ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ದೇಶದಲ್ಲೇ ಸ್ವಚ್ಚ ನಗರಿ ಎಂಬ ಹ್ಯಾಟ್ರಿಕ್ ಪಟ್ಟ ಕೈತಪ್ಪಿದ್ದು ನಗರದ ಜನರಿಗೆ ನಿರಾಶೆ ಉಂಟು ಮಾಡಿದ್ದು, ಹ್ಯಾಟ್ರಿಕ್ ಪಟ್ಟ ಕೈ ತಪ್ಪಲು ಕಾರಣವಾದ ಅಂಶಗಳೇನು ಎಂಬ ಹಿನ್ನಲ್ಲೆಯಲ್ಲಿ ಈ ಸ್ಟೋರಿ.
ಸತತವಾಗಿ ಎರಡು ಬಾರಿ ದೇಶದಲ್ಲೇ ಸ್ವಚ್ಚ ನಗರಿ ಎಂಬ ಖ್ಯಾತಿ ಪಡೆದಿದ್ದ, ಮೈಸೂರು ಈ ಬಾರಿ ಸ್ವಚ್ಚ ನಗರಿಯಲ್ಲಿ ಹ್ಯಾಟ್ರಿಕ್ ಪಡೆಯುವ ನಿರೀಕ್ಷೆಯಲ್ಲಿತ್ತು. ಆದರೆ ಈ ಬಾರಿ 5ನೇ ಸ್ಥಾನ ಪಡೆದಿದ್ದು ನಿರಾಶೆಯನ್ನ ಉಂಟು ಮಾಡಿದ್ದು, ಇದಕ್ಕೆ ಹಲವಾರು ಅಂಶಗಳು ಕಾರಣವಾಗಿವೆ.
ಕಾರಣಗಳೇನು?:
1. 2014-15ರಲ್ಲಿ ಮೊದಲ ಬಾರಿಗೆ ಸ್ವಚ್ಚ ನಗರ ಎಂಬ ಖ್ಯಾತಿಯನ್ನ ಪಡೆದ ಸಂಧರ್ಭದಲ್ಲಿ ದೇಶದಲ್ಲಿ 73 ನಗರಗಳು ಸ್ಪರ್ಧೇಯಲ್ಲಿದ್ದು 10 ಲಕ್ಷ ಜನಸಂಖ್ಯೆ ಇರುವ ನಗರಗಳ ನಡುವೆ ಸ್ಪರ್ಧೆ ನಡೆದಿತ್ತು.
2. ನಂತರ 2015-16ರಲ್ಲಿ 10 ಲಕ್ಷ ಜನಸಂಖ್ಯೆಯುಳ್ಳ 400 ನಗರಗಳ ನಡುವೆ ಸ್ಪರ್ಧೇ ನಡೆದು ಮೈಸೂರು ಎರಡನೇ ಬಾರಿಗೆ ಸ್ವಚ್ಚ ನಗರಿ ಪಟ್ಟ ಪಡೆದಿತ್ತು.
3. 2016-17 ರಲ್ಲಿ ದೇಶದಲ್ಲಿ 434 ನಗರಗಳನ್ನ ಸ್ವಚ್ಚನಗರಿ ಸ್ಪರ್ಧೇಗೆ ಆಯ್ಕೆ ಮಾಡಿದ್ದು, ಅದರಲ್ಲಿ 1 ಲಕ್ಷ ಜನಸಂಖ್ಯೆ ಇರುವ ನಗರಗಳನ್ನು ಸಹ ಆಯ್ಕೆ ಮಾಡಿದ್ದು, ಈ ಹಿನ್ನಲ್ಲೆಯಲ್ಲಿ ಈ ಬಾರಿ ಮೈಸೂರಿಗೆ 5ನೇ ಸ್ಥಾನ ಬಂದಿದೆ.
4. ಎಲ್ಲಾಕ್ಕಿಂತ ಮುಖ್ಯವಾಗಿ ಕರ್ನಾಟಕ ರಾಜ್ಯದಲ್ಲಿ ಅತಿ ವೇಗವಾಗಿ ಬೆಳಯುತ್ತಿರುವ ನಗರಗಳ ಸಾಲಿನಲ್ಲಿ ಮೈಸೂರು ಎರಡನೇ ಸಾಲಿನಲ್ಲಿದ್ದು ಬೆಳವಣಿಗೆಯ ವೇಗಕ್ಕೆ ಹಾಗೂ ಜನಸಂಖ್ಯೆ ವೇಗಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರ ಸೌಲಭ್ಯಗಳನ್ನ ನೀಡುತ್ತಿಲ್ಲ.
5. ಸ್ವಚ್ಚತೆಯನ್ನ ಕಾಪಡಲು ಪೌರಕಾರ್ಮಿಕರ ಕೊರತೆಯಿದ್ದು, ಸ್ವಚ್ಚತೆ ಕಾಪಾಡಲು ಆಧುನಿಕ ಪರಿಕರಗಳ ಕೊರತೆಯಿದ್ದು ಸಂಗ್ರಹವಾದ ಕಸವನ್ನ ಸಂಸ್ಕರಿಸಿ ವಿಂಗಡಿಸಿ ಮರು ಉಪಯೋಗಮಾಡುವ ಸಮರ್ಪಕ ವ್ಯವಸ್ಥೆ ಇಲ್ಲ.
6. ಜೊತೆಗೆ ಮೈಸೂರು ನಗರದಲ್ಲಿ ಒಳಚರಂಡಿ ವ್ಯವಸ್ಥೆ ಶೇ 87 ರಷ್ಟು ಮಾತ್ರ ಇದ್ದು, ನಗರದ ಪ್ರಮುಖ ಬಡವಾಣೆಗಳಲ್ಲಿ ಮಾತ್ರ ಸಮರ್ಪಕ ಒಳಚರಂಡಿ ವ್ಯವಸ್ಥೆ ಇದೆ.
7. ಆದರೆ ವೇಗವಾಗಿ ಬೆಳೆಯುತ್ತಿರುವ ಬಡವಾಣೆಗಳಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳು, ಸೌಕರ್ಯಗಳನ್ನ ಒದಗಿಸುವಲ್ಲಿ ಮೈಸೂರು ಮಹಾನಗರ ಪಾಲಿಕೆ ಹಿಂದೆ ಬಿದಿದ್ದು ಇದು ಸಹ ಹ್ಯಾಟ್ರಿಕ್ ಸಾಧನೆಗೆ ಅಡ್ಡಿಯಾಗಿದೆ.
8. ಸ್ವಚ್ಚತ ಆ್ಯಪ್ ಬಳಕೆಯಲ್ಲಿ ವಿಫಲ:
ಕೇಂದ್ರ ಸರ್ಕಾರ ದೇಶದಲ್ಲಿ ಇರುವ ಪ್ರಮುಖ ನಗರಗಳಲ್ಲಿ ಸ್ವಚ್ಚತೆಯ ಬಗ್ಗೆ ದೂರು ಮತ್ತು ಸಮಸ್ಯೆಗಳನ್ನ ಹೇಳಿಕೊಳ್ಳಲು ಅಭಿವೃದ್ದಿ ಪಡಿಸಿರುವ ಮೊಬೈಲ್ ಆ್ಯಪ್ ಬಳಕೆಯಲ್ಲಿ ಮೈಸೂರಿನ ಜನತೆ ನಿರಾಸಕ್ತಿ ತೋರಿದ್ದು ಮತ್ತೊಂದು ಕಾರಣವಾಗಿದ್ದು, ಜೊತೆಗೆ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಲು ಪಾಲಿಕೆಯ ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆಯ ಚುನಾಯಿತ ಸದಸ್ಯರು ನಿರಾಸಕ್ತಿ ತೋರಿದ್ದು ಮತ್ತೊಂದು ಕಾರಣವಾಗಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ನಗರದ ಅಭಿವೃದ್ದಿ ಹಾಗೂ ಮೂಲಭೂತ ಸೌಲಭ್ಯಗಳ ಅಭಿವೃದ್ದಿಗೆ ಬಿಡುಗಡೆಯಾದ ಹಣ ಸಮರ್ಪಕ ರೀತಿಯಲ್ಲಿ ಬಳಕೆಯಾಗದೆ ಉಳಿದಿದ್ದು ಮತ್ತೊಂದು ಕಾರಣವಾಗಿದೆ.
ಈ ಮೇಲಿನ ಎಲ್ಲಾ ಕಾರಣಗಳು ಮೈಸೂರಿಗೆ ಸ್ವಚ್ಚ ನಗರಿ ಎಂಬ ಹ್ಯಾಟ್ರಿಕ್ ಸಾಧನೆ ತಪ್ಪಲು ಕಾರಣವಾಗಿದೆ