ಮೈಸೂರು: ಹುಣುಸೂರು ಕಾಂಗ್ರೆಸ್ ಶಾಸಕ ಸೇರಿದಂತೆ ಆರು ಮಂದಿ ವಿರುದ್ದ ದಾಂದಲೆ ಪ್ರಕರಣ ದಾಖಲಾಗಿದ್ದು ಇದಕ್ಕೆ ಚಾಮುಂಡೇಶ್ವರ ಕ್ಷೇತ್ರದ ಶಾಸಕ ಪುತ್ರನ ವಿರುದ್ದ ಸಹ ಪ್ರತಿದೂರು ದಾಖಲಾಗಿರುವ ಘಟನೆ ಹುಣಸೂರು ಪಟ್ಟಣದಲ್ಲಿ ನಡೆದಿದೆ.
ಏನಿದು ಘಟನೆ?: ಹುಣುಸೂರು ಪಟ್ಟಣದಲ್ಲಿ ಸ್ಥಳೀಯ ಖಾಸಗಿ ಕೇಬಲ್ ಚಾನಲ್ ನಡೆಸುವ ವ್ಯಕ್ತಿಯೂ ನಗರದ ಕಾಂಗ್ರೆಸ್ ಕಟ್ಟಡದಲ್ಲಿ ಬಾಡಿಗೆ ಮಳಿಗೆ ಪಡೆದಿದ್ದು, ಅದರಲ್ಲಿ ಈ ಕೇಬಲ್ ಚಾಲನೆ ಜೊತೆಗೆ ಗೃಹ ಬಳಕೆಯ ವಸ್ತುಗಳ ಮಾರಾಟ ಸಹ ನಡೆಸುತ್ತಿದ್ದು, ಈತ ಜೆಡಿಎಸ್ ಪಕ್ಷದ ಕಾರ್ಯಕ್ರಮಗಳನ್ನ ಮಾತ್ರ ಪ್ರಸಾರ ಮಾಡುತ್ತಾನೆ ಎಂಬ ಹಿನ್ನಲ್ಲೆಯಲ್ಲಿ, ನಿನ್ನೆ ಹುಣುಸೂರು ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ಸೇವಾ ದಳದ ಕಾರ್ಯಕ್ರಮಕ್ಕೆ ಕರೆದರು ಕಾರ್ಯಕ್ರಮ ಮುಗಿದ ನಂತರ ಬಂದಿದ್ದಾನೆ ಎಂದು ಗಲಾಟೆ ಮಾಡಿ ನಂತರ ಕಾಂಗ್ರೆಸ್ ಕಛೇರಿಯ ಕಟ್ಟಡದಲ್ಲಿದ್ದ ಖಾಸಗಿ ಕೇಬಲ್ ಹಾಗೂ ಗೃಹ ಬಳಕೆಯ ವಸ್ತುಗಳನ್ನ ಮಾರಾಟ ಮಾಡುತ್ತಿದ್ದ ಅಂಗಡಿಯ ಬಾಡಿಗೆಯನ್ನ ಕಳೆದ ಕೆಲವು ವರ್ಷಗಳಿಂದ ಕಟ್ಟದೆ ಇದುದ್ದರಿಂದ ಅಂಗಡಿಯನ್ನ ಖಾಲಿ ಮಾಡು ಎಂದು ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ಮಾಡಿದರು ಎಂದು ಇವರ ವಿರುದ್ದ ಸ್ಥಳೀಯ ಕಾಂಗ್ರೆಸ್ ಶಾಸಕ ಹೆಚ್.ಪಿ ಮಂಜುನಾಥ್ ಸೇರಿದಂತೆ ಬೆಂಬಲಿಗರಾದ, ಶಿವಕುಮಾರ್, ರಮೇಶ, ರಘು, ಕುಮಾರ್ ಮತ್ತು ಮಂಜುನಾಥ್ ಎಂಬುವವರ ವಿರುದ್ದ ಅಂಗಡಿಯ ಬಾಡಿಗೆಯ ಮಾಲೀಕ ಹರೀಶ ಎಂಬುವವರು ರಾತ್ರಿ 9 ಗಂಟೆಗೆ ದಾಂದಲೇ ಪ್ರಕರಣವನ್ನ ದಾಖಲಿಸಿದ್ದಾರೆ.
ಜೆಡಿಎಸ್ ಶಾಸಕನ ಮಗನ ವಿರುದ್ದ ಪ್ರತಿದೂರು: ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಪುತ್ರ ಬಾವಿ ಹುಣುಸೂರು ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಎಂದು ಓಡಾಡುತ್ತಿರುವ ಜಿ.ಡಿ ಹರೀಶ್ ಗೌಡ ಅವನ ಕಿತಾಪತಿಯಿಂದ ಕಾಂಗ್ರೆಸ್ ಕಛೇರಿಯ ಕಟ್ಟಡದ ಮಳಿಗೆಗೆ ಬಾಡಿಗೆ ಸಹ ಕಟ್ಟದೆ, ಬಾಡಿಗೆ ಕೇಳಲು ಹೋದ ಕಾಂಗ್ರೆಸ್ ಸ್ಥಳೀಯ ಮುಖಂಡರ ಮೇಲೆ ಹರೀಶ್ ಎಂಟರ್ ಪ್ರೈಸಸ್ ಮಾಲೀಕ ಹರೀಶ, ತಂದೆ ಸ್ಥಳೀಯ ಪತ್ರಕರ್ತ ಸಾಯಿನಾಥ್ ಸೇರಿದಂತೆ ಜೆಡಿಎಸ್ ಶಾಸಕನ ಮಗನ ವಿರುದ್ದವೂ ಕಾಂಗ್ರೆಸ್ ನ ಕುಮಾರ್ ಎಂಬುವವರು ಪ್ರತಿದೂರು ದಾಖಲಿಸಿದ್ದಾರೆ.
2018ರ ವಿಧಾನಸಭಾ ಚುನಾವಣೆಗೆ ಇನ್ನೂ ಒಂದುವರೆ ವರ್ಷ ಭಾಕಿ ಇರುವಾಗಲೇ ಸಿಎಂ ತವರು ಜಿಲ್ಲೆಯಲ್ಲಿ ರಾಜಕೀಯ ಗಲಾಟೆಗಳು ಪ್ರಾರಂಭವಾಗಿದ್ದು, ಇದಕ್ಕೆ ಪತ್ರಕರ್ತರು ಮಧ್ಯವರ್ತಿಗಳಾಗಿದ್ದು ಮಾತ್ರ ದುರಂತವಾಗಿದ್ದು ಇದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ.