ಮೈಸೂರು: ಹೆಲ್ಮಟ್ ಹಾಕೊದ್ರಿಂದ ಪ್ರಾಣ ಉಳಿಯುತ್ತದೆ ಎಂಬುದಕ್ಕೆ ಇಲ್ಲೊಂದು ಸಣ್ಣ ನಿದರ್ಶನ, ಪ್ರತಿದಿನ ಹೆಲ್ಮಟ್ ಹಾಕಿಕೊಂಡು ಕೆಲಸಕ್ಕೆ ಹೋಗುತ್ತಿದ್ದ ಯುವಕ ಹೆಲ್ಮಟ್ ಮರೆತು ಕೆಲಸಕ್ಕೆ ಹೋಗಿ ರಸ್ತೆ ಅಫಘಾತದಲ್ಲಿ ಆಟೋ ಡಿಕ್ಕಿ ಹೊಡೆದು ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಸಾವ್ನಪ್ಪಿರುವ ಘಟನೆ ಕೆ.ಎಂ ದೊಡ್ಡಿಯ ಪೆಟ್ರೊಲ್ ಬಂಕ್ ಬಳಿ ನಡೆದಿದೆ.
ಹೀಗೆ ಮೃತ ಪಟ್ಟ ಯುವಕ ನಂದೀಶ್(28). ಮೈಸೂರಿನಿಂದ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನಲ್ಲಿರುವ ಕೆ.ಎಂ ದೊಡ್ಡಿಯ ಶುಗರ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಪ್ರತಿ ದಿನ ಹೆಲ್ಮಟ್ ಹಾಕಿಕೊಂಡು ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ಹೋಗುತ್ತಿದ್ದ. ನಿನ್ನೆ ರಾತ್ರಿ ಸಮಯ ಮೀರಿದೆ ಎಂದು ಆತುರ ಆತುರವಾಗಿ ಹೆಲ್ಮಟ್ ಮರೆತು ಹೋಗಿದ್ದು ಬೆಳಗ್ಗಿನ ಜಾವ ಕೆಲಸ ಮುಗಿಸಿ ಪೆಟ್ರೊಲ್ ಹಾಕಿಸಿಕೊಳ್ಳಲು ಬಂಕ್ ಗೆ ಹೋಗುವ ತಿರುವಿನಲ್ಲಿ ವೇಗವಾಗಿ ಬಂದ ಗೂಡ್ಸ್ ಆಟೋ ಡಿಕ್ಕಿ ಹೊಡೆದಿದ್ದು ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಭಯಗೊಂಡ ಆಟೋ ಚಾಲಕ ಆಟೋ ಬಿಟ್ಟು ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಕೆ.ಎಂ ದೊಡ್ಡಿ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.