ಮೈಸೂರು: ನಡೆದಾಡುವ ದೇವರು ಎಂದೇ ಕರೆಯುವ ಕರ್ನಾಟಕ ರತ್ನ, ಪದ್ಮವಿಭೂಷಣ ಡಾ.ಶಿವಕುಮಾರ ಸ್ವಾಮೀಜಿ ಅವರ 110ನೇ ಜನ್ಮದಿನೋತ್ಸವದ ಪ್ರಯುಕ್ತ ಹಮ್ಮಿಕೊಂಡಿರು ರಥಯಾತ್ರೆ ಮಾ.9ರಂದು ಮೈಸೂರು ಜಿಲ್ಲೆಗೆ ಆಗಮಿಸಲಿದ್ದು ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಸಂಚಾರ ನಡೆಸಲಿದೆ.
ಮಾ9 ರಿಂದ 11 ರವರೆಗೆ 3 ದಿನಗಳ ಕಾಲ ಮೈಸೂರು ಜಿಲ್ಲೆ ಮತ್ತು ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಲಿದೆ. ಮಾ.9 ರಂದು ಮೈಸೂರು ಜಿಲ್ಲೆ ಪಿರಿಯಾಪಟ್ಟಣದಿಂದ ಆರಂಭಗೊಂಡು ಕಂಪಲಾಪುರ, ಪಂಚವಳ್ಳಿ, ಹನಗೋಡು, ಹೆಚ್.ಡಿ.ಕೋಟೆ, ಅಣ್ಣೂರು, ಹೊಸಹಳ್ಳಿ, ಹುಣಸೂರು, ಗಾವಡಗೆರೆ ಮಠ, ಕೆ.ಆರ್.ನಗರ, ಬಿಳಿಕೆರೆ, ಈರಪ್ಪನಕೊಪ್ಪಲು, ಇಲವಾಲ, ಹಿನಕಲ್ ಮತ್ತು ವಿಜಯನಗರ ಹಾಗೂ ಮೈಸೂರಿನ ಶಾರದೇವಿನಗರಕ್ಕೆ ಬಂದು ತಲುಪಲಿದೆ. ಮಾ.10 ರಂದು ಬೆಳಿಗ್ಗೆ 7 ಗಂಟೆಗೆ ಶಾರದಾದೇವಿ ನಗರದ ವೃತ್ತದಿಂದ ಹೊರಡಲಿದೆ. ರಥದೊಂದಿಗೆ ಮೇಯರ್ ಎಂ.ಜೆ.ರವಿಕುಮಾರ್, ನಗರದ ವಿವಿಧ ಮಠಾಧೀಶರು, ನಗರದ ಎಲ್ಲಾ ಶಾಸಕರು ಹಾಗೂ ವೀರಶೈವ ಸಮುದಾಯದ ಮುಖಂಡರು 110 ಪೂರ್ಣಕುಂಭದೊಂದಿಗೆ ಸ್ವಾಮೀಜಿಯವರ ರಥೆಯಾತ್ರೆ ನಡೆಯಲಿದೆ.
ಇದೇ ಸಂದರ್ಭದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ವೃತ್ತದ ಬಳಿ ಸಾಂಕೇತಿಕವಾಗಿ ಒಂದು ಸಸಿ ನೆಟ್ಟು, ಮುಂದೆ 110 ಸಸಿ ನೆಡುವ ಕಾರ್ಯಕ್ರಮಯನ್ನು ಚಾಲನೆ ನೀಡಲಾಗುತ್ತದೆ. ನಂತರ ರಥಯಾತ್ರೆ ಮುಂದುವರೆದು ಕುವೆಂಪುನಗರದ ಡಾ.ಶಿವಕುಮಾರಸ್ವಾಮೀಜಿ ವೃತ್ತ, ವಿವೇಕಾನಂದ ವೃತ್ತ, ಅರವಿಂದನಗರದ ಶಿವನ ದೇವಾಲಯ, ಶ್ರೀರಾಂಪುರ, ತಳೂರು ವೃತ್ತ, ತಳೂರು, ಸಿಂಧುವಳ್ಳಿ, ಬ್ಯಾತಳ್ಳಿ, ನೂರೊಂದು ಗಣಪತಿ ವೃತ್ತದಿಂದ ಬಸವೇಶ್ವರ ಪುತ್ಥಳಿ ಮಾರ್ಗವಾಗಿ ರಾಮಾನುಜ ರಸ್ತೆ, ಕಂಸಾಳೆ ಮಹದೇವಯ್ಯ ವೃತ್ತದಿಂದ ಸಂಜೆ ಸುತ್ತೂರು ಮಠ ತಲುಪಲಿದೆ.
ಅಂದು ಸಂಜೆ ಸುತ್ತೂರು ಮಠದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ಸೇಠ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ವಾಸು, ಎಂ.ಕೆ.ಸೋಮಶೇಖರ್ ಸೇರಿದಂತೆ ಈ ಭಾಗದ ಎಲ್ಲಾ ಜನಪ್ರತಿನಿಧಿಗಳು ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ನಂತರ ಮಠದ ಆವರಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ಮಾ.11 ರಂದು ಸುತ್ತೂರು ಮಠದಿಂದ ಹೊರಟು ಗೌರಿಶಂಕರ ನಗರ, ಚಾಮುಂಡಿಪುರಂ, ವಿದ್ಯಾರಣ್ಯಪುರಂ, ಜೆ.ಪಿ.ನಗರ, ಗೆಜ್ಜಗಳ್ಳಿ, ಸಿದ್ಧಾರ್ಥನಗರ, ಜೆಎಸ್ಎಸ್ನಗರ, ಆಲನಹಳ್ಳಿ, ಬನ್ನಹಳ್ಳಿ ಹುಂಡಿ, ಗೆಜ್ಜಗಾನಹಳ್ಳಿ, ಕಾಹಳ್ಳಿ, ಬಿಲಿಗೆರೆ-ಸುತ್ತೂರು ಶ್ರೀಕ್ಷೇತ್ರ, ಕುಪ್ಪರದಳ್ಳಿ, ನಗರ್ಲ್, ನಂಜನಗೂಡು ತಲುಪಿ ಅಲ್ಲಿಂದ ಬೇಗೂರು ಮಾರ್ಗವಾಗಿ ಗುಂಡ್ಲುಪೇಟೆಗೆ ತೆರಳಲಿದೆ.