ಮೈಸೂರು: ದಕ್ಷಿಣ ವಲಯ ಐಜಿ ನಿವಾಸದಲ್ಲೇ ಪೊಲೀಸ್ ಪೇದೆ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಶೇಷಪ್ಪ(41) ನೇಣಿಗೆ ಶರಣಾದ ಪೊಲೀಸ್ ಪೇದೆ. ನಿನ್ನೆ ಮಧ್ಯಾಹ್ನ ಐಜಿ ನಿವಾಸದಲ್ಲೇ ಶೇಷಪ್ಪ ನೇಣಿಗೆ ಶರಣಾಗಿದ್ದಾರೆ.
ಕಳೆದ 1 ವಾರದಿಂದ ಐಜಿ ವಿಫುಲ್ ಕುಮಾರ್ ನಿವಾಸದಲ್ಲಿ ಕರ್ತವ್ಯ ನಿರತರಾಗಿದ್ದು, ಮೂಲತಃ ಡಿಆರ್ ಪೊಲೀಸ್ ಪೇದೆಯಾಗಿದ್ದರು.
ನಜರ್ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶೇಷಪ್ಪ ಮೃತದೇಹ ಮೈಸೂರಿನ ಕೆಆರ್ ಆಸ್ಪತ್ರೆ ಶವಗಾರಕ್ಕೆ ರವಾನಿಸಲಾಗಿದೆ.