News Kannada
Monday, September 26 2022

ಮೈಸೂರು

ನಂಜುಂಡೇಶ್ವರನ ರಥ ಶೃಂಗಾರ ಮಾಡುವವರಿಗೆ ಮೊದಲ ಬಾರಿಗೆ ವಿಮೆ ಭಾಗ್ಯ - 1 min read

Photo Credit :

ನಂಜುಂಡೇಶ್ವರನ ರಥ ಶೃಂಗಾರ ಮಾಡುವವರಿಗೆ ಮೊದಲ ಬಾರಿಗೆ ವಿಮೆ ಭಾಗ್ಯ

ಮೈಸೂರು: ದಕ್ಷಿಣಾ ಕಾಶಿ ಖ್ಯಾತಿಯ ನಂಜನಗೂಡಿನ ಪ್ರಸಿದ್ದ ಶ್ರೀಕಂಠೇಶ್ವರಸ್ವಾಮಿಯ ರಥದ ಉಸ್ತುವಾರಿ ವಹಿಸುವ ಜನರಿಗೆ ಮೊದಲ ಬಾರಿಗೆ 2 ಲಕ್ಷ ಮೌಲ್ಯದ ವಿಮೆಯನ್ನ ಮಾಡಿಸಲಾಗಿದೆ.

ಇತ್ತೀಚೆಗೆ ಬಳ್ಳಾರಿಯ ಪ್ರಸಿದ ಕೊಟ್ಟುರು ಜಾತ್ರೆಯಲ್ಲಿ ರಥೋತ್ಸವದ ಸಂದರ್ಭದಲ್ಲಿ ನಡೆದ ಅವಘಡ ಜೊತೆಗೆ ಕಳೆದ ಹಿಂದಿನ ಎರಡು ವರ್ಷಗಳಲ್ಲಿ ನಂಜನಗೂಡಿನ ನಂಜುಡೇಶ್ವರನ ಪಂಚ ರಥೋತ್ಸವ ಸಂಧರ್ಭದಲ್ಲಿ ಅವಘಡಗಳ ಹಿನ್ನಲ್ಲೆಯಲ್ಲಿ ಈ ಬಾರಿ ಏಪ್ರಿಲ್ 7 ರಂದು ನಡೆಯಲಿರುವ ಪಂಚ ರಥೋತ್ಸವದ ಹೊಣೆ ಹೊರುವ ವ್ಯಕ್ತಿಗಳಿಗೆ 2 ಲಕ್ಷ ಮೊತ್ತದ ಅಫಘಾತ ವಿಮೆ ಮಾಡಿಸಲಾಗಿದೆ.

ಏಪ್ರಿಲ್ 7 ರಂದು ಜರಗುವ ಗೌಥಮಿ ಮಹಾ ರಥೋತ್ಸವದ ವೇಳೆ ರಥವನ್ನ ಶೃಂಗರಿಸುವ ಹೊಣೆ ಹೊತ್ತಿರುವ ನಂಜನಗೂಡು ತಾಲೂಕಿನ ಮುಳ್ಳೂರು, ಗೀಕಳ್ಳಿಹುಂಡಿ, ಗೋಳೂರು, ದೇವರಸನಹಳ್ಳಿ, ಶ್ರೀರಾಪುರ, ಶಂಕರ ಪುರ, ಗ್ರಾಮಗಳ ತಲಾ 14 ಮಂದಿ ಸೇರಿದಂತೆ 98 ಗ್ರಾಮಸ್ಥರಿಗೆ ಜೊತೆಗೆ  ರಥೋತ್ಸವದ ಸಂಧರ್ಭದಲ್ಲಿ ರಥ ನಿಯಂತ್ರಣಕ್ಕೆ ಗೊದಮ ಕೊಡುವ 14 ಮಂದಿ ಸೇರಿದಂತೆ 112 ಮಂದಿಗೆ ವಿಮೆ ಪಾಲಿಸಿಯನ್ನ ನೀಡಲಾಗಿದೆ. ಈ ವಿಮೆ ಒಂದು ವರ್ಷಗಳ ಕಾಲ ಜಾರಿಯಲಿರುತ್ತದೆ. ಈ ಸಂದರ್ಭದಲ್ಲಿ ಸಂಭವಿಸುವ ಅವಘಡಗಳಿಗೆ ವಿಮೆಯಿಂದ ಆಸ್ಪತ್ರೆ ವೆಚ್ಚವನ್ನ ಭರಿಸುತ್ತದೆ. ಜೊತೆಗೆ ಅಂಗವೈಕಲ್ಯ ಉಂಟಾದರೆ 2 ಲಕ್ಷ ವಿಮೆಯಿಂದ ಪರಿಹಾರ ಪಡೆದುಕೊಳ್ಳಬಹುದು.

ಸಹಾಯಕರಿಗೆ ಸಮವಸ್ತ್ರ:
ಜಾತ್ರೆಯಲ್ಲಿ ರಥ ಸಂಚರಿಸಲು ನೆರವಾಗುವ ಸಹಾಯಕರಿಗೆ ಸಮವಸ್ತ್ರ ನೀಡಲು ನಿರ್ಧರಿಸಲಾಗಿದೆ. ಸಮವಸ್ತ್ರಧಾರಿಗಳು ಹೊರತು ಪಡಿಸಿ ಉಳಿದವರಿಗೆ ರಥ ಸಂಚರಿಸುವ ವೇಳೆಯಲ್ಲಿ ನಿರ್ಬಂಧ ವಿಧಿಸಲು ಪೊಲೀಸರು ನಿರ್ಧರಿಸಿದ್ದು ಇದು ಭಕ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಬಾರಿ ರಥ ಎಳೆಯಲು 1.8 ಲಕ್ಷ ಅಂದಾಜು ವೆಚ್ಚದ ತೆಂಗಿನ ನಾರಿನಿಂದ ತಯಾರಿಸಿದ 300 ಮೀಟರ್ ಹಗ್ಗವನ್ನ ಖರೀದಿಸಲಾಗಿದೆ ಎನ್ನುತ್ತಾರೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಜಯ ಪ್ರಕಾಶ್.

See also  ಕಳಸಾ ಬಂಡೂರಿ ಜಾರಿಗೆ ಒತ್ತಾಯಿಸಿ ಉರುಳು ಸೇವೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು