ಮೈಸೂರು: ಮೈಸೂರು ವಿವಿಯ ಸಂಶೋಧನಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಅನುಮಾನಸ್ಪದ ರೀತಿಯಲ್ಲಿ ರೈಲ್ವೆ ಹಳಿಯ ಮೇಲೆ ಶವ ಪತ್ತೆಯಾಗಿರುವ ಘಟನೆ ಮೈಸೂರು ವಿವಿಯ ಮಹಿಳಾ ಹಾಸ್ಟೆಲ್ ಹಿಂಭಾಗದಲ್ಲಿ ನಡೆದಿದೆ.
ಅನುಮಾನಸ್ಪದವಾಗಿ ಸಾವ್ನಪ್ಪಿರುವ ವ್ಯಕ್ತಿ ಅರುಣ್ (40). ಈತ ಮೈಸೂರು ವಿವಿಯ ಸಂಶೋಧನಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ನಿನ್ನೆ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ನಾಪತ್ತೆಯಾಗಿದ್ದ. ಈತನನ್ನು ಕುಟುಂಬಸ್ಥರು ರಾತ್ರಿಯಿಡಿ ಹುಡುಕಾಟ ನಡೆಸಿದರು.
ಇಂದು ಬೆಳಗ್ಗೆ ಮೈಸೂರು ವಿವಿಯ ಮಹಿಳಾ ಹಾಸ್ಟೆಲ್ ಹಿಂಭಾಗದಲ್ಲಿರುವ ರೈಲ್ವೆ ಹಳಿ ಮೇಲೆ ಕೈಕಟ್ಟದ ರೀತಿಯಲ್ಲಿ ಶವ ಪತ್ತೆಯಾಗಿದ್ದು, ದೂರದಲ್ಲಿ ಈತನ ಕೈ ದೊರಕಿದ್ದು, ಸ್ಥಳಕ್ಕೆ ಸರಸ್ವತಿ ಪುರಂ ಠಾಣೆ ಹಾಗೂ ರೈಲ್ವೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಇದೊಂದು ಕೊಲೆ ಎಂದು ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಹಿನ್ನಲೆಯಲ್ಲಿ ರೈಲ್ವೆ ಪೊಲೀಸರು ಸರಸ್ವತಿಪುರಂ ಠಾಣಾ ಪೊಲೀಸರೊಂದಿಗೆ ತನಿಖೆ ಕೈಗೊಂಡಿದ್ದಾರೆ.