ಮೈಸೂರು: ಮೇ 15ರಿಂದ ಬೆಂಗಳೂರು-ಮೈಸೂರು ರೈಲು ಸಂಚಾರ ಆರಂಭಗೊಳ್ಳಲಿದೆ ಎಂದು ಸೌತ್ ವೆಸ್ಟರ್ನ್ ರೈಲ್ವೆ ಜನರಲ್ ಮ್ಯಾನೇಜರ್ ಎ.ಕೆ.ಗುಪ್ತ ತಿಳಿಸಿದರು.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಮದ್ದಿನ ಮನೆ ಸ್ಥಳಾಂತರಿಸಿದ ಜಾಗಕ್ಕೆ ಭೇಟಿ ನೀಡಿದ ಎ.ಕೆ.ಗುಪ್ತ ಮದ್ದಿನ ಮನೆಯನ್ನು ಯಶಸ್ವಿಯಾಗಿ ಸ್ಥಳಾಂತರ ಮಾಡಿರುವ ರೈಲ್ವೆ ವಿಭಾಗದವರ ಕಾರ್ಯವನ್ನು ಶ್ಲಾಘಿಸಿದರು. ಎಪ್ರಿಲ್ ಕೊನೆಯ ವೇಳೆ ಬೆಂಗಳೂರು-ಮೈಸೂರು ಜೋಡಿ ರೈಲ್ವೆ ಹಳಿ ನಿರ್ಮಾಣ ಪೂರ್ಣಗೊಳ್ಳಲಿದ್ದು, ಮಾರ್ಚ್ 15ಕ್ಕೆ ರೈಲು ಸಂಚಾರ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಬೆಂಗಳೂರು ಮೈಸೂರು ರೈಲ್ವೆ ಸಂಚಾರದಲ್ಲಿ ಇದೀಗ 20 ನಿಮಿಷ ಉಳಿತಾಯವಾಗಲಿದೆ. ಮದ್ದಿನ ಮನೆ ಸ್ಥಳಾಂತರ ಅದ್ಭುತ ಸಾಧನೆಯಾಗಿದೆ ಎಂದು ಶ್ಲಾಘಿಸಿದರು.