ಮೈಸೂರು: ದಾಖಲೆಯ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದ್ದಕ್ಕೆ ತುಂಬ ಸಂತೋಷವಾಗಿದೆ ಎಂದು ರಾಜ ವಂಶಸ್ಥ ಯದೂವೀರ್ ಕೃಷ್ಣದತ್ತಚಾಮರಾಜ ಒಡೆಯರ್ ದಾಖಲೆಗಾಗಿ ಯೋಗ ಕಾರ್ಯಕ್ರಮ ಭಾಗವಹಿಸಿದ ನಂತರ ತಮ್ಮ ಸಂತೋಷ ವ್ಯಕ್ತಪಡಿಸಿದರು.
ನಗರದ ರೇಸ್ ಕೋರ್ಸ್ ಆವರಣದಲ್ಲಿ ಗಿನ್ನಿಸ್ ದಾಖಲೆಗಾಗಿ ಯೋಗ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿ ವೇದಿಕೆಯಲ್ಲಿ ಯೋಗ ಮಾಡಿ ನಂತರ ಮಾಧ್ಯದಮವರ ಜೊತೆ ಮಾತನಾಡಿದ ಯದುವೀರ್, ಈ ದಾಖಲೆಗಾಗಿ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದಕ್ಕೆ ತುಂಬ ಸಂತೋಷವಾಗಿದೆ. ಅದರಲ್ಲೂ ನಮ್ಮ ಮೈಸೂರು ಜನತೆಯ ಜೊತೆಯಲ್ಲಿ ಈ ರೆಕಾರ್ಡ್ ಆಗುತ್ತಿರುವುದು ತುಂಬ ಖುಷಿಕೊಟ್ಟಿದೆ. ಯೋಗ ನಮ್ಮ ಶಕ್ತಿ ಎಂದು ಪ್ರಧಾನಿ ಹೇಳಿದ್ದಾರೆ. ಅದರಂತೆ ನಾವು ಮುಂದುವರೆಯಬೇಕು ಎಂದು ಹೇಳಿದರು.
ಸೆಲ್ಫಿಗೆ ಮುಗಿ ಬಿದ್ದ ಯುವ ಜನತೆ:
ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ವೇದಿಕೆಯಿಂದ ಕೆಳಗೆ ಇಳಿಯುತ್ತಿದ್ದಂತೆ ಯೋಗ ಮಾಡಲು ಬಂದಿದ್ದ ವಿದ್ಯಾರ್ಥಿಗಳು ಹಾಗೂ ಯುವಕರು ಯದೂವೀರ್ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳುಲು ಮುಗಿಬಿದ್ದರು.
ವಿದೇಶಿಯರಿಂದ ಯೋಗ:
3ನೇ ಅಂತಾರಾಷ್ಟ್ರೀಯ ಯೋಗ ದಿನದಂದ ಸಾವಿರಾರು ಮಂದಿ ವಿದೇಶಿಗರು ವಿಶ್ವದಾಖಲೆಯ ಯೋಗದಲ್ಲಿ ಭಾಗವಹಿಸಿದ್ದು ಯೋಗ ಕಲಿಯಲು ಮೈಸೂರಿಗೆ ಬರುವ ವಿದೇಶಿಗರು ಈ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದಕ್ಕೆ ಪ್ರಮಾಣ ಪತ್ರ ಪಡೆದು ಖುಷಿ ಪಟ್ಟು ಗ್ರೂಪ್ ಪೋಟೋ ತೆಗೆಸಿಕೊಂಡದ್ದು ವಿಶೇಷವಾಗಿತ್ತು.