ಮೈಸೂರು: ಎಂಟು ವರ್ಷಗಳ ಹಿಂದೆ ಪತ್ನಿಯ ಶೀಲವನ್ನ ಶಂಕಿಸಿ ಪತ್ನಿ ಹಾಗೂ ನಾದಿನಿಯನ್ನ ಕೊಲೆ ಮಾಡಿ ರಾಜಸ್ಥಾನದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನ ಬಂಧಿಸುವಲ್ಲಿ ಉದಯಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತಲೆಮರಸಿಕೊಂಡಿದ್ದ ವ್ಯಕ್ತಿ ಇಸಾಕ್ ಪಾಷಾ(40). ಈತ 2009ನೇ ಮೇ 8ರಂದು ಪತ್ನಿಯ ಶೀಲ ಶಂಕಿಸಿ ಪತ್ನಿ ಸುರಯ್ಯಾ ಬಾನುವನ್ನುಮರಗೆಲಸದ ಹುಳಿಯಿಂದ ಕತ್ತಿನ ಭಾಗಕ್ಕೆ ಹೊಡೆದಿದ್ದ, ಇದನ್ನು ತೆಡೆಯಲು ಮುಂದಾದ ಸುರಯ್ಯಾ ಬಾನು ಸಹೋದರಿ ಸಿದ್ದಿಕಿಬಾನು ಅವರಿಗೂ ತೀವ್ರವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದ. ಗಾಯಳುಗಳನ್ನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲುಮಾಡಲಾಗಿತ್ತು. ನಾಲ್ಕು ದಿನಗಳ ಬಳಿಕೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಸಾವ್ನಪ್ಪಿದರು. ಜೋಡಿ ಕೊಲೆ ಪ್ರಕರಣ ದಾಖಲಿಸಿಕೊಂಡ ಉದಯಗಿರಿ ಪೊಲೀಸರು ಆರೋಪಿ ಪತ್ತೆಗಾಗಿ ವ್ಯಾಪಕ ಶೋಧ ನಡೆಸಿದರೂ ಇಸಾಕ್ ಪಾಷಾ ಪತ್ತೆಯಾಗಿರಲಿಲ್ಲ. ಪತ್ನಿ ಹಾಗೂ ನಾದ್ನಿಗೆ ಹಲ್ಲೆ ಮಾಡಿ ರಾಜಾಸ್ಥಾನಕ್ಕೆ ಪರಾರಿಯಾಗಿದ ಇಸಾಕ್ ಪಾಷಾ ರಾಜಸ್ತಾನಕ್ಕೆ ತೆರಳಿ ತಲೆ ಮರಸಿಕೊಂಡಿದ್ದ. ಆರೋಪಿ ಪತ್ತೆಯಾಗದ ಕಾರಣ ಪ್ರಕರಣವನ್ನು ಪೊಲೀಸರು ಮುಕ್ತಾಯಗೊಳಿಸಿದರು.
ಬೆಂಗಳೂರಿನ ಡಿ.ಜಿ ಹಳ್ಳಿಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ನಿನ್ನೆ ಬರುತ್ತಾನೆಂಬ ಸುಳಿವಿನ ಮೇರೆಗೆ ಉದಯಗಿರಿ ಠಾಣೆಯ ಕ್ರೈಂ ತಂಡದ ಸಿಬ್ಬಂದಿ ಸ್ಥಳದಲ್ಲಿ ಕಾದು ಕುಳಿತಿದ್ದರು. ಇಸಾಕ್ ಪಾಷಾ ಬರುತ್ತಿದ್ದಂತೆಯೇ ಆತನನ್ನು ವಶಕ್ಕೆ ಪಡೆದ ಪೊಲೀಸರು ಮೈಸೂರಿಗೆ ಕರೆತಂದು, ಠಾಣೆಯಲ್ಲಿ ಸುದೀರ್ಘ ವಿಚಾರಣೆ ನಡೆಸಿದಾಗ ಮರಗೆಲಸ ಮಾಡುವ ಆತ ಶೀಲ ಶಂಕಿಸಿ ಪತ್ನಿ ಸುರೆಯ್ಯಾಬಾನು ಹಾಗೂ ನಾದಿನಿ ಸಿದ್ದಿಕ್ಕಿಬಾನು ಅವರನ್ನ ಹುಳಿಯಿಂದ ಕತ್ತಿನ ಭಾಗಕ್ಕೆ ತಿವಿದು ಹಲ್ಲೆ ಮಾಡಿದ್ದಾಗಿ ಒಪ್ಪಿಕೊಂಡ.
ಘಟನೆ ನಂತರ ತಾನು ಪೊಲೀಸರಿಗೆ ಸಿಕ್ಕಿ ಹಾಕಿಕೊಳ್ಳುತ್ತೇನೆ ಎಂಬ ಭಯದಿಂದ ರಾಜಸ್ಥಾನಕ್ಕೆ ತೆರಳಿ ತಲೆ ಮರಸಿಕೊಂಡಿದ್ದಾಗಿ ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾನೆ. ಕೃತ್ಯ ನಡೆಸಿದ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿ ನಂತರ ಕೆ.ಆರ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.