ಮೈಸೂರು: ನಂಜನಗೂಡು ಹಾಗೂ ಗುಂಡ್ಲಪೇಟೆ ಉಪಚುನಾವಣೆಗೆ ಒಂಡೆರೆಡು ಕಡೆ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಪತ್ರಿಕಾಗೋಷ್ಟಿ ನಡೆಸಲು ಎಸ್.ಎಂ ಕೃಷ್ಣ ಅವರನ್ನ ಆಹ್ವಾನಿಸುತ್ತೇವೆ ಎಂದು ಬಿ.ಎಸ್ ಯಡಿಯೂರಪ್ಪ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಮೊನ್ನೆ ಬಿಜೆಪಿ ಸೇರ್ಪಡೆಯಾಗಿ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸುತ್ತಿರುವ ಎಸ್.ಎಂ ಕೃಷ್ಣ ಅವರನ್ನ ಬರಮಾಡಿಕೊಳ್ಳಲು ಪಕ್ಷದ ಅಧ್ಯಕ್ಷನಾಗಿ ನಾನು ಬೆಂಗಳೂರಿಗೆ ತೆರಳುತ್ತಿದ್ದೇನೆ. ಆ ಕಾರಣ ಇಂದು ನಂಜನಗೂಡು ಉಪಚುನಾವಣಾ ಪ್ರಚಾರದಲ್ಲಿ ಪಾಲ್ಗೊಳೂತ್ತಿಲ್ಲ. ನಾಳೆಯಿಂದ ನಂಜನಗೂಡು ಉಪಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತೇನೆ ಎಂದರು.
ಇನ್ನೂ ಉತ್ತರ ಪ್ರದೇಶ ಸಿಎಂ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಟೀಕೆ ಹಾಗೂ ರೆಡ್ಡಿ ಪ್ರಕರಣಗಳು ಖುಲಾಸೆ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಟೀಕೆ ಬಗ್ಗೆ ನೋ ಕಾಮೆಂಟ್ಸ್ ಎಂದ ಬಿಎಸ್ ವೈ ಎಲ್ಲದಕ್ಕೂ ಸೂಕ್ತ ಕಾಲದಲ್ಲಿ ಜನರೇ ಉತ್ತರ ಕೊಡ್ತಾರೆ ಎಂದರು.
ಕೆ.ಎಸ್. ಈಶ್ವರಪ್ಪ ಹಾಗೂ ಜಗದೀಶ್ ಶೆಟ್ಟರ್ ಅಧಿವೇಶನ ಮುಗಿದ ತಕ್ಷಣ ಪ್ರಚಾರಕ್ಕಾಗಿ ಇಲ್ಲಿಯೇ ಬಂದು ಪ್ರಚಾರ ಮಾಡುತ್ತಾರೆ ಎಂದರು.