ಮೈಸೂರು: ಎಲ್ಲಿ ಏನಾಗುತ್ತೋ ಈ ಬಾರಿಯ ಚುನಾವಣೆಯಲ್ಲಿ ಎಂದು ಎಲ್ಲರ ಚಿತ್ತ ನಂಜನಗೂಡು ಗುಂಡ್ಲುಪೇಟೆ ಅತ್ತ ಇತ್ತು. ಪ್ರತಿಷ್ಠೆಯ ಕಣವಾಗಿದ್ದ ನಂಜನಗೂಡಿನಲ್ಲಿ ಮತದಾನ ಶಾಂತಿಯುತವಾಗಿ ನಡೆದಿದ್ದು, ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ನಂಜನಗೂಡು ಚುನಾವಣಾ ಹಿನ್ನೆಲೆಯಲ್ಲಿ ಭಾರಿ ಬಿಗಿ ಪೊಲೀಸ್ ಬಂದೋಬಸ್ತ್ ನ್ನು ರವಿ ಡಿ.ಚನ್ನಣ್ಣನವರ್ ನೇತೃತ್ವದಲ್ಲಿ ಏರ್ಪಡಿಸಲಾಗಿತ್ತು. ಓರ್ವ ಎಸ್ಪಿ ಓರ್ವ ಅಡಿಶನಲ್ ಎಸ್ಪಿ, ಐವರು ಡಿವೈಎಸ್ಪಿಗಳು, 15 ಸರ್ಕಲ್ ಇನ್ಸಪೆಕ್ಟರ್ ಗಳು, 56 ಸಬ್ ಇನ್ಸಪೆಕ್ಟರ್ ಗಳು, 167 ಎಎಸ್ ಐ ಗಳು, 409 ಹೆಡ್ ಕಾನ್ಸ್ ಟೇಬಲ್ ಗಳು, 423 ಕಾನ್ಸ್ ಟೇಬಲ್ ಗಳು ಹಾಗೂ 210 ಹೋಂಗಾರ್ಡ್ ಗಳನ್ನು ನಿಯೋಜಿಸಲಾಗಿತ್ತು.
ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳಿಗೆ ಸಿವಿಲ್ ಪೊಲೀಸ್ ಸಿಬ್ಬಂದಿಗಳನ್ನು, ಅವರ ಜೊತೆ ಹೆಚ್ಚುವರಿ ಅರೆ ಮೀಸಲು ಪಡೆ ಪೊಲೀಸರನ್ನು ನೇಮಿಸಿ ಕಟ್ಟೆಚ್ಚರ ವಹಿಸಿದ್ದರಿಂದ ಶಾಂತಿಯುತ ಮತದಾನ ಸಾಧ್ಯವಾಯಿತು. ಪಾರದರ್ಶಕ ಮತ್ತು ನ್ಯಾಯ ಸಮ್ಮತ ಮತದಾನಕ್ಕೆ ನಂಜನಗೂಡು ವಿಧಾನ ಸಭಾ ಕ್ಷೇತ್ರಾದ್ಯಂತ ಸೂಕ್ತ ಭದ್ರತೆ ಕಲ್ಪಿಸಲಾಗಿತ್ತು. ಎಲ್ಲ ಪೊಲೀಸ್ ಸಿಬ್ಬಂದಿಗಳ ಸಹಕಾರದಿಂದ ಚುನಾವಣೆಯನ್ನು ಶಾಂತಿಯುತವಾಗಿ ನಡೆಸುವುದು ಸಾಧ್ಯವಾಯಿತು ಎಂದರು.
ಈ ಬಾರಿಯ ಎರಡೂ ಕ್ಷೇತ್ರದಲ್ಲಿಯೂ ಚುನಾವಣೆ ಮುಕ್ತಾಯಗೊಂಡಿದ್ದು, ಮತದಾರರು ಯಾರ ಕೈ ಹಿಡಿತುತ್ತಾರೂ ಎಂಬುದನ್ನು ಈ ಫಲಿತಾಂಶ ಮೂಲಕ ಮಾಹಿತಿ ಹೊರಬೀಳಲಿದೆ.