ಮೈಸೂರು: ಮೈಸೂರು ಮಹಾನಗರಪಾಲಿಕೆಯಲ್ಲಿನ ಒಂದೊಂದೆ ಹಗರಣಗಳು ಇದೀಗ ಬಯಲಾಗ ತೊಡಗಿವೆ. ಭಾನುವಾರವಷ್ಟೇ ಮೊಬೈಲ್ ಕರೆ ದರಗಳು ಲಕ್ಷಾಂತರ ರೂ. ಬಂದಿದ್ದರಿಂದ 65 ವಾರ್ಡ್ ಸದಸ್ಯರುಗಳ ಮೊಬೈಲ್ ಕರೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮಹಾನಗರಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರು ಸೇರಿದಂತೆ ಒಂಭತ್ತು ಮಂದಿಗೆ ನೀಡಲಾದ ಕಾರಿಗೆ ವರ್ಷಕ್ಕೆ ಎರಡರಿಂದ ಎರಡೂವರೆ ಕೋಟಿ. ಬಾಡಿಗೆ ಕಟ್ಟುವ ವಿಷಯ ಬೆಳಕಿಗೆ ಬಂದಿದೆ.
ಪ್ರತಿ ತಿಂಗಳಿಗೆ 18 ರಿಂದ 20ಲಕ್ಷ ಕಾರು ಬಾಡಿಗೆ ಕಟ್ಟಲಾಗುತ್ತಿದೆ. ಸಾರ್ವಜನಿಕರ ತೆರಿಗೆ ಹಣವನ್ನು ಯಾವ ರೀತಿ ಮಹಾನಗರಪಾಲಿಕೆ ವ್ಯರ್ಥವಾಗಿ ಪೋಲು ಮಾಡುತ್ತಿದೆ ಎಂಬುದಕ್ಕೆ ಇದೇ ಉದಾಹರಣೆಯಾಗಿದೆ. ಇದನ್ನು ಬೆಳಕಿಗೆ ತರುವ ಪ್ರಯತ್ನ ನಡೆಸಿದವರು ಬೇರಾರೂ ಅಲ್ಲ ಪಟ್ಟಣ ಮತ್ತು ನಗರ ಯೋಜನೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ನಂದೀಶ್ ಪ್ರೀತಂ. ಈ ಕುರಿತು ಮಾತನಾಡಿದ ನಂದೀಶ್ ಪ್ರೀತಂ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಯ ಅಧ್ಯಕ್ಷರುಗಳಿಗೆ ಹಾಗೂ ವಿರೊಧ ಪಕ್ಷದ ನಾಯಕರು ಸೇರಿದಂತೆ 9 ಮಂದಿಗೆ ಕಾರನ್ನು ನೀಡಬೇಕು ಎಂದು ಯಾವ ಕಾನೂನು ಹೇಳಿಲ್ಲ. ಅಥವಾ ಯಾವ ಮುನ್ಸಿಪಲ್ ಕಾನೂನಿನಲ್ಲೂ ಈ ಕುರಿತು ಇಲ್ಲ. ನನಗೆ ಫೆಬ್ರವರಿ 5ರಂದು ಕಾರನ್ನು ನೀಡಲಾಗಿತ್ತು. ನಾನೀಗ ಮೇ.2ರಂದು ಕಾರನ್ನು ವಾಪಸ್ ನೀಡಿದ್ದೇನೆ. ಮೂರು ತಿಂಗಳಲ್ಲಿ ಅದರ ಬಾಡಿಗೆ ಎಷ್ಟಾಯಿತು ಎಂಬುದನ್ನು ತಿಳಿಸಿದರೆ ನಾನದನ್ನು ಭರಿಸಲು ಸಿದ್ಧನಿದ್ದೇನೆ. ಆದರೆ ಇದು ಉಳಿದ ಎಂಟು ಮಂದಿಗೂ ಅನ್ವಯವಾಗಬೇಕು ಎಂದರು. ಕಾರನ್ನು ವಾಪಸ್ ನೀಡಿದ ನಂದೀಶ್ ಪ್ರೀತಂ ಆಯುಕ್ತರಿಗೆ ಸರ್ಕಾರಕ್ಕೆ ಪ್ರಸ್ತಾವನೆ ಬರೆದುಕೊಡಿ ಎಂಬುದಾಗಿ ಪತ್ರವನ್ನೂ ನೀಡಿದ್ದಾರೆ.
ಮೈಸೂರು ಮಹಾನಗರಪಾಲಿಕೆಯಲ್ಲಿನ ಒಂದೊಂದೆ ಹಗರಣಗಳು ಇದೀಗ ಬಯಲಾಗತೊಡಗಿವೆ. ಪಾಲಿಕೆಯಲ್ಲಿ ಇನ್ನೂ ಮುಂದಿನ ದಿನಗಳಲ್ಲಿ ಮತ್ಯಾವ ಒಳ ಹಗರಣಗಳು ಬಯಲಾಗುತ್ತೋ ಎಂಬುಂದನ್ನು ಕಾದು ನೋಡಬೇಕಿದೆ.