News Kannada
Wednesday, November 30 2022

ಮೈಸೂರು

ಇದು ನನ್ನ ಕೊನೆಯ ಚುನಾವಣೆ ಆಗಬಹುದು…ಸಿಎಂ ಸಿದ್ದರಾಮಯ್ಯ ಮನದಾಳ - 1 min read

Photo Credit :

ಇದು ನನ್ನ ಕೊನೆಯ ಚುನಾವಣೆ ಆಗಬಹುದು...ಸಿಎಂ ಸಿದ್ದರಾಮಯ್ಯ ಮನದಾಳ

ಮೈಸೂರು: ಇದು ನನ್ನ ಕೊನೆಯ ಚುನಾವಣೆ ಆಗಬಹುದು, ಆದರಿಂದ ರಾಜಕೀಯ ಪುನರ್ ಜನ್ಮ ನೀಡಿದ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೇ ಮಾಡುವಂತೆ ಜನರ ಒತ್ತಾಯ, ಆದರೇ ಹೈಕಮಾಂಡ್ ಎಲ್ಲಿ ಹೇಳುತ್ತದೆಯೋ ಅಲ್ಲಿ ಸ್ಪರ್ಧೇ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಕೊನೆಯ ಆಸೆಯನ್ನ ಮಾದ್ಯಮದವರ ಮುಂದೆ ಬಿಚ್ಚಿಟ್ಟರು.

ಇಂದು ಟಿ.ಕೆ ಲೇಔಟ್ ನ ಸಿಎಂ ನಿವಾಸದಲ್ಲಿ ಮಾದ್ಯಮದವರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, 2018ರ ಚುನಾವಣೆ ನನ್ನ ಕೊನೆಯ ಚುನಾವಣೆ ಆಗಬಹುದು. ಹೈಕಮಾಂಡ್ ಎಲ್ಲಿ ಸ್ಪರ್ಧೇ ಮಾಡಲು ಹೇಳುತ್ತದೆಯೋ ಅಲ್ಲಿ ಸ್ಪರ್ಧೇ ಮಡುತ್ತೇನೆ. ಆದರೆ ನನಗೆ ರಾಜಕೀಯ ಪುರ್ನಜನ್ಮ ನೀಡಿದ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೇ ಮಾಡುವಂತೆ ಅಲ್ಲಿನ ಜನರು ಒತ್ತಾಯ ಮಾಡುತ್ತಿದ್ದಾರೆ. ಇದೇ ಕ್ಷೇತ್ರದಿಂದ 5 ಬಾರಿ ಚುನಾವಣೆಯಲ್ಲಿ ಗೆದಿದ್ದೇನೆ. ಜೊತೆಗೆ ವರುಣಾದಿಂದಲೂ ಸ್ಪರ್ಧೇ ಮಾಡುವಂತೆ ಜನರು ಒತ್ತಾಯ ಮಾಡುತ್ತಿದ್ದಾರೆ.
ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧೇ ಮಾಡುತ್ತೇನೆ, ಆದರೆ ಯಾವ ಕ್ಷೇತ್ರ ಎಂದು ತೀರ್ಮಾನ ಮಾಡಿಲ್ಲ ಎಂದು ಹೇಳಿದರು.

ಪರಪ್ಪನ ಅಗ್ರಹಾರದ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಲು ನಿವೃತ್ತ ಐಎಎಸ್ ಅಧಿಕಾರಿ ವಿನಯ ಕುಮಾರ್ ನೇತೃತ್ವದಲ್ಲಿ ತನಿಖೆ ಮಾಡಲು ಈಗಾಗಲೇ ಆದೇಶ ಮಾಡಿದ್ದೇನೆ. ವರದಿ ಬಂದ ನಂತರ ಕ್ರಮ ಕೈಗೊಳ್ಳುತ್ತೇನೆ. ಅದಕ್ಕಿಂತ ಮುಂಚೆ ಈ ವಿಚಾರದಲ್ಲಿ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನೂ ಮಂಗಳೂರಿನಲ್ಲಿ ಶಾಂತಿ ನೆಲಸಿದೆ. ಮಾದ್ಯಮದವರು ಮತ್ತು ರಾಜಕಾರಣಿಗಳು ಸುಮ್ಮನಿದರೆ ಎಲ್ಲವೂ ಸರಿಯಾಗುತ್ತದೆ. ಬಿಜೆಪಿಯವರು ಬೆಂಕಿ ಹಚ್ಚಲು ನೋಡುತ್ತಿದ್ದಾರೆ. ಚುನಾವಣಾ ವರ್ಷ ಏನಾದರು ಮಾಡಿ ಮತಗಳನ್ನ ವಿಭಜನೆ ಮಾಡಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಅದು ಕರ್ನಾಟಕದಲ್ಲಿ ಸಾಧ್ಯವಿಲ್ಲ ಎಂದರು.

ನಾನು ನೂರರಷ್ಟು ಹಿಂದೂ:
ನಾನು ಸಹ ಹಿಂದೂ ನನ್ನ ಹೆಸರು ಸಿದ್ದರಾಮ, ರಾಮ ಎಂದರೆ ಹಿಂದೂ. ಯಡಿಯೂರಪ್ಪ ಒಬ್ಬನೇ ಹಿಂದೂನಾ. ನಾನು ನೂರರಷ್ಟು ಹಿಂದೂ. ಹಿಂದೂ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸವನ್ನ ಬಿಜೆಪಿ ಮಾಡುತ್ತಿದೆ. ಅದಕ್ಕೋಸ್ಕರ ಕರ್ನಾಟಕದಲ್ಲಿ ವಿಸ್ತಾರಕ ಹೆಸರಿನಲ್ಲಿ ಹಿಂದೂತ್ವವನ್ನ ವಿಸ್ತಾರ ಮಾಡಲು ಹೊರಟಿದೆ. ಆದರೆ ಅದು ಉತ್ತರ ಪ್ರದೇಶದಲ್ಲಿ ಆದ ರೀತಿಯಲ್ಲಿ ಕರ್ನಾಟಕದಲ್ಲಿ ಆಗುವುದಿಲ್ಲ. ಅದಕ್ಕೆ ನಾವು ಬೀಡುವುದಿಲ್ಲ ಎಂದರು.

ಇನ್ನೂ ಕೇಂದ್ರದ ಹಣದಲ್ಲಿ ರಾಜ್ಯ ಸರ್ಕಾರ ಯೋಜನೆಗಳನ್ನ ಹೈಜಾಕ್ ಮಾಡಿ ಸಂಸದರಿಗೆ ಕರೆಯುತ್ತಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, ಅವನು ಹೇಳಿದ ದಿನಾಂಕದಲ್ಲಿ ಕಾರ್ಯಕ್ರಮ ನಡೆಸಿಲ್ಲ ಸಾಧ್ಯವಿಲ್ಲ. ಕಾರ್ಯಕ್ರಮದ ದಿನಾಂಕದಂದು ಲೋಕಸಭಾ ಸದಸ್ಯನಾಗಿ ಭಾಗವಹಿಸಬೇಕೆ ವಿನಹ ಈ ರೀತಿ ಕ್ಯಾತೆ ತೆಗೆಯುವುದು ಸರಿಯಲ್ಲ. ಹಣ ಕೇಂದ್ರ ಸರ್ಕಾರದ್ದು ರಾಜ್ಯ ಸರ್ಕಾರದು ಎಂದಿಲ್ಲ. ಎಲ್ಲದೂ ಜನರ ತೆರಿಗೆ ಹಣ. ಇದನ್ನ ಸಂಸದರು ತಿಳಿದುಕೊಳ್ಳಬೇಕು ಎಂದು ತಿರುಗೇಟು ನೀಡಿದರು.

See also  ನಿವೇಶನ ವಿವಾದ: ಕುಡುಗೋಲಿನಿಂದ ಮಾಲೀಕನನ್ನ ಹೊಡೆದು ಕೊಲೆ ಮಾಡಿದ ಮಹಿಳೆಯರು

ಇನ್ನೂ ಕುಮಾರಸ್ವಾಮಿ ಮೊದಲು ಶಾಸಕರಾಗಲಿ ನಂತರ ಸಿಎಂ ಎಂಬ ಹೇಳಿಕೆಗೆ, ಯಾರು ಯಾರಿಂದಲ್ಲೂ ಶಾಸಕರಾಗಲು ಸಾಧ್ಯವಿಲ್ಲ, ಜನರು ಇಷ್ಟವಿದ್ದರೇ ಶಾಸಕರಾಗಿ ಮಾಡುತ್ತಾರೆ ಅವರ ತೀರ್ಮಾನವನ್ನ ನಾವು ಒಪ್ಪಿಕೊಳ್ಳಬೇಕು ಎಂದರು. ಇನ್ನೂ ಮಳೆ ಬೀಳದ ಕಡೆ ಮೋಡ ಬಿತ್ತನೆ ಕಾರ್ಯ ಸರ್ಕಾರ ನಡೆಸಲಿದೆ ಎಂದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು