ಮೈಸೂರು: ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಮೇಲಿನ ಹಲ್ಲೆ ಯತ್ನ, ಕೊಲೆ ಬೆದರಿಕೆಯನ್ನು ಖಂಡಿಸಿ ವಿವಿಧ ದಲಿತ ಸಂಘಟನೆಗಳು, ಜೆ.ಎನ್.ನರ್ಮ್ ಫಲಾನುಭವಿಗಳ ಸಂಘದಿಂದ ಪ್ರತಿಭಟನೆ ನಡೆಸಿದರು.
ನಗರದ ಗಾಂಧಿ ವೃತ್ತದಲ್ಲಿ ಬಳಿ ಜಮಾಹಿಸಿದ ಪ್ರತಿಭಟನಾಕಾರರು ಶಿಕ್ಷಣ ಸಚಿವರಿಗೆ ಬೆದರಿಕೆ ಹಾಕಿರುವುದ ಖಂಡನೀಯ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಅಧ್ಯಕ್ಷ ಶಿವರಾಜು ಮಾತನಾಡಿ ಶಿಕ್ಷಣ ಸಚಿವರು ದಲಿತರ ಕುರಿತು ವಿಶೇಷ ಆಸಕ್ತಿ ಹೊಂದಿರುವವರು, ಆದರ್ಶ ವ್ಯಕ್ತಿ. ಅವರ ಮೇಲಿನ ಹಲ್ಲೆಯತ್ನ ದುರುದ್ದೇಶಪೂರಿತವಾಗಿದೆ. ಸಚಿವರ ತೇಜೋವಧೆ ಮಾಡುವ ಉದ್ದೇಶದಿಂದ ದಲಿತರಿಗೆ ನಿಂದಿಸಿದರೆಂದು ಸುಳ್ಳು ಪ್ರಚಾರ ನಡೆಸಲಾಗಿದ್ದು, ದಲಿತ ಸಂಘಟನೆಯ ಹೆಸರಿನಲ್ಲಿ ದುರುದ್ದೇಶಪೂರ್ವಕವಾಗಿ ಕೊಲೆ ಬೆದರಿಕೆ ಒಡ್ಡಲಾಗಿದ್ದು, ಇದನ್ನು ಖಂಡಿಸುತ್ತೀದ್ದೇವೆ ಎಂದರು.
ಪ್ರತಿಭಟನೆಯಲ್ಲಿ ವಿವಿಧ ಮುಖಂಡರು ಸೇರಿದಂತೆ ಅಧಿಕ ಮಂದಿ ಪಾಲ್ಗೊಂಡಿದ್ದರು.