗಳನ್ನು ಕರೆಸಿದ ಆಯುಕ್ತರು ನೀವು ಅನಗತ್ಯ ರೌಡಿಸಂ ಮಾಡುವುದನ್ನು ಬಿಟ್ಟುಬಿಡಿ. ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳಲು ಕಲಿಯಿರಿ. ನೀವು ಏನೇ ಚಟುವಟಿಕೆಗಳನ್ನು ನಡೆಸಿದರೂ ಅದರ ಮಾಹಿತಿ ನಮಗೆ ಲಭ್ಯವಾಗಲಿದೆ. ನಿಮ್ಮ ಮೇಲೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುತ್ತೇವೆ. ಆದ್ದರಿಂದ ಅವುಗಳನ್ನೆಲ್ಲ  ಬಿಟ್ಟುಬಿಡಿ. ರೌಡಿಸಂ ತೋರಿದರೆ ಮುಂದೆ ತುಂಬಾ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದರು. ರೌಡಿ ನಿಗ್ರಹದಳ ನಗರದಲ್ಲಿ ಸದಾ ಗಸ್ತು ತಿರುಗಲಿದ್ದು, ನಿಮ್ಮ ಮೇಲೆ ಕಣ್ಣಿರಿಸಲಿದೆ ಎಂದು ತಿಳಿಸಿದರು.

ಈ ಸಂದರ್ಭ ಡಿಸಿಪಿಗಳಾದ ಶೇಖರ್, ರುದ್ರಮುನಿ, ಎಸಿಪಿಗಳಾದ  ರಾಜಶೇಖರ್, ಮಲಿಕ್, ಉಮೇಶ್ ಶೇಟ್, ಸಿಸಿಬಿ ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು

See also    ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ: ಮೂವರ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು