ಮೈಸೂರು: ಮುಸ್ಲೀಮ್ ವಯಕ್ತಿಕ ಕಾನೂನು ವ್ಯಾಪ್ತಿಯಲ್ಲಿ ಮಹಿಳೆಯರ ಹಕ್ಕು ಹಾಗೂ ತ್ರಿವಳಿ ತಲಾಕ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನ ನಗರದ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ಘಟಕವೂ ಹಮ್ಮಿಕೊಂಡಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ನ ಜಿಲ್ಲಾ ಉಪ ಸಂಚಾಲಕಿ ನಾಝಾತ್ ಜಹಾನ್ ತಿಳಿಸಿದರು.
ಕಳೆದ ಏಪ್ರಿಲ್ 23 ರಿಂದ ಮೇ 7 ರ ತನಕ ರಾಜ್ಯಾದ್ಯಂತ ಮನೆ ಮನೆಗಳಲ್ಲಿ ಮುಸ್ಲೀಮ್ ವಯಕ್ತಿಕ ಕಾನೂನಿನಲ್ಲಿ ಮಹಿಳೆಯರಿಗೆ ಇರುವ ಸೌಲಭ್ಯಗಳೇನು, ಹಕ್ಕಗಳೇನು. ಜೊತೆಗೆ ಇತ್ತೀಚೆಗೆ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ತ್ರಿವಳಿ ತಲಾಖ್ ಬಗ್ಗೆ ಇರುವ ತಪ್ಪು ಕಲ್ಪನೆಗಳ ಬಗ್ಗೆ ಮುಸ್ಲೀಮ್ ಮಹಿಳೆಯರಿಗೆ ಮನೆ ಮನೆಗಳಿಗೆ ಹೋಗಿ ಅರಿವು ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಉಪ ಸಂಚಾಲಕಿ ನಾಝಾತ್ ಜಹಾನ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.