ಮೈಸೂರು: ನಂಜನಗೂಡು ಉಪಚುನಾವಣೆಗೆ ಬಿಜೆಪಿಯ ಅಭ್ಯರ್ಥಿಯಾಗಿ ವಿ.ಶ್ರೀನಿವಾಸ್ ಪ್ರಸಾದ್ ಹಾಗೂ ಕಾಂಗ್ರೆಸ್ ನ ಕೇಶವಮೂರ್ತಿ ನಾಮಪತ್ರವನ್ನ ನಂಜನಗೂಡಿನ ತಾಲೂಕು ಕಛೇರಿಯಲ್ಲಿ ಸಲ್ಲಿಸಿದರು.
ಇಂದು ಸುಡು ಬಿಸಿಲಿನಲ್ಲೂ ಬಿಜೆಪಿ ರಾಜ್ಯಾಧ್ಯಾಕ್ಷ ನೇತೃತ್ವದಲ್ಲಿ ನಂಜನಗೂಡು ಬಿಜೆಪಿ ಕಚೇರಿಯಿಂದ ಸಾವಿರಾರು ಕಾರ್ಯಕರ್ತರೊಂದಿಗೆ ರೋಡ್ ಷೋ ಮೂಲಕ ತಾಲೂಕು ಕಛೇರಿಗೆ ಬಂದು ನಾಮ ಪತ್ರವನ್ನ ಶ್ರೀನಿವಾಸ್ ಪ್ರಸಾದ್ ಸಲ್ಲಿಸಿದರು. ಇವರಿಗೆ ಮಾಜಿ ಸಚಿವ ವಿ.ಸೋಮಣ್ಣ ಹಾಗೂ ಸ್ಥಳೀಯ ಮುಖಂಡರು ಸಾಥ್ ನೀಡಿದರು.
ನಾಮ ಪತ್ರ ಸಲ್ಲಿಸಿ ಮಾತನಾಡಿದ ವಿ.ಶ್ರೀನಿವಾಸ್ ಪ್ರಸಾದ್,ಈ ಚುನಾವಣೆ ಸ್ವಾಭಿಮಾನಿ ವಾರ್ಸ್ ಸ್ ದುರಂಹಾಕರದ ನಡುವೆ ನಡೆಯುತ್ತಿದ್ದು, ಉಪಚುನಾವಣೆಯಲ್ಲಿ ಗೆಲುವು ಸಾಧಿಸಲಿದೆ ಎಂದರು. ಸಿಎಂ ಸಿದ್ದರಾಮಯ್ಯ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬಗ್ಗೆ ಲಘುವಾಗಿ ಮಾತನಾಡಿದ್ದು, ಇಂತಹ ದುರಂಹಕಾರದ ಮಾತುಗಳನ್ನ ಆಡುವುದನ್ನು ಸಿಎಂ ಸಿದ್ದರಾಮಯ್ಯ ಬಿಡಬೇಕು ಎಂದರು.
ರೋಡ್ ಷೋ ನಡೆಸಿದ ಬಿಎಸ್ ಯಡಿಯೂರಪ್ಪ:
ನಾಮ ಪತ್ರ ಸಲ್ಲಿಕಿಗೆ ಮುನ್ನ ನಂಜನಗೂಡು ಬಿಜೆಪಿ ಕಛೇರಿಯಿಂದ ಬಿ.ಎಸ್ ಎಯಡಿಯೂರಪ್ಪ ಶೋಭಾ ಕರದ್ಲಂಜೆ, ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವಸೋಮಣ್ಣ ಅವರು ಶ್ರೀನಿವಾಸ್ ಪ್ರಸಾದ್ ಜೋತೆ ರೋಡ್ ಷೋ ನಡೆಸಿದ್ದು, ಸಾವಿರಾರು ಕಾರ್ಯಕರ್ತರು ರೋಡ್ ಷೋ ನಲ್ಲಿ ಭಾಗವಹಿಸಿದ್ದು ಗೆಲುವು ನಮದೆ ಎಂದು ಬಿಎಸ್ ಯಡಿಯೂರಪ್ಪ ಇದೇ ಸಂಧರ್ಭದಲ್ಲಿ ಹೇಳಿದರು.
ನಂಜನಗೂಡಿನ ಹುಲಹಳ್ಳಿ ಸರ್ಕಲ್ ನಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣೆಗೆಯಲ್ಲಿ ಆಗಮಿಸಿದ ಕಾಂಗ್ರೆಸ್ ಅಭ್ಯರ್ಥಿ ಕಳಲೇ ಕೇಶವಮೂರ್ತಿ ನಂಜನಗೂಡಿನ ತಾಲ್ಲೂಕು ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ, ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ್ ಗೂಂಡುರಾವ್, ಸಂಸದ ಧ್ರುವನಾರಾಯಣ್, ಅಭ್ಯರ್ಥಿ ಹಾಜರಿದ್ದರು.
ಇದೇ ಸಂಧರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಕಳಲೇ ಕೇಶವಮೂರ್ತಿ, ಎರಡು ಬಾರಿ ಜೆಡಿಎಸ್ ನಿಂದ ಸ್ಫರ್ಧಿಸಿ ಅಲ್ಪ ಮತಗಳಿಂದ ಸೋತಿದ್ದೇನೆ. ಈ ಬಾರಿ ಕಾಂಗ್ರೆಸ್ ನಿಂದ ಗೆಲುವು ಸಾಧಿಸುವ ವಿಶ್ವಾಸವಿದೆ. ಜೆಡಿಎಸ್ ನ ಕಾರ್ಯಕರ್ತರು ಈ ಚುನಾವಣೆಯಲ್ಲಿ ನಮಗೆ ಬೆಂಬಲ ಸಿಕ್ಕಿದೆ ಎಂದರು.