News Kannada
Tuesday, September 27 2022

ಮೈಸೂರು

ಮೈಸೂರಿನಲ್ಲಿ ಮಳೆ ತಂದ ಆವಾಂತರ - 1 min read

Photo Credit :

ಮೈಸೂರಿನಲ್ಲಿ ಮಳೆ ತಂದ ಆವಾಂತರ

ಮೈಸೂರು: ಮೈಸೂರಿನಲ್ಲಿ ಸೋಮವಾರ ಸಂಜೆಯಿಂದ ಮಂಗಳವಾರ ಬೆಳಗ್ಗೆ ತನಕವೂ ಮಳೆ ಸುರಿದ ಪರಿಣಾಮ ಜನ ಜೀವನ ಅಸ್ತವ್ಯಸ್ತ ಗೊಂಡಿತ್ತಲ್ಲದೆ, ಮನೆಯೊಂದು ಕುಸಿದ ಪರಿಣಾಮ ವ್ಯಕ್ತಿಯೊಬ್ಬ ಸಾವನ್ನಪ್ಪಿದ ದುರ್ಘಟನೆಯೂ ನಡೆದಿದೆ.ಸೋಮವಾರ ಸಂಜೆ ಆರಂಭವಾದ ಮಳೆ ಕೆಲಕಾಲ ರಭಸದಿಂದ ಸುರಿದ ಪರಿಣಾಮ ರಸ್ತೆಗೆ ನೀರು ನುಗ್ಗಿದಲ್ಲದೆ, ತಗ್ಗುಪ್ರದೇಶ ಜಲಾವೃತಗೊಂಡಿತು.

ಚರಂಡಿಯಲ್ಲಿ ನೀರು ತುಂಬಿ ರಸ್ತೆ ಮೇಲೆ ಹರಿದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ತಗ್ಗು ಪ್ರದೇಶಗಳ ಕೆಲ ಮನೆಗಳಿಗೂ ನೀರು ನುಗ್ಗಿತು. ಮಳೆ ಸುರಿದ ಪರಿಣಾಮ ನಗರದ ಗಾಂಧಿನಗರದ ಲಿಡ್ಕರ್ ಕಾಲೋನಿಯ ಮಗ್ಗಿ ಎಂಬಾತನ ಮನೆ ಮಧ್ಯರಾತ್ರಿ ವೇಳೆ ಕುಸಿದು ಬಿದ್ದ ಕಾರಣ ಕಟ್ಟಡದ ಅವಶೇಷಗಳಡಿಯಲ್ಲಿ ಸಿಕ್ಕಿ ಸಾವನ್ನಪ್ಪಿದ್ದಾನೆ. ಈ ಸಂಬಂಧ ಎನ್.ಆರ್.ಮೊಹಲ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾತ್ರಿಯೆಲ್ಲ ಮಳೆ ಸುರಿದ ಪರಿಣಾಮ ಮೈದಾನಗಳಲ್ಲಿ ನೀರು ತುಂಬಿ ಶಾಲಾ ಕಾಲೇಜುಗಳಿಗೆ ಕಾರ್ಯಕ್ರಮ ನಡೆಸಲು ಅಡಚಣೆಯಾಗಿತ್ತು. ಜಿಲ್ಲಾಡಳಿತದ ವತಿಯಿಂದ ಬನ್ನಿಮಂಟಪದ ಪಂಜಿನಕವಾಯತ್ ಮೈದಾನದಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗದೆ  ಧ್ವಜಾರೋಹಣ ನೆರವೇರಿಸಿ ಪಥಸಂಚಲನ ನಡೆಸಲಾಗದೆ ನಿರ್ಗಮಿಸಲಾಯಿತು. ಇದೀಗ ಬಿಸಿಲು ಕಾಣಿಸಿಕೊಂಡಿದ್ದರಿಂದ ಜನ ನೆಮ್ಮದಿಯುಸಿರು ಬಿಟ್ಟಿದ್ದಾರೆ

See also  ಸಿಡಿಮದ್ದಿನ ತಾಲೀಮಿಗೆ ಅರಮನೆ ಫಿರಂಗಿಗಳ ಸಿದ್ಧತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು