ಮೈಸೂರು: ಯಾರಿಗಾದರೂ ಚುನಾವಣೆ ಅಕ್ರಮಗಳಲ್ಲಿ ಡಾಕ್ಟರೇಟ್ ನೀಡುವುದಿದ್ದರೇ ಅದನ್ನ ಯಡಿಯೂರಪ್ಪನವರಿಗೆ ನೀಡಬೇಕೆಂದು ಸಿಎಂ ಸಿದ್ದರಾಮಯ್ಯ ನಂಜನಗೂಡಿನಲ್ಲಿ ಯಡಿಯೂರಪ್ಪನವರಿಗೆ ತಿರುಗೇಟು ನೀಡಿದ್ದಾರೆ.
ನಿನ್ನೆ ಕಾಂಗ್ರೆಸ್ ನವರು ಚುನಾವಣಾ ಅಕ್ರಮ ನಡೆಸುತ್ತಿದ್ದಾರೆ ಎಂದು ಚುನಾವಣಾಧಿಕಾರಿಗಳಿಗೆ ದೂರು ನೀಡಿದ ಹಿನ್ನಲ್ಲೆಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ ಬಿಜೆಪಿಯವರು ಸೋಲಿನ ಹತಾಷೆಯಿಂದ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದು ಇದರಲ್ಲಿ ಯಾವುದೇ ಹುರುಳಿಲ್ಲ. ಪೊಲೀಸರು ನನ್ನ ವಾಹನವನ್ನು ಸಹ ತಪಾಸಣೆ ಮಾಡುತ್ತಿದ್ದಾರೆ. ಇನ್ನೂ ಪೊಲೀಸ್ ವಾಹನಗಳಲ್ಲಿ ಹಣ ಸಾಗಿಸಲು ಸಾಧ್ಯವಿಲ್ಲ. ಏನಿದ್ದರೂ ಬಿಜೆಪಿಯವರ ಇದು ಕೆಲಸ. ಚುನಾವಣಾ ಅಕ್ರಮದಲ್ಲಿ ಯಾರಿಗಾದರೂ ಡಾಕ್ಟರೆಟ್ ನೀಡುವುದಿದ್ದರೆ ಅದನ್ನು ಯಡಿಯೂರಪ್ಪನರಿಗೆ ನೀಡಬೇಕೆಂದು ತಿರುಗೇಟು ನೀಡಿದರು.
ಇನ್ನೂ ನಂಜನಗೂಡು ಉಪಚುನಾವಣೆಯಲ್ಲಿ ಜೆಡಿಎಸ್ ಬೆಂಬಲ ನೀಡುವಂತೆ ಜೆಡಿಎಸ್ ವರಿಷ್ಟ ಹೆಚ್.ಡಿ ದೇವೇಗೌಡ ಅವರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದೇನೆ. ಬೆಂಬಲ ನೀಡುವ ವಿಶ್ವಾಸವಿದೆ ಎಂದರು.
ಇನ್ನೂ ಮದ್ಯಾಹ್ನ 2 ಗಂಟೆಗೆ ನಂಜಗೂಡಿನ ಮುದ್ದಳ್ಳಿ, ನವೀಲೂರು, ಸೂರಳ್ಳಿ, ಕಸುವಿನಹಳ್ಳಿ, ಹಲ್ಲರೆ, ಹಂಬಾಳೆ, ಅಂಗನವಾಳು, ಮಾದಪುರ ಹಾಗೂ ಹೂರ ಗ್ರಾಮಗಳಲ್ಲಿ ರೋಡ್ ಷೋ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಪರ ಸಿಎಂ ಸಿದ್ದರಾಮಯ್ಯ ಮತಯಾಚನೆ ಮಾಡಿದರು.