ಮೈಸೂರು: ಮೈಸೂರಿನ ಅಪಾರ್ಟ್ ಮೆಂಟ್ ಹಾಗೂ ಕುವೇಂಪುನಗರದ ಕಛೇರಿ ಮತ್ತು ಚಿಕ್ಕಮಗಳೂರಿನ ಸ್ವಗ್ರಾಮದಲ್ಲಿ ಸೇರಿ ಮೂರು ಕಡೆ ಏಕಕಾಲದಲ್ಲಿ ದಾಳಿ ನಡೆದಿದೆ.
ಮಂಡ್ಯ, ಮಡಿಕೇರಿ, ಚಾಮರಾಜನಗರ, ಹಾಸನ ಹಾಗೂ ಮೈಸೂರು ಜಿಲ್ಲೆಗಳ ಎಸಿಬಿ ಅಧಿಕಾರಿಗಳಿಂದ ಕಾರ್ಯಚರಣೆ ನಡೆದಿದ್ದು, ಮೈಸೂರಿನ ಎರಡುಕಡೆ ಸೇರಿ, ಬೆಂಗಳೂರು, ಚಿಕ್ಕಮಗಳೂರಿನಲ್ಲಿ ಏಕಕಾಲದಲ್ಲಿ ದಾಳಿಯಾಗಿದೆ.
ಮೈಸೂರಿನ ವಿಜಯನಗರದ ಅಪಾರ್ಟ್ ಮೆಂಟ್ ಮನೆ ನಂಬರ್ 303ರಲ್ಲಿ ವಾಸವಾಗಿರುವ ಸೂಪರೆಂಟೆಂಡ್ ಇಂಜಿನಿಯರ್ ಪಿಡಬ್ಳ್ಯೂ ಇಲಾಖೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಹೊಸ ಅಪಾರ್ಟ್ ಮೆಂಟ್ ಕಟ್ಟುತ್ತಿರುವ ರಂಗನಾಥ್ ನಾಯಕ್ ರವರು ಅವರ ಆದಾಯಕ್ಕೂ ಮೀರಿ ಆದಾಯಗಳಿಸಿರುವುದು ಎಸಿಬಿ ಅಧಿಕಾರಿಗಳ ಗಮನಕ್ಕೆ ಬಂದಿದ್ದು ಇಂದು ಬೆಳಿಗಿನ ಜಾವ ಎಸಿಬಿ ಎಸ್ಪಿ ಕವಿತಾ, ಡಿವೈಎಸ್ಪಿ ಗಜೇಂದ್ರ, ಇನ್ಸ್ ಪೇಕ್ಟರ್ ವಿನಯ್, ಅನಿಲ್ ಸೆರಿದಂತೆ ಪ್ರಮುಖ ಎಸಿಬಿ ಅಧಿಕಾರಿಗಳು ಭಾಗಿಯಾಗಿ ಏಕಕಾಲಕ್ಕೆ ಬೆಂಗಳೂರು, ಚಿಕ್ಕಮಗಳೂರಿನಲ್ಲಿ ದಾಳಿ ನಡೆಸಿದ್ದಾರೆ.
ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯಲ್ಲಿ ಸೂಪರೆಂಟೆಂಡ್ ಇಂಜೀನೀಯರ್ ಮೂರು ಜಿಲ್ಲೆಗಳ ಅನುದಾನಕ್ಕೆ ಟಕ್ನಿಕಲ್ ಅಪ್ರೂಲ್ ನೀಡುತ್ತಿದ್ದ ರಂಗನಾಥ ನಾಯ್ಕ ಮಡದಿ ಹೆಸರಲ್ಲಿ ಬೆಂಗಳೂರಿನಲ್ಲಿ ಅಪಾರ್ಟ್ ಮೆಂಟ್ ನಿರ್ಮಾಣ ಸುಮಾರು 60 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ಅಂದಾಜಿಸಲಾಗಿದೆ.