News Kannada
Wednesday, October 05 2022

ಮೈಸೂರು

ನಂಜನಗೂಡು ಉಪ ಚುನಾವಣೆ: 50 ಜೀವಂತ ಕೋಳಿ, 68 ಬೆಳ್ಳಿ ಉಡುಗೊರೆ, ಹಣ ವಶಕ್ಕೆ ಪಡೆದ ಅಧಿಕಾರಿಗಳು - 1 min read

Photo Credit :

ನಂಜನಗೂಡು ಉಪ ಚುನಾವಣೆ: 50 ಜೀವಂತ ಕೋಳಿ, 68 ಬೆಳ್ಳಿ ಉಡುಗೊರೆ, ಹಣ ವಶಕ್ಕೆ ಪಡೆದ ಅಧಿಕಾರಿಗಳು

ಮೈಸೂರು: ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಚೆಕ್ಪೋಸ್ಟ್ಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಚುನಾವಣಾಧಿಕಾರಿಗಳು ಬೇರೆ ಬೇರೆ ಪ್ರಕರಣಗಳಲ್ಲಿ 68 ಬೆಳ್ಳಿ ಉಡುಗೊರೆಗಳನ್ನು, ಸುಮಾರು 1 ಲಕ್ಷ ರೂ. ನಗದು, ಹಾಗೂ ಜೀವಂತ ಕೋಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Nanjangud bypolls: 68 silver gift items, 50 live chicken seized from vehicles-1ಕ್ಷೇತ್ರದ ವ್ಯಾಪ್ತಿಯಲ್ಲಿ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆ ವರೆಗೂ ಡಿಸಿ, ಎಸ್ಪಿ, ಹಾಗೂ ಚುನಾವಣಾಧಿಕಾರಿಗಳನ್ನು ಒಳಗೊಂಡ ತಂಡ ಭದ್ರತಾ ವ್ಯವಸ್ಥೆಯನ್ನು, ಚುನಾವಣಾ ಅಕ್ರಮಗಳನ್ನು ತಡೆಯುವಲ್ಲಿ ಅಧಿಕಾರಿಗಳ ಕಾರ್ಯವೈಖರಿ, ಮುಂತಾದ ಅಂಶಗಳನ್ನು ಪರಿಶೀಲಿಸಿದರು. ನಂಜನಗೂಡು ನಗರದ ಹೊರ ವಲಯದಲ್ಲಿರುವ ಕಟ್ವಾಡಿ ಚೆಕ್ಪೋಸ್ಟ್ ಬಳಿ ಮೈಸೂರು ಕಡೆಯಿಂದ ಬೈಕ್ನಲ್ಲಿ ಬರುತ್ತಿದ್ದ ಯುವಕನನ್ನು ಪೊಲೀಸ್ ಅಧೀಕ್ಷಕರಾದ ರವಿ. ಡಿ. ಚನ್ನಣ್ಣನವರ್ ಅವರು ಪರಿಶೀಲಿಸಿದಾಗ, 68 ಬೆಳ್ಳಿ ಉಡುಗೊರೆಗಳು ಪತ್ತೆಯಾಗಿದ್ದು, ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ಚುನಾವಣಾಧಿಕಾರಿ ಜಿ. ಜಗದೀಶ್ ಅವರು ತಿಳಿಸಿದ್ದಾರೆ.

ಕೌಲಂದೆ ಚೆಕ್ಪೋಸ್ಟ್ ಬಳಿ ಇನೋವ ಕಾರನ್ನು ತಪಾಸಣೆ ನಡೆಸಿದಾಗ, ದಾಖಲೆ ಇಲ್ಲದ 1 ಲಕ್ಷ ರೂ. ನಗದು ದೊರೆತಿದೆ. ಇದೇ ಚೆಕ್ಪೋಸ್ಟ್ ಬಳಿ ಟವೆರಾ ಕಾರಿನಲ್ಲಿ 50 ಜೀವಂತ ಕೋಳಿಗಳನ್ನು ಸಾಗಿಸುತ್ತಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಅವರು ತಿಳಿಸಿದ್ದಾರೆ. ಬಾರ್ ಗಳು ಹಾಗೂ ಲಿಕ್ಕರ್ ಮಳಿಗೆಗಳ ಮೇಲೂ ಜಿಲ್ಲಾಧಿಕಾರಿಗಳು ದಾಳಿ ನಡೆಸಿದ್ದು, ಸೋಮವಾರ ಸಂಜೆ 5 ಮಳಿಗೆಗಳ ವಿರುದ್ಧ ಹಾಗೂ ಐವರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೊಬ್ಬ ಮದ್ಯ ಸೇವನೆ ಮಾಡುತ್ತಿದ್ದು, ಇದೇ ವೇಳೆ ಕಂಡು ಬಂದಿದ್ದು, ಈ ಪ್ರಕರಣವನ್ನು ಸಹ ದಾಖಲಿಸಲಾಗಿದೆ. ಪ್ರಕರಣವೊಂದರಲ್ಲಿ 540 ಎಂ.ಎಲ್. ವಿಸ್ಕಿಯನ್ನು ವಶ ಪಡಿಸಿಕೊಳ್ಳಲಾಗಿದೆ  ಎಂದು ಅಬಕಾರಿ ಉಪ ಆಯುಕ್ತರಾದ ಜಗದೀಶ್ ನಾಯಕ್ ಅವರು ತಿಳಿಸಿದ್ದಾರೆ.

ಸಬ್ಸಿಡಿ ಅನಿಲ ಸಂಪರ್ಕವನ್ನು ಬಿಟ್ಟುಕೊಟ್ಟವರಿಗೆ ಪ್ರಧಾನ ಮಂತ್ರಿಗಳು ಧನ್ಯವಾದಗಳನ್ನು ತಿಳಿಸುವ ಪತ್ರಗಳು ತಪಾಸಣೆ ವೇಳೆ ದೊರೆತಿದ್ದು, ಇದನ್ನು ನೀತಿ ಸಂಹಿತೆಯ ಉಲ್ಲಂಘನೆ ಎಂದು ಪರಿಗಣಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ. ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಎಲ್ಲಾ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ರಂದೀಪ್ ಡಿ. ಅವರು ತಿಳಿಸಿದ್ದಾರೆ.                                                 

See also  ಮೈಸೂರಿನಲ್ಲಿ ವೀರಯೋಧರ ಸ್ಮರಣೆ-ಸನ್ಮಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು