News Kannada
Saturday, October 01 2022

ಮೈಸೂರು

ಪ್ರಿನ್ಸ್ ಹುಲಿ ಸಾವು: ತನಿಖೆ ಚುರುಕು - 1 min read

Photo Credit :

ಪ್ರಿನ್ಸ್ ಹುಲಿ ಸಾವು: ತನಿಖೆ ಚುರುಕು

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ರಾಯಭಾರಿಯಾಗಿ ಪ್ರವಾಸಿಗರನ್ನು ಸೆಳೆಯುತ್ತಿದ್ದ ಪ್ರಿನ್ಸ್ ಹುಲಿಯ ದುರಂತ ಸಾವು ಈಗ ಹಲವು ಅನುಮಾನಗಳನ್ನು ಹುಟ್ಟುಹಾಕುತ್ತಾ ಸಾಗಿದ್ದು, ಅರಣ್ಯ ಇಲಾಖೆ ಈ ಸಂಬಂಧ ತನಿಖೆಯನ್ನು ತೀವ್ರಗೊಳಿಸಿದೆ.

ಕುಂದಕೆರೆ ವಲಯದಲ್ಲಿ ಏ.2ರಂದು ಪ್ರಿನ್ಸ್ ಹುಲಿಯ ಮೃತದೇಹ ಮುಖದ ಭಾಗ ಕತ್ತರಿಸಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಲ್ಲದೆ ಸಾವಿಗೀಡಾದ ಹುಲಿಯ ಕೆಳದವಡೆ ಮಾಯವಾಗಿದ್ದು, 2 ಕೋರೆ ಹಲ್ಲುಗಳು, ನಾಲಿಗೆ  ಮಾಯವಾಗಿತ್ತು ಇದು ಹಲವು ಸಂಶಯಗಳಿಗೆ ಕಾರಣವಾಗಿತ್ತು. ಈ ಬಗ್ಗೆ  ತೀವ್ರ ಹುಡುಕಾಟ ನಡೆಸಿದ ಅರಣ್ಯ ಸಿಬ್ಬಂದಿಗೆ ಹುಲಿಯ ಮುಖದ ಭಾಗವನ್ನು ಪತ್ತೆ ಮಾಡಿದ್ದರು. ಆದರೆ ಇದು ಪ್ರಿನ್ಸ್ ಮುಖವೋ ಬೇರೊಂದು ಹುಲಿಯದೋ ಎಂಬ ಗೊಂದಲವುಂಟಾಗಿರುವುದರಿಂದ  ಸಿಕ್ಕ ಮುಖಭಾಗದ ಕೂದಲು ಹಾಗೂ ಮೃತ ದೇಹದಲ್ಲಿನ ಕೂದಲುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಅದರ ವರದಿ ಬಂದ ಬಳಿಕವಷ್ಟೆ ಸಂಪೂರ್ಣ ಮಾಹಿತಿ ತಿಳಿಯಲಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆ ಅಧಿಕಾರಿಗಳು ಅಕ್ರಮ ಅರಣ್ಯ ಪ್ರವೇಶ ಮಾಡಿ ಹುಲಿಯ ಮುಖದ ಭಾಗವನ್ನು ದುಷ್ಕರ್ಮಿಗಳು ಕತ್ತರಿಸಿದ್ದಾರಾ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಬಂಡೀಪುರದ ಹುಲಿಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಅರಣ್ಯದ ಒಳಗೆ ಹುಲಿಯು ಸತ್ತು ಆ ಹುಲಿಯ ಭಾಗವನ್ನು ದುಷ್ಕರ್ಮಿಗಳು ಕದ್ದು ಹೋಗಿದ್ದಾರೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿಕೆ ನೀಡಿದ್ದು ಹಾಗಾದರೆ ಅರಣ್ಯದೊಳಗೆ ಪ್ರವೇಶ ಮಾಡಲು ದುಷ್ಕರ್ಮಿಗಳು ಹೇಗೆ ಸಾಧ್ಯವಾಯಿತು ಎಂಬಿತ್ಯಾದಿ ಸಂಶಯಗಳು ಹುಟ್ಟಿಕೊಳ್ಳುತ್ತಿವೆ.

ಈ ನಡುವೆ ಕುಂದಕೆರೆ ಅರಣ್ಯ ವಲಯದ ಎಸಿಎಫ್ ಪೂವಯ್ಯ ಅವರು ಅರಣ್ಯ ಸಿಬ್ಬಂದಿಯ ಕಣ್ಣು ತಪ್ಪಿಸಿ ಅಕ್ರಮವಾಗಿ ಅರಣ್ಯ ಪ್ರವೇಶ ಮಾಡಿ ಹುಲಿಯ ಮುಖದ ಭಾಗವನ್ನು ಕತ್ತರಿಸಿದ್ದ ಆರೋಪಿಗಳ ಸುಳಿವು ಪತ್ತೆಗೆ ಗಂಭೀರವಾಗಿ  ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಇನ್ನೊಂದೆಡೆ ಆರ್ ಎಫ್ಓ ಶಿವಾನಂದ ಮುಗುದುಂ ಅವರು ಸತ್ತಿರುವುದು ಪ್ರಿನ್ಸ್ ಹುಲಿ ಎಂಬುದು ಇನ್ನೂ ದೃಢಪಟ್ಟಿಲ್ಲ. ಸತ್ತಿರುವ ಹುಲಿಯ ಮೂಳೆ ಮತ್ತು ಕೂದಲನ್ನು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಯಲಯಕ್ಕೆ ಕಳುಹಿಸಲಾಗಿರುವುದಾಗಿ ಹೇಳಿದ್ದಾರೆ.

ಒಂದು ವೇಳೆ ಸತ್ತಿರುವುದು ಪ್ರಿನ್ಸ್ ಹುಲಿ ಅಲ್ಲ ಎನ್ನುವುದಾದರೆ ಈಗಾಗಲೇ ಅರಣ್ಯದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಸದ್ಯ ಪ್ರಿನ್ಸ್ ಹುಲಿ ಸಾವಿನ ಪ್ರಕರಣ ದಿನದಿಂದಕ್ಕೆ ಜಟಿಲವಾಗುತ್ತಲೇ ಹೋಗುತ್ತಿರುವುದಂತು ಸತ್ಯ

See also  ಸ್ವಚ್ಛ ಪರಿಸರ ನಿರ್ಮಾಣಕ್ಕೆ ಪೌರ ಕಾರ್ಮಿಕರ ಸಿಂಗಾಪುರ ಪ್ರವಾಸ: ಸಿಎಂ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು