ಮೈಸೂರು: ತಮಟೆ ಸದ್ದಿಗೆ ಹೆದರಿದ ಕುದುರೆ ನಾಡಪ್ರಭು ಕೆಂಪೇಗೌಡ ವೇಷತೊಟ್ಟು ಕೆಂಪೇಗೌಡ ಶೈಲಿಯಲ್ಲಿ ಕತ್ತಿಹಿಡಿದು ಕುದುರೆಯ ಮೇಲೆ ಕುಳಿತಿದ ವ್ಯಕ್ತಿಯನ್ನ ಕೆಳಗೆ ಬೀಳಿಸಿ ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ನಗರದ ಕೆ.ಆರ್ ಸರ್ಕಲ್ ನಲ್ಲಿ ನಡೆದಿದೆ.
ಇಂದು ನಾಡ ಪ್ರಭು ಕೆಂಪೇಗೌಡ ಜಯಂತಿಯನ್ನ ಜಿಲ್ಲಾಡಳಿತಿಯಿಂದ ವತಿಯಿಂದ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದ್ದು, ಅರಮನೆ ಮುಂಭಾಗದಿಂದ ಕಲಾತಂಡಗಳಾದ, ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆಯಲ್ಲಿ ಹೊರಟ ಮೆರವಣೆಗೆ ಕೆ.ಆರ್ ವೃತ್ತ ಬಳಿ ಬಂದಾಗ ತಮಟೆ ಶಬ್ದಕ್ಕೆ ಹೆದರಿದ ಕುದುರೆ ನಾಡ ಪ್ರಭು ಕೆಂಪೇಗೌಡ ವೇಷಾಧಾರಿಯನ್ನ ಕೆಳಗಿ ಬಳಿಸಿ ಕೆಲವು ಕ್ಷಣ ಆತಂಕ ಸೃಷ್ಟಿಸಿತ್ತು. ಆದರೆ ಘಟನೆಯಿಂದ ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ, ಪ್ರಾಣಪಾಯವಾಗಿಲ್ಲ ಸಂಭವಿಸಿಲ್ಲ.