News Kannada
Sunday, November 27 2022

ಮೈಸೂರು

ಕರ್ನಾಟಕಕ್ಕೆ ಮತ್ತೊಂದು ಧ್ವಜ ಬೇಕಾ…. ಟ್ವೀಟರ್ ನಲ್ಲಿ ಸಿಎಂಗೆ ಪ್ರಶ್ನೆ ಮಾಡಿದ ಸಂಸದ ಪ್ರತಾಪ್ ಸಿಂಹ - 1 min read

Photo Credit :

ಕರ್ನಾಟಕಕ್ಕೆ ಮತ್ತೊಂದು ಧ್ವಜ ಬೇಕಾ.... ಟ್ವೀಟರ್ ನಲ್ಲಿ ಸಿಎಂಗೆ ಪ್ರಶ್ನೆ ಮಾಡಿದ ಸಂಸದ ಪ್ರತಾಪ್ ಸಿಂಹ

ಮೈಸೂರು: ರಾಜ್ಯ ಧ್ವಜದ ಹೊಸ ವಿನ್ಯಾಸ ಮತ್ತು ಕಾನೂನು ಮಾನ್ಯತೆಯ ಬಗ್ಗೆ ವರದಿ ನೀಡಲು ಸಮಿತಿ ರಚನೆ ಬೇಕಿತ್ತಾ ಎಂದು ಸಂಸದ ಪ್ರತಾಪ್ ಸಿಂಹ ತಮ್ಮ ಟ್ವೀಟರ್ ನಲ್ಲಿ ಸಿಎಂಗೆ ಪ್ರಶ್ನೆ ಮಾಡಿ ಟ್ವೀಟ್ ಮಾಡಿದ್ದಾರೆ.

ರಾಜ್ಯ ಧ್ವಜದ ಹೊಸ ವಿನ್ಯಾಸ ಮತ್ತು ಕಾನೂನು ಮಾನ್ಯತೆ ಬಗ್ಗೆ ವರದಿ ನೀಡಲು ರಾಜ್ಯ ಸರ್ಕಾರ 9 ಮಂದಿ ತಜ್ಞರ ಸಮಿತಿಯನ್ನ ರಚನೆ ಮಾಡಿ ಆದೇಶ ಮಾಡಿದೆ. ಇದರಲ್ಲಿ ಕರ್ನಾಟಕದ ಕನ್ನಡದ ಧ್ವಜ ಹಾಗೂ ಅದರ ಬಣ್ಣದ ಬದಲಾವಣೆ ಹಾಗೂ ಈ ಧ್ವಜಕ್ಕೆ ಕಾನೂನು ಮಾನ್ಯತೆ ಕುರಿತು ಕನ್ನಡ ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷರಾಗಿರುವ 9 ಜನರ ತಜ್ಞರ ಸಮಿತಿಯನ್ನ ರಚನೆ ಮಾಡಿ ರಾಜ್ಯ ಸರ್ಕಾರ ಜೂನ್ 6 ರಂದು ಆದೇಶ ಹೊರಡಿಸಿದೆ. ಈ ಸಮಿತಿ ಧ್ವಜದ ವಿನ್ಯಾಸ ಹೇಗಿರಬೇಕು? ಈ ಧ್ವಜಕ್ಕೆ ಕಾನೂನು ಮಾನ್ಯತೆ ಬಗ್ಗೆ ವರದಿ ನೀಡುವಂತೆ ಸಮಿತಿಗೆ ಸರ್ಕಾರ ತಿಳಿಸಿದೆ.

ಈ ವಿಚಾರದ ಬಗ್ಗೆ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ, ತಮ್ಮ ಟ್ವೀಟರ್ ನಲ್ಲಿ ಈಗಾಗಲೇ ಹಳದಿ ಮತ್ತು ಕೆಂಪು ಬಣ್ಣದಿಂದ ಕೂಡಿರುವ ಕನ್ನಡ ಧ್ವಜ ಇದೆ. ಇದನ್ನ ನವೆಂಬರ್ ನಲ್ಲಿ ಹಾರಿಸುತ್ತೇವೆ. ಮತ್ತೊಂದು ಬಣ್ಣದ ಧ್ವಜ ಯಾಕೇ ಬೇಕು ಎಂದು ತಮ್ಮ ಟ್ವೀಟರ್ ನಲ್ಲಿ ಸಿಎಂಗೆ ಪ್ರಶ್ನೆ ಮಾಡಿದ್ದಾರೆ.

See also  ಸರ್ಕಾರ ಕೆಡವಲು ಬಿಜೆಪಿ ವ್ಯರ್ಥ ಪ್ರಯತ್ನ:ಸಿಎಂ ಕುಮಾರಸ್ವಾಮಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು