ಮೈಸೂರು: ಕೋರ್ಟ್ ಆದೇಶವಿದ್ದರೂ ಜಾನುವಾರುಗಳನ್ನ ಬಿಡುಗಡೆ ಮಾಡಲು ನಿರಾಕರಿಸಿ ಪಿಂಜರಾಪೋಲ್ ಸಿಬ್ಬಂದಿಯ ಮೇಲೆ ಪೊಲೀಸರ ಸಮ್ಮುಖದಲ್ಲೇ ರೈತರೊಬ್ಬರು ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಏನಿದು ಘಟನೆ?:
ಏಪ್ರಿಲ್ 7ರಂದು ಉದಯಗಿರಿ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ 2 ಗೂಡ್ಸ್ ಆಟೋಗಳಲ್ಲಿ 7 ಜಾನುವಾರುಗಳನ್ನ ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದರು ಎಂದು ಉದಯಗಿರಿ ಪೊಲೀಸರು ಈ ವಾಹನ ಮತ್ತು ಜಾನುವಾರುಗಳನ್ನ ವಶಕ್ಕೆ ಪಡೆದು ಜಾನುವಾರುಗಳನ್ನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಪಿಂಜರಾಪೋಲ್ ಗೆ ಬಿಟ್ಟಿದರು.
ಇದನ್ನ ಪ್ರಶ್ನಿಸಿ ಮೈಸೂರಿನ ನ್ಯಾಯಾಲಕ್ಕೆ ಪಾಂಡವಪುರದ ರೈತ ಶಿವಲಿಂಗೇಗೌಡ ಪ್ರಕರಣ ದಾಖಲಿಸಿದ್ದು, ಮೈಸೂರಿನ 1ನೇ ಸಿಜೆಎಂ ಮತ್ತು ಜೆಎಂಎಫ್ ಸಿ ನ್ಯಾಯಲವೂ 28 ಏಪ್ರಿಲ್ ರಂದು ಜಾನುವಾರುಗಳನ್ನ ಬಿಡುಗಡೆ ಮಾಡುವಂತೆ ಆದೇಶವನ್ನ ಹೊರಡಿಸಿದರು. ಈ ಆದೇಶ ಪ್ರತಿಯನ್ನ ತೆಗೆದುಕೊಂಡು 29ರ ಶನಿವಾರಿ ಮದ್ಯಾಹ್ನ ಪಿಂಜರಪೋಲ್ ಗೆ ಹೋದ ರೈತನಿಗೆ ಪಿಂಜರಪೋಲ್ ಮ್ಯಾನೇಜರ್ ದೇವರಾಜ್ ನಮಗೂ ತಡೆಯಾಜ್ಷೆ ಸಿಕ್ಕಿದೆ. ಹಸುವನ್ನ ಬಿಡಲು ಸಾಧ್ಯವಿಲ್ಲ ಎಂದು ರೈತರೊಂದಿಗೆ ವಾಗ್ವಾದ ನಡೆಸಿದ್ದು, ಕೊನೆಗೆ ಮಾತಿನ ಚಕಮಕಿ ಹೆಚ್ಚಾಗಿ ರೈತರು ಮ್ಯಾನೇಜರ್ ದೇವರಾಜ್ ಮೇಲೆ ಹಲ್ಲೆ ಮಾಡುವಾಗ ಪಕ್ಕದಲ್ಲೇ ಇವರ ಜೊತೆ ಬಂದಿದ್ದ ಉದಯಗಿರಿ ಪೊಲೀಸರು ಇರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪಿಂಜರಪೋಲ್ ಗೆ ತಡೆಯಾಜ್ಞೆ ಸಿಕ್ಕಿಲ್ಲ:
ಹಸುಗಳನ್ನ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದಾರೆ ಎಂದು ಪಿಂಜರಪೋಲ್ ನ ಸಮಿತಿಗೆ ಏಪ್ರಿಲ್ 28ರಂದು ಮದ್ಯಾಹ್ನ ನ್ಯಾಯಾಲಯಕ್ಕೆ ತಕಾರರು ಅರ್ಜಿ ಸಲ್ಲಿಸಿದ್ದು, ಆದರೆ ಬೆಳಗ್ಗೆ ನ್ಯಾಯಾಲಯದಲ್ಲಿ ರೈತನಿಗೆ ಬಿಡುಗಡೆ ಆದೇಶ ಸಿಕ್ಕಿದೆ. ಆದರೆ ಪಿಂಜರಪೋಲ್ ಸಲ್ಲಿಸಿದ ತಕಾರರು ಅರ್ಜಿ ಮೇ7 ರಂದು ವಿಚಾರಣೆಗೆ ಬರಲಿದೆ. ಆದರೆ ಅರ್ಜಿಯನ್ನೆ ತಡೆಯಾಜ್ಞೆ ಎಂದು ರೈತ ಶಿವಲಿಂಗೇಗೌಡನಿಗೆ ತಿಳಿಸಿದ ಹಿನ್ನಲ್ಲೆಯಲ್ಲಿ ಕೋಪಗೊಂಡು ಈ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪಿಂಜರಪೋಲ್ ಸಮಿತಿಯ ಖಜಾಂಜಿ ಮಹೇಂದ್ರ ರೈತರು ಪೊಲೀಸರ ಸಮೂಖದಲ್ಲಿ ಹಲ್ಲೆ ಮಾಡಿದ್ದರೆ. ಈ ಬಗ್ಗೆ ಮಂಗಳವಾರ ನ್ಯಾಯಾಲಯಲ್ಲಿ ದೂರು ಸಲ್ಲಿಸುತ್ತೇವೆ ಎಂದು ಹೇಳಿದರು.