News Kannada
Friday, December 09 2022

ಮೈಸೂರು

ಬೋನಿಗೆ ಬಿದ್ದ ಹೆಣ್ಣು ಚಿರತೆ

Photo Credit :

ಬೋನಿಗೆ ಬಿದ್ದ ಹೆಣ್ಣು ಚಿರತೆ

ಮೈಸೂರು: ಗ್ರಾಮಗಳಿಗೆ ನುಗ್ಗಿ ರಾತ್ರಿ ಸಮಯದಲ್ಲಿ ಬೀದಿ ನಾಯಿಗಳನ್ನ ಹಿಡಿಯುತ್ತಿದ್ದ ಹೆಣ್ಣು ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿರುವ ಘಟನೆ ವರಕೂಡು ಬಳಿಯ ಆಯರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕಳೆದ ಮೂರು ನಾಲ್ಕು ದಿನಗಳಿಂದ ವರಕೂಡು ಬಳಿಯ ಆಯರಹಳ್ಳಿಗ್ರಾಮದ ಸುತ್ತಮುತ್ತ ರಾತ್ರಿ ಸಮಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತು. ಜೊತೆಗೆ ರಾತ್ರಿ ಬೀದಿ ನಾಯಿಗಳನ್ನ ಹಿಡಿದು ತಿನ್ನುತ್ತಿತು. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆಯವರು ಎರಡು ದಿನಗಳ ಹಿಂದೆ ಆಯರಹಳ್ಳಿಯ ಜವರಪ್ಪ ಎಂಬುವವರ ತೋಟದಲ್ಲಿ ಬೋನ್ ಇಟ್ಟು ಬೋನಿನೊಳಗೆ ನಾಯಿಯನ್ನ ಕಟ್ಟಿ ಹಾಕಿದರು.

ನಾಯಿ ಹಿಡಿಯಲು ರಾತ್ರಿ ಬಂದ ಹೆಣ್ಣು ಚಿರತೆ ಬೋನಿನೊಳಗೆ ಸಿಕ್ಕಿಹಾಕಿಕೊಂಡಿದೆ. ಬೆಳಗ್ಗೆ ಅರಣ್ಯ ಇಲಾಖೆಯವರು ಈ ಹೆಣ್ಣು ಚಿರತೆಯ ಆರೋಗ್ಯವನ್ನ ಪರೀಕ್ಷೆ ಮಾಡಿ ಹೆಚ್.ಡಿ ಕೋಟೆಯ ಕಾಡಿಗೆ ಬಿಡಲಾಗಿದ್ದು ಮೂರು ವರ್ಷದ ಹೆಣ್ಣು ಚಿರತೆ ಈದಾಗಿದ್ದು ಆಹಾರ ಅರಸಿ ಕಾಡಿನಿಂದ ಬಂದಿರುವ ಸಾಧ್ಯತೆ ಇದೆ ಎಂದು ಡಿಸಿಎಫ್ ಕರಿಕಳಾನ್ ತಿಳಿಸಿದ್ದಾರೆ.

See also  ತಮಿಳುನಾಡಿಗೆ ಗಾಂಜಾ ಸಾಗಿಸುತ್ತಿದ್ದವರ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು