ಮೈಸೂರು: ಹೆಂಡತಿಯನ್ನ ಹೆರಿಗಾಗಿ ಆಸ್ಪತ್ರೆಗೆ ದಾಖಲು ಮಾಡಿದ ವ್ಯಕ್ತಿ, ಹೆಂಡತಿಯನ್ನ ನೋಡಲು ಆಸ್ಪತ್ರೆಗೆ ಬೈಕ್ ನಲ್ಲಿ ಬರುವಾಗ ಕೆಎಸ್ಆರ್ ಟಿಸಿ ಬಸ್ ಬೈಕ್ ಮೇಲೆ ಹರಿದ ಪರಿಣಾಮ ರಸ್ತೆಯಲ್ಲೆ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬನ್ನೂರು ರಿಂಗ್ ರಸ್ತೆಯ ವಿಟಿಯು ಪ್ರಾದೇಶಿಕ ಕಛೇರಿಯ ಬಳಿ ನಡೆದಿದೆ.
ಏನಿದು ಘಟನೆ?:
ಹೆರಿಗಾಗಿ ಹೆಂಡತಿಯನ್ನ ಆಸ್ಪತ್ರೆಗೆ ಸೇರಿಸಿದ ಶ್ರೀರಂಗಪಟ್ಟಣದ ತಾಲೂಕಿನ ಹೆಬ್ಬಾಡಿ ಗ್ರಾಮದ ಅಶ್ವಥ (30)ಎಂಬುವವರು ಹೆಂಡತಿಯನ್ನ ನೋಡಲು ರಿಂಗ್ ರಸ್ತೆಯಲ್ಲಿ ಮೈಸೂರಿಗೆ ಬರುತ್ತಿರುವಾಗ ಹಿಂಬದಿಯಿಂದ ಲಾರಿಯೊಂದು ಕೆಎಸ್ಆರ್ ಟಿಸಿ ಬಸ್ ಗೆ ಡಿಕ್ಕಿ ಹೊಡೆದಿದ್ದು ನಿಯಂತ್ರಣದ ತಪ್ಪಿದ ಕೆಎಸ್ಆರ್ ಟಿಸಿ ಬಸ್ ಮುಂದೆ ಹೆಂಡತಿಯೊಂದಿಗೆ ಬೈಕ್ ನಲ್ಲಿ ಮಾತನಾಡುತ್ತ ಹೋಗುತ್ತಿದ್ದ ಅಶ್ವಥ ಮೇಲೆ ಹರಿದಿದೆ.
ಹರಿದ ರಭಸಕ್ಕೆ ಅಶ್ವಥ್ ಬಸ್ಸಿನ ಚಕ್ರದ ಅಡಿ ಸಿಲುಕಿ ಸ್ಥಳದಲ್ಲೇ ಸಾವ್ನಪ್ಪಿದ್ದಾನೆ. ಇದೇ ಸಂಧರ್ಭದಲ್ಲಿ ಮುಂಬದಿಯ ಮತ್ತೊಂದು ಬೈಕ್ ಗೆ ಬಸ್ಸ್ ಡಿಕ್ಕಿ ಹೊಡೆದಿದ್ದು ಸಾವರರು ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಸಂಬಂಧ ಸಿದ್ಧಾರ್ಥ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಯಗಳುಗಳನ್ನ ಆಸ್ಪತ್ರೆಗೆ ಸೇರಿಸಿದ್ದು ಸಾರಿಗೆ ಬಸ್ಸ್ ಹಾಗೂ ಲಾರಿ ಡ್ರೈವರ್ ನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.