News Kannada
Thursday, December 01 2022

ಮೈಸೂರು

ಅನಾಥೆಯ ಬಾಳಿನಲ್ಲಿ ಬೆಳಕಾಗಿ ಬಂದ ಯೋಗೇಶ್ - 1 min read

Photo Credit :

ಅನಾಥೆಯ ಬಾಳಿನಲ್ಲಿ ಬೆಳಕಾಗಿ ಬಂದ ಯೋಗೇಶ್

ಮೈಸೂರು: ಕಾಲ ಬದಲಾಗಿದೆ ಎಲ್ಲವನ್ನೂ ಹಣದಿಂದಲೇ ಅಳೆಯಲಾಗುತ್ತಿದೆ ಎಂಬ ಮಾತುಗಳನ್ನು ಆಗಾಗ್ಗೆ ಹೇಳುತ್ತಲೇ ಇರುತ್ತೇವೆ. ಆದರೆ ಇವತ್ತಿಗೂ ಮಾನವೀಯತೆ, ಆದರ್ಶ, ಪ್ರಾಮಾಣಿಕತೆ, ನಿಷ್ಠೆ ಸತ್ತಿಲ್ಲ ಎಂಬುದನ್ನು ಯೋಗೇಶ್ ಎಂಬ ಯುವಕ ಅನಾಥೆ ಮರಿಯಮ್ಮ ಎಂಬಾಕೆಯನ್ನು ವಿವಾಹವಾಗುವ ಮೂಲಕ ತೋರಿಸಿಕೊಟ್ಟಿದ್ದಾರೆ. ಇಂತಹ ವಿವಾಹಕ್ಕೆ ಸಾಕ್ಷಿಯಾಗಿದ್ದು ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ವ್ಯಾಪ್ತಿಯ ಮಹಿಳಾ ನಿಲಯದ  ಆವರಣ. ಗುರುವಾರ ಇಲ್ಲಿ ನಡೆದ ಘಟನೆ ಇತರರಿಗೆ ಮಾದರಿಯಾಗಿದೆ. ಒಳ್ಳೆಯ ಮನಸ್ಸು ಇದ್ದರೆ ಪ್ರೀತಿಯಿಂದ ಜೀವನ ಸಾಗಿಸಲು ತಮಗೆ ಬೇಕಾಗಿರುವುದು ಇಚ್ಛೆಯನ್ನರಿತ ನಡೆವ ಸತಿಯಿದ್ದರೆ ಜೀವನವನ್ನು ಸುಖಮಯವಾಗಿ ಸಾಗಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ನಿವಾಸಿ ಯೋಗೇಶ್ ಅವರು ತಮ್ಮ ಬದುಕಿನಲ್ಲಿ ಏನಾದರೊಂದು ಮಾಡಬೇಕೆಂದು ಬಯಸಿದ್ದರು. ಹೀಗಿರುವಾಗ ಅವರ ಮನದಲ್ಲಿ ಹೊಸ ಆಲೋಚನೆಯೊಂದು ಬಂದಿತ್ತು. ಅದುವೇ ಅನಾಥೆ ಯುವತಿಗೆ ಬಾಳು ನೀಡುವ ಆಲೋಚನೆಯಾಗಿತ್ತು. ಹೀಗಿರುವಾಗ ಅವರು  ವಿಜಯನಗರದ 2ನೇ ಹಂತದ ಮಹಿಳಾ ನಿಲಯವನ್ನು ಸಂಪರ್ಕಿಸಿ ಅಲ್ಲಿ ಆಶ್ರಯ ಪಡೆದಿದ್ದ ಅನಾಥೆ ಮರಿಯಮ್ಮಳನ್ನು ವಿವಾಹವಾಗುವ ಬಯಕೆಯನ್ನು ಮುಂದಿಟ್ಟಿದ್ದಾರೆ. ಅದರಂತೆ ಇಬ್ಬರೂ ಒಬ್ಬರನೊಬ್ಬರು ಇಷ್ಟಪಟ್ಟ ಕಾರಣ ಮದುವೆಗೆ ಕಾನೂನು ಪ್ರಕಾರ ಒಪ್ಪಿಗೆ  ನೀಡಿ ಗುರುವಾರ ವಿವಾಹವನ್ನು ನಿಗದಿಪಡಿಸಲಾಯಿತು.

ಅದರಂತೆ ಮದುವೆ ಮಂಟಪ ನಿರ್ಮಿಸಿ, ಅತಿಥಿಗಳಿಗೆ ಊಟದ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಮಧ್ಯಾಹ್ನ 12:45ರ  ಶುಭ ಮುಹೂರ್ತದಲ್ಲಿ ಯೋಗೇಶ್, ಮರಿಯಮ್ಮಗೆ ತಾಳಿಕಟ್ಟುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮರಿಯಮ್ಮನಿಗೆ ಹೆತ್ತವರಾರು ಇಲ್ಲ. ಈಕೆ ಚಿಕ್ಕ ವಯಸ್ಸಿನಲ್ಲಿ ಹೆತ್ತವರಿಂದ ದೂರವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಸರೆಯಲ್ಲಿ ಬೆಳೆದು, ಬಿಎ ತನಕ ವಿದ್ಯಾಭ್ಯಾಸ ಮಾಡಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಈ ವಿವಾಹಕ್ಕೆ ಮಹಿಳಾ ನಿಲಯದ ಪ್ರಭಾರ ಅಧೀಕ್ಷಕಿ ವೀಣಾ ಶುಭ ಹಾರೈಸಿದ್ದು, ಅಲ್ಪಮಟ್ಟಿನ ಆಥರ್ಿಕ ಸಹಾಯ ಮಾಡುವ ಭರವಸೆ ನೀಡಿದ್ದಾರೆ.

See also  ಒಂದು ಕೋಟಿ ರೂ ಮೌಲ್ಯದ ಒತ್ತುವರಿ ನಿವೇಶನ ಮೂಡ ವಶಕ್ಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು