ಮೈಸೂರು: ಮಾಜಿ ಸಚಿವ ಎಸ್.ಎ ರಾಮದಾಸ್ ಮತ್ತು ಪ್ರೇಮಕುಮಾರಿ ನಡುವಿನ ಆರು ಪ್ರಕರಣಗಳಲ್ಲಿ ಎರಡು ಪ್ರಕರಣಗಳನ್ನ ಒಂದೇ ಕೋರ್ಟ್ ನಲ್ಲಿ ನಡೆಸುವಂತೆ ನಗರದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲವೂ ಆದೇಶ ನೀಡಿದೆ.
ರಾಮದಾಸ್ ಹಾಗೂ ಪ್ರೇಮಕುಮಾರಿ ನಡುವಿನ ಪ್ರೇಮ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರು ಪ್ರಕರಣಗಳು ವಿವಿಧ ನ್ಯಾಯಾಗಳಲ್ಲಿ ವಿಚಾರಣೆ ಹಂತದಲ್ಲಿದ್ದು, ಎಲ್ಲಾ ಪ್ರಕರಣಗಳು ಇಬ್ಬರು ವ್ಯಕ್ತಿಗೆ ಸಂಬಂದಿಸಿದರಿಂದ ಒಂದೇ ಕೋರ್ಟ್ ನಲ್ಲಿ ನಡೆಸಬೇಕೆಂದು ಪ್ರೇಮಕುಮಾರಿ ಪರ ವಕೀಲ ಅಮೃತೇಶ್ ಮೈಸೂರಿನ ನ್ಯಾಯಾಲಯಲದಲ್ಲಿ ಅರ್ಜಿ ಸಲ್ಲಿಸಿದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಧೀಶರಾದ ಪಿ.ಜಿ.ಎಂ ಪಾಟೀಲ್ ಆರು ಪ್ರಕರಣಗಳಲ್ಲಿ ಎರಡು ಪ್ರಕರಣಗಳನ್ನ ಒಂದೇ ಕೋರ್ಟ್ ನಲ್ಲಿ ನಡೆಸುವಂತೆ ಆದೇಶ ನೀಡಿದ್ದು, ಉಳಿದ ನಾಲ್ಕು ಪ್ರಕರಣಗಳು ಆಯಾ ಕೋರ್ಟ್ ನಲ್ಲಿ ನಡೆಯಲಿದೆ ಎಂದರು.
ಹೈಕೋರ್ಟ್ ಗೆ ಅರ್ಜಿ:
ಮೈಸೂರು ನ್ಯಾಯಲಯವೂ ಎರಡು ಪ್ರಕರಣಗಳನ್ನ ಮಾತ್ರ ಒಂದೇ ಕೋರ್ಟ್ ನಲ್ಲಿ ವಿಚಾರಣೆ ನಡೆಸುವಂತೆ ನೀಡಿರುವ ತೀರ್ಪನ್ನು ಪ್ರಶ್ನಿಸಿ, ಜೊತೆಗೆ ಆರು ಪ್ರಕರಣಗಳನ್ನ ಒಂದೇ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಂತೆ ಹೈಕೋರ್ಟ್ ನಲ್ಲಿ ಮೇಲರ್ಜಿ ಸಲ್ಲಿಸಲು ಸಿದ್ದತೆ ಮಾಡಿಕೊಂಡಿರುವುದಾಗಿ ವಕೀಲ ಅಮೃತೇಶ್ ತಿಳಿಸಿದ್ದಾರೆ.