ಮೈಸೂರು: ಅಪ್ರಾಪ್ತ ಯುವಕನನ್ನ 21 ವರ್ಷದ ಯುವತಿ ಪ್ರೀತಿಸಿ ಮನೆಯವರಿಗೆ ತಿಳಿಸದೆ ದೇವಸ್ಥಾನದ ಮದುವೆಯಾಗಿರುವ ಘಟನೆ ನಗರದ ಮಂಡಿ ಮೊಹಲ್ಲಾದಲ್ಲಿ ನಡೆದಿದೆ.
19 ವರ್ಷದ 10 ತಿಂಗಳ ಕುಂಬಾರಕೊಪ್ಪಲಿನ ಯುವಕ ರಘು( ಹೆಸರು ಬದಲಾಯಿಸಲಾಗಿದೆ) 21 ವರ್ಷದ ಮಂಡಿ ಮೊಹಲ್ಲಾದ ಸ್ವಪ್ನ(ಹೆಸರು ಬದಲಾಯಿಸಿಕೊಳ್ಳಲಾಗಿದೆ) ಇಬ್ಬರು ಮದುವೆ ಆದ ಜೋಡಿಯಾಗಿದ್ದು ಇವರಿಬ್ಬರು ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲದೆ ಇಬ್ಬರ ನಡುವೆ ಪ್ರೀತಿ ಬೆಳದು ಮದುವೆಯಾಗಲು ನಿರ್ಧರಿಸಿದ್ದಾರೆ.
ಮದುವೆಯಾಗಲು ನಿರ್ಧರಿಸಿದ ಅಪ್ರಾಪ್ತ ಯುವಕ 21 ವರ್ಷದ ಯುವತಿಯನ್ನ ಮನವೊಲಿಸಿ ಇಬ್ಬರು ಮೂರು ದಿನ ಹೊರಗೆ ಪ್ರವಾಸ ಹೋಗಿದ್ದಾಗ, ಯುವತಿಯೊಂದಿಗೆ ಮೋಜು ಮಸ್ತಿ ನಡೆಸಿದ. ಇದನ್ನ ತಿಳಿದ ಯುವತಿಯ ಮನೆಯವರು ಯುವಕ ಆಪ್ರಾಪ್ತ, ಮದುವೆಯಾಗುವ ವಯಸ್ಸಲ್ಲ ಎಂದು ಬುದ್ಧಿವಾದ ಹೇಳಿದ್ದಾರೆ.
ಇದರಿಂದ ಕೆರಳಿದ ಯುವತಿ ಅಪ್ರಾಪ್ತ ಯುವಕನನ್ನ ಅವರ ಮನೆಗೆ ತಿಳಿಸದೆ ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಸತ್ಯನಾರಾಯಣ ದೇವಸ್ಥಾನದಲ್ಲಿ ಭಾನುವಾರ ಇಬ್ಬರು ಹಾರ ಬದಲಾಯಿಸಿಕೊಂಡು ವಿವಾಹವಾಗಿದ್ದಾರೆ.
ಇದರಿಂದ ಗಾಬರಿಯಾದ ಎರಡು ಮನೆಯವರು ನಗರದ ಮಂಡಿ ಠಾಣೆಗೆ ಬಂದು ದೂರು ನೀಡಲು ಬಂದಾಗ ಈ ಬಗ್ಗೆ ಆಪ್ರಾಪ್ತ ಯುವಕ ಹಾಗೂ ಯುವತಿಯನ್ನ ಕರೆದು ವಿಚಾರಿಸಿದಾಗ ಪೊಲೀಸರಿಗೆ ನಾವಿಬ್ಬರು ಇಷ್ಟ ಪಟ್ಟು ಮದುವೆಯಾಗಿದ್ದೇವೆ ಎಂದು ಹೇಳಿದ್ದು, ಯುವಕ ಅಪ್ರಾಪ್ತನಾಗಿದ್ದು ಈ ಬಗ್ಗೆ ಯುವತಿಯ ಮನೆಯವರು ದೂರು ನೀಡಲು ಬಂದರೂ ಮಗಳ ಭವಿಷ್ಯದ ಭಯದಿಂದ ವಾಪಸ್ಸಾಗಿದ್ದಾರೆ. ಈ ಬಗ್ಗೆ ಪೊಲೀಸರು ದೂರು ನೀಡಿದರೆ ತನಿಖೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.