ಮೈಸೂರು: ಮರಳು ಪರವಾನಿಗೆ ಲಂಚ ಪಡೆಯುವಂತೆ ಒತ್ತಡ ಹೇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಪುತ್ರ ಸುನೀಲ್ ಬೋಸ್ ಇಂದು ಖುದ್ದು ಕೋರ್ಟ್ ಗೆ ಹಾಜರಾಗಿದ್ದು ಪ್ರಕರಣವನ್ನ ಮಾರ್ಚ್ 6ಕ್ಕೆ ಮುಂದೂಡಲಾಗಿದೆ.
ಮರಳು ಗಣಿಗಾರಿಕೆಗೆ ಪರವಾನಿಗೆ ನೀಡಲು ಅಂದಿನ ಹಿರಿಯ ಭೂವಿಜ್ಞಾನಿ ಅಲ್ಫೋಸಿಸ್ಗೆ ಅವರಿಗೆ ಲಂಚ ಪಡೆಯುವಂತೆ ಪ್ರೇರೆಪಣೆ ನೀಡಿದ ಪ್ರಕರಣ ಜಾರ್ಚ್ ಶೀಟ್ ನಲ್ಲಿ ಸಚಿವರ ಪುತ್ರರ ಹೆಸರನ್ನ ಉದ್ದೇಶಪೂರ್ವಕವಾಗಿಯೇ ಕೈಬಿಡಲಾಗಿದೆ, ಆದರಿಂದ ಸುನೀಲ್ ಬೋಸ್ ನನ್ನ ಚಾರ್ಜ್ ಶೀಟ್ ನಲ್ಲಿ ಹೆಸರು ಸೇರಿಸುವಂತೆ ಗುತ್ತಿಗೆದಾರ ಬಸವರಾಜು ಕೋರ್ಟ್ ನಲ್ಲಿ ದೂರು ಸಲ್ಲಿಸಿದರು.
ಈ ದೂರಿನಲ್ಲಿ ಸಾಕ್ಷದಾರಗಳ ಕೊರತೆ ಇದೆ. ಆದ್ದರಿಂದ ನನ್ನ ಹೆಸರನ್ನ ಚಾರ್ಜ್ ಶೀಟ್ ನಲ್ಲಿ ಸೇರಿಸಬಾರದೆಂದು ಸುನೀಲ್ ಬೋಸ್ ತಮ್ಮ ವಕೀಲರ ಮೂಲಕ ಮನವಿ ಸಲ್ಲಿಸಿದರು. ವಿಚಾರಣೆಯನ್ನ ನಡೆಸಿದ ನ್ಯಾಯಮೂರ್ತಿ ಸುದೀಂದ್ರನಾಥ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಾಕ್ಷಿಗಳಿದ್ದು ಸುನೀಲ್ ಬೋಸ್ ಹಾಗೂ ಹಿರಿಯ ಭೂ ವಿಜ್ಞಾನಿ ಅಲ್ಫೋಸಿಸ್ಗೆ ಖುದ್ದು ನ್ಯಾಯಾಲಯಕ್ಕೆ ಫೆಬ್ರವರಿ 27 ರಂದು ಹಾಜರಾಗುವಂತೆ ನ್ಯಾಯಾಮೂರ್ತಿಗಳು ಆದೇಶಗಳು ಹೊರಡಿಸಿದರು. ಈ ಹಿನ್ನಲ್ಲೆಯಲ್ಲಿ ಇಂದು ಸುನೀಲ್ ಬೋಸ್ ನ್ಯಾಯಲಯದ ಕಲಾಪಕ್ಕೆ ಹಾಜರಾಗುತಿದಂತೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾ ಮೂರ್ತಿಗಳಾದ ಸುದೀಂದ್ರನಾಥ್ ಮುಂದೆ ಹಾಜರಾದರು. ಪ್ರಕರಣವನ್ನ ಮಾರ್ಚ್ 6ನೇ ತಾರೀಖಿಗೆ ಮುಂದೂಡಿದ್ದು ಖುದ್ದ ಹಾಜರಾಗುವಂತೆ ತಿಳಿಸಿದ್ದಾರೆ.