ಮೈಸೂರು: ವರ್ಷದಲ್ಲಿ ಒಂದು ಬಾರಿ ರಥ ಸಪ್ತಮಿಯ ಪ್ರಯುಕ್ತ ಅರಮನೆಯ ಆವರಣದಲ್ಲಿರುವ ದೇವಾಲಗಳ ಉತ್ಸವ ಮೂರ್ತಿಗಳನ್ನ ಸಾರ್ವಜನಿಕರಿಗೆ ಪೂಜೆ ಹಾಗೂ ದರ್ಶನಕ್ಕೆ ಇಡಲಾಗಿದೆ.
ಇಂದು ಮುಂಜಾನೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಅರಮನೆ ಆವರಣದಲ್ಲಿ ಶ್ರೀ ಭುವನೇಶ್ವರಿ, ಶ್ರೀ ತ್ರಿನೇಶ್ವರ ಸ್ವಾಮಿ ಶ್ರೀ ಲಕ್ಷ್ಮಿರಮಣ ಸ್ವಾಮಿ, ಶ್ರೀ ಮಹಾಲಕ್ಷ್ಮಿ ದೇವಿ, ಶ್ರೀ ಪ್ರಸನ್ನ ಕೃಷ್ಣ, ಶ್ರೀ ವೇದವರಹಸ್ವಾಮಿ, ಶ್ರೀ ಖಿಲ್ಲೆ ವೆಂಕಟರಮಣಸ್ವಾಮಿ, ಹಾಗೂ ಶ್ರೀ ಗಾಯಿತ್ರಿ ಅಮ್ಮನವರ ಉತ್ಸವ ಮೂರ್ತಿಗಳನ್ನು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ರಥ ಸಪ್ತಮಿಯ ಐತಿಹಾಸಿಕ ಹಿನ್ನಲ್ಲೆ: ಸೂರ್ಯದೇವ ಭೂಮಿಯಲ್ಲಿರುವ ಸಕಲ ಜೀವರಾಶಿಗಳ ಚಟುವಟಿಕೆಗಳಿಗೆ ಪೂರಕವಾದ ದೈವ. ಸೂರ್ಯನಿಲ್ಲದೆ ಜೀವಿಗಳು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಇಂತಹ ಸೂರ್ಯನ ಜನ್ಮ ದಿನವೇ ರಥಸಪ್ತಮಿ. ಮಾಗ ಮಾಸದ ಶುಕ್ಲ ಪಕ್ಷದ ಸಪ್ತಮಿಯನ್ನು ರಥಸಪ್ತಮಿಯನ್ನಾಗಿ ಆಚರಿಸಲಾಗುತ್ತದೆ.
ಸಪ್ತಮಿ ತಿಥಿಯ ಅಧಿದೇವತೆ ಸೂರ್ಯ. ಸೂರ್ಯನ ಪೂಜೆಯೇ ಈ ದಿವಸದ ಮುಖ್ಯ ಆಚರಣೆ. ಸೂರ್ಯದೇವ ಏಳು ಅಶ್ವರೂಢನಾಗೆ ದಕ್ಷಿಣ ಪಥದಿಂದ ಉತ್ತರ ದಿಕ್ಕಿಗೆ ಪಯಣಿಸುತ್ತಾನೆ. ದಕ್ಷಿಣಾಯದಲ್ಲಿ ಚಳಿ ಮತ್ತು ಮಳೆ ವಾತಾವರಣ ಇರುತ್ತದೆ. ಉತ್ತರಾಯಣದಲ್ಲಿ ಸೂರ್ಯ ತನ್ನ ಪಥ ಬದಲಾಯಿಸುವುದರಿಂದ ಬಿಸಿಲಿನ ಪ್ರಕರತೆ ಹೆಚ್ಚಾಗುತ್ತದೆ.
ರೋಗಾಣುಗಳನ್ನು ನಾಶ ಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿದೆ. ರೋಗ ನಿವಾರಣ, ದೇಹದಾಢ್ಯ ಹಾಗೂ ಆರೋಗ್ಯ ಬಯಸುವವರು ಸೂರ್ಯ ಆರಾಧನೆಯನ್ನು ಮಾಡಿದರೆ ಗುಣಮುಕ್ತರಾಗುತ್ತಾರೆ. ಇಂದು ರಥಸಪ್ತಮಿಯ ಶುಭದಿನ. ಎಕ್ಕದ ಎಲೆ ನೀರಿಗೆ ಹಾಕಿ ಸ್ನಾನ ಮಾಡಿ ಸೂರ್ಯನನ್ನು ಭಕ್ತಿ ಭಾವದಿಂದ ಪೂಜಿಸಿದರೆ ಆರೋಗ್ಯ ಭಾಗ್ಯ ಸಂಪತ್ತು, ಆಯಸ್ಸು, ನೀಡಿ ಸಕಲ, ಸನ್ಮಂಗಳವನ್ನುಂಟು ಮಾಡುತ್ತಾನೆ ಎಂಬ ಪ್ರತೀತಿ ಇದೆ ಎಂದು ಅರಮನೆ ಪುರೋಹಿತ ರಾಘವನ್ ತಿಳಿಸಿದರು.
ರಾಜ ಮಹಾರಾಜರುಗಳು ಈ ರಥಸಪ್ತಮಿ ಶುಭದಿನದಂದು ಅರಮನೆ ಆವರಣದಲ್ಲಿರುವ 8 ದೇವಾಲಯಗಳ ಉತ್ಸವ ಮೂರ್ತಿಗಳನ್ನು ಅರಮನೆ ಆವರಣದಲ್ಲಿ ಇರಿಸಿ ವಿಶೇಷ ಪೂಜೆ ನಂತರ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡುತ್ತಿದ್ದರು. ಆ ಸಂಪ್ರದಾಯ ಇಂದಿಗೂ ಸಹ ಮುಂದುವರಿದಿದೆ ಎಂದು ವ್ಯವಸ್ಥಾಪಕ ಗೋವಿಂದರಾಜು ತಿಳಿಸಿದರು.
ಅರಮನೆ ಆವರಣದಲ್ಲಿ ಉತ್ಸವ ಮೂರ್ತಿಗಳ ಪೂಜೆ ಮುಗಿದ ನಂತರ ಮಾಹಾರಜ ಯದೂವೀರ್ ಕೃಷ್ಣದತ್ತ ಚಾಮಾರಜ ಒಡೆಯರ್ ಗೆ ಮನೆಗೆ ಮಾಹಾಮಂಗಳಾರತಿ ಹಾಗೂ ಪ್ರಸಾದ ನೀಡದ ನಂತರ ಉತ್ಸವ ಮೂರ್ತಿಗಳು ತಮ್ಮ ಮೂಲ ಸ್ಥಾನಕ್ಕೆ ವಾಪಸ್ಸ್ ಆಗುತ್ತವೆ.