ಮೈಸೂರು: ಬ್ಯಾಂಕ್ ನಿಂದ ಹಣ ಡ್ರಾ ಮಾಡಿಕೊಂಡು ಹೊರಬರುತಿದ್ದ ವ್ಯಕ್ತಿಯ ಗಮನವನ್ನ ಬೇರೆಡೆ ಸೆಳೆದು ಕೈಯ್ಯಲ್ಲಿದ್ದ 7 ಲಕ್ಷ ರೂಪಾಯಿಯ ಹಣದ ಬ್ಯಾಗ್ ನ್ನು ಅಪಹರಿಸಿ ಬೈಕ್ ನಲ್ಲಿ ಪರಾರಿಯಾಗಿರುವ ಘಟನೆ ಚಾಮುಂಡಿಪುರಂ ಎಸ್ ಬಿಐ ಬ್ಯಾಂಕ್ ನಲ್ಲಿ ನಡೆದಿದೆ.
ಯಾದವಗಿರಿ ನಿವಾಸಿ ಪ್ರಸನ್ನ ಎಂಬವರೇ ಹಣ ಕಳೆದುಕೊಂಡವರಾಗಿದ್ದಾರೆ. ಇವರು ಉದ್ಯಮಿಯಾಗಿದ್ದು, ಚಾಮುಂಡಿಪುರಂನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಏಳು ಲಕ್ಷರೂ. ನಗದನ್ನು ಡ್ರಾ ಮಾಡಿಕೊಂಡು ಹೊರಗೆ ತಮ್ಮ ಕಾರಿನ ಕಡೆ ಬರುತ್ತಿದ್ದಂತೆ, ಬೈಕ್ ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ನಿಮ್ಮ ಬ್ಯಾಗಿನಿಂದ ಹಣ ಬೀಳುತ್ತಿದೆ ಎಂದು ಅವರ ಗಮನವನ್ನ ಬೇರೆಡೆ ಸೆಳೆದು ಹಣವನ್ನ ಕಸಿದು ಬೈಕ್ ನಲ್ಲಿ ಪರಾರಿಯಾಗಿದ್ದಾರೆ.
ಈ ಸಂಬಂಧ ಕೆ.ಆರ್.ಠಾಣೆಗೆ ದೂರು ದಾಖಲಿಸಿದ್ದು ಘಟನೆ ನಡೆದ ಸ್ಥಳಕ್ಕೆ ಕೆ.ಆರ್.ಪೊಲೀಸರು ಆಗಮಿಸಿ ಬ್ಯಾಂಕ್ ಹಾಗೂ ಸುತ್ತಮುತ್ತ ಅಳವಡಿಸಿರುವ ಸಿಸಿಟಿವಿ ದೃಶ್ಯವನ್ನ ಪರೀಶಿಲಿಸುತ್ತಿದ್ದಾರೆ.