ಮೈಸೂರು: ಮೈಸೂರು ಧರ್ಮಕ್ಷೇತ್ರದ 7ನೆಯ ಬಿಷಪ್ ಆಗಿ ನಿಯೋಜಿತರಾಗಿರುವ ಕೆ.ಎ.ವಿಲಿಯಂ ಅವರ ಧರ್ಮಾಧ್ಯಕ್ಷ ದೀಕ್ಷೆ ಸಮಾರಂಭ ಫೆ. 27ರಂದು ನಡೆಯಲಿದೆ.
ಮೈಸೂರು ಧರ್ಮಕ್ಷೇತ್ರದ ಆಡಳಿತಾಧಿಕಾರಿ ಬಿಷಪ್ ಡಾ.ಥಾಮಸ್ ಆಂಟನಿ ವಾಳಪಿಳ್ಳಿ ಅವರು ಪ್ರಧಾನ ಪ್ರತಿಷ್ಠಾಪಕರಾಗಿ ಸಹ ಪ್ರತಿಷ್ಠಾಪಕರಾಗಿ ಬೆಂಗಳೂರು ಮಹಾಧರ್ಮಕ್ಷೇತ್ರದ ಡಾ.ಬರ್ನಾಡ್ ಮೊರಾಸ್, ಚಿಕ್ಕಮಗಳೂರು ಧರ್ಮಕ್ಷೇತ್ರದ ಡಾ.ಟಿ.ಅಂತೋಣಿಸ್ವಾಮಿ ಅವರ ಸಮ್ಮುಖದಲ್ಲಿ ನೂತನ ಅಧ್ಯಕ್ಷರ ಧರ್ಮಾಧೀಕ್ಷೆ ದೀಕ್ಷೆ ಮತ್ತು ಪೀಠಾರೋಹಣ ಸಮಾರಂಭ ಜರುಗಲಿದೆ.ಮೈಸೂರು ಧರ್ಮಾಧ್ಯಕ್ಷರು ಕೆಥೊಲಿಕ್ ಸಭೆಗೆ ಧಾರ್ಮಿಕ ಗುರುವಾಗಿ ಮೈಸೂರು, ಮಂಡ್ಯ, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು. ಈ ಸಮಾರಂಭಕ್ಕೆ ಸರಿಸುಮಾರು ಇಪ್ಪತೈದು ಧರ್ಮಾಧ್ಯಕ್ಷರು, ಬೇರೆ ಬೇರೆ ಕಡೆಗಳಿಂದ ಸುಮಾರು ಐದು ನೂರು ಧಾರ್ಮಿಕ ಗುರುಗಳು, ಹತ್ತು ಸಾವಿರ ಧಾರ್ಮಿಕ ಸಹೋದರ-ಸಹೋದರಿಯರು ಹಾಗೂ ಭಕ್ತಾದಿಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಡಾ.ಥಾಮಸ್ ಆಂಟನಿ ವಾಳಪಿಳ್ಳಿ ನೂತನ ಬಿಷಪ್ ಆಗಿ ನೇಮಕಗೊಂಡಿರುವ ಕೆ.ಎ.ವಿಲಿಯಂ ಅವರಿಗೆ ಹೂಗುಚ್ಛ ನೀಡಿ ಅಭಿನಂದಿಸಿ ಮಾತನಾಡಿ, ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷನಾಗಿ 14 ವರ್ಷ ಕೆಲಸ ಮಾಡಿದ್ದೇನೆ. ನಮ್ಮ ಧರ್ಮದ ಪ್ರಕಾರ 75 ವರ್ಷ ಪೂರ್ಣಗೊಂಡವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಬೇಕು. ಎಂದಿನಂತೆ ನೂತನ ಬಿಷಪ್ ಅವರಿಗೆ ಸಹಕಾರ ನೀಡುವಂತೆ ಕೋರಿದರು.
ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಫೆ.27ರಂದು ಸಂಜೆ 4.30ಕ್ಕೆ ಸಂತ ಜೋಸೆಫರ ಪ್ರಧಾನ ದೇವಾಲಯದಲ್ಲಿ ಸಮಾರಂಭ ನಡೆಯಲಿದ್ದು, ಬೆಂಗಳೂರಿನ ಮಹಾಧಮರ್ಾಧ್ಯಕ್ಷ ಡಾ.ಬನರ್ಾಡ್ ಮೊರಾಸ್, ಚಿಕ್ಕಮಗಳೂರಿನ ಡಾ.ಅಂತೋಣಿ ಸ್ವಾಮಿ ಪಾಲ್ಗೊಂಡು ಧಾಮರ್ಿಕ ವಿಧಿವಿಧಾನ ನೆರವೇರಿಸಲಿದ್ದಾರೆ ಎಂದರು. ಸಚಿವರುಗಳಾದ ಡಾ.ಹೆಚ್.ಸಿ.ಮಹದೇವಪ್ಪ, ತನ್ವೀರ್ ಸೇಠ್, ಮೇಯರ್ ಎಂ.ಜೆ.ರವಿಕುಮಾರ್, ಮೈಸೂರು ಕೊಡಗು ಸಂಸದ ಪ್ರತಾಪ ಸಿಂಹ ಮೈಸೂರು ಭಾಗದ ಎಂಎಲ್ಎಗಳು ಹಾಗೂ ಎಲ್ಲಾ ರಾಜಕೀಯ ಮುಂಖಂಡರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರ