News Kannada
Friday, October 07 2022

ಮೈಸೂರು

ಕಾವೇರಿಯೂ ಮಲಿನ: ನದಿಯ ಪಕ್ಕದಲ್ಲೇ ಹೆಣ ಸುಡುತ್ತಿದ್ದಾರೆ… ಕಣ್ಮುಚಿ ಕುಳಿತ ಅಧಿಕಾರಿಗಳು - 1 min read

Photo Credit :

ಕಾವೇರಿಯೂ ಮಲಿನ: ನದಿಯ ಪಕ್ಕದಲ್ಲೇ ಹೆಣ ಸುಡುತ್ತಿದ್ದಾರೆ… ಕಣ್ಮುಚಿ ಕುಳಿತ ಅಧಿಕಾರಿಗಳು

ಮೈಸೂರು: ಕಾವೇರಿ ನದಿ ದಡದ ಮೇಲಿರುವ ಪವಿತ್ರ ಯಾತ್ರ ಸ್ಥಳ ಹಾಗೂ ಪ್ರವಾಸಿಗರ ತಾಣವಾದ ತಲಕಾಡಿನ ಕಾವೇರಿ ನದಿಯ ಪಕ್ಕದಲ್ಲಿ ಹೆಣಗಳನ್ನ ಸುಡುವ ಮೂಲಕ ಕಾವೇರಿಯನ್ನ ಮಲಿನ ಮಾಡುತ್ತಿದ್ದಾರೆ ಎಂದು ಪ್ರವಾಸಿಗರೊಬ್ಬರು ಹೆಣ ಸುಡುವ ವಿಡಿಯೋ ತೆಗೆದು ಸಾಮಾಜಿಕ ಜಾಲಾತಾಣಗಳನ್ನ ಹರಿಬಿಟ್ಟಿದ್ದಾರೆ.

ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಪವಿತ್ರ ಯಾತ್ರಸ್ಥಳ ತಲಕಾಡು ಕಾವೇರಿ ನದಿಯ ಪಕ್ಕದಲ್ಲೇ ಇದೆ. ಇಂತಹ ಪವಿತ್ರ ಯಾತ್ರ ಸ್ಥಳಕ್ಕೆ ಲಕ್ಷಾಂತರ ಭಕ್ತರು ಹಾಗೂ ಪ್ರವಾಸಿಗರು ಆಗಮಿಸುತ್ತಾರೆ. ಈಗ ಈ ನದಿಯ ಪಕ್ಕದಲ್ಲಿ ಸತ್ತ ವ್ಯಕ್ತಿಯನ್ನ ಸುಟ್ಟರೆ ಅದರ ಅಸ್ತಿಗಳು ನದಿಯಲ್ಲಿ ಹರಿದು ಹೋಗಿ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ಭಾವನೆಯಿಂದ ಈ ಸ್ಥಳವನ್ನ ಹೆಣ ಸುಡುವ ಸ್ಥಳವಾಗಿ ಮಾರ್ಪಡಾಗಿದ್ದು ಇದರಿಂದ ಕಾವೇರಿ ಮಲಿನವಾಗುತ್ತಿದೆ. ಈ ಬಗ್ಗೆ ನಿನ್ನೆ ಪ್ರವಾಸಿಗರೊಬ್ಬರು ಈ ಸ್ಥಳಕ್ಕೆ ಆಗಮಿಸಿದಾಗ ಪಕ್ಕದಲ್ಲೇ ಹೆಣ ಸುಡುತ್ತಿದ್ದನ್ನ ಕಂಡು ಮೊಬೈಲ್ ನಲ್ಲಿ ಚಿತ್ರಕರಿಸಿ ಸಾಮಾಜಿಕ ಜಾಲಾತಾಣಗಳಲ್ಲಿ ಹರಿ ಬಿಟ್ಟಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

See also  ರಾತ್ರಿ ರಹಸ್ಯವಾಗಿ ರಮ್ಯಾ... ಸಿಎಂ ಬೇಟಿಮಾಡಿದ್ದೇಕೆ?
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು