ಮೈಸೂರು: ಸರಗಳ್ಳತನ ಮಾಡಿ ಜೈಲು ಸೇರಿದ್ದ ಆರೋಪಿ ಜಾಮೀನ ಮೇಲೆ ಹೊರಬಂದು ಮತ್ತೆ ಸರಗಳ್ಳತನ ಮಾಡಿ ಸಿಕ್ಕಿ ಬಿದ್ದಿರುವ ಘಟನೆ ನಗರದ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಂಜ ಆಲಿಯಾಸ್ ಕಳ್ಳ ಮಂಜ ಆಲಿಯಾಸ್ ಬಿಳಿ ಮಂಜ(26)ಎಂಬ ಸರಗಳ್ಳ ಈ ಹಿಂದೆ ಮೈಸೂರು ನಗರದ ವಿವಿದ ಪೊಲೀಸ್ ಠಾಣೆಗಳು, ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣ, ಟಿ.ನರಸೀಪುರ ಮುಂತಾದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 23ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣದಲ್ಲಿ ಸಿಕ್ಕಿ ಬಿದ್ದು ಜೈಲು ಪಾಲಾಗಿದ. ನಂತರ ಜಾಮೀನಿನ ಮೇಲೆ ಹೊರಬಂದು ಸರಗಳ್ಳತನವನ್ನ ಮುಂದುವರೆಸಿದ್ದ.
ಮತ್ತೆ ಸಿಕ್ಕಿಬಿದಿದ್ದೇಗೆ?
ಮಾರ್ಚ್ 3 ರಂದು ಜಿಲ್ಲೆಯ ಹುಣುಸೂರು ಪಟ್ಟಣದ 1,10,000 ಮೌಲ್ಯದ 40 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನ ಕದ್ದು ಪರಾರಿಯಾಗಿದ್ದ. ಇದನ್ನ ಮಾರ್ಚ್ 13ರಂದು ಮೈಸೂರಿನಲ್ಲಿ ಮಾರಲು ಯತ್ನಿಸಿದಾಗ ಪೊಲೀಸರು ಈತನನ್ನ ಬಂಧಿಸಿದರು. ಈತನ ಜೊತೆ ಸಹಾಯ ಮಾಡಿದ ಚಂದನ (24) ಎಂಬುವನನ್ನು ಸಹ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಹೊರಬಂದಿದೆ.
ಈ ಸಂಬಂಧ ಇಬ್ಬರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣೇಶ್ವರ ರಾವ್ ತಿಳಿಸಿದ್ದಾರೆ.