ಮೈಸೂರು: ದ್ವಿತೀಯ ಪಿಯುಸಿ ಜೀವಶಾಸ್ತ್ರ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿ ಪರೀಕ್ಷಾ ಕೊಠಡಿಯಲ್ಲೇ ಕುಸಿದು ಬಿದ್ದ ಘಟನೆ ನಗರದ ವಿಜಯವಿಠಲಾ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.
ಕುಸಿದು ಬಿದ್ದ ವಿದ್ಯಾರ್ಥಿ ಸದ್ವಿದ್ಯಾ ಶಾಲೆಯ ಪ್ರೀತಂ ಎನ್ನಲಾಗಿದೆ. ಈತ ಪರೀಕ್ಷೆಗಾಗಿ ರಾತ್ರಿ ಇಡೀ ನಿದ್ದೆಗೆಟ್ಟು ಓದಿದ್ದು ಪರೀಕ್ಷೆ ಬರೆಯುವಾಗಲೇ ತಲೆ ಸುತ್ತಿನಿಂದ ಪರೀಕ್ಷಾ ಕೊಠಡಿಯಲ್ಲೇ ಕುಸಿದು ಬಿದ್ದಿದ್ದಾನೆ ತಕ್ಷಣ ಈತನನ್ನ ಪಕ್ಕದಲ್ಲೇ ಇದ್ದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು ತಂದೆ ತಾಯಿಗಳು ಆಸ್ಪತ್ರೆಗೆ ಧಾವಿಸಿದ್ದು ಯಾವುದೇ ಪ್ರಾಣಪಾಯವಿಲ್ಲ ಎಂದು ವೈದ್ಯರು ಸ್ಪಷ್ಟ ಪಡಿಸಿದ್ದಾರೆ.